ಚಿಕಾಗೋದಲ್ಲಿ ಗುಂಡಿನ ದಾಳಿಗೆ 8 ವರ್ಷದ ಬಾಲಕಿ ಬಲಿ

Social Share

ಚಿಕಾಗೋ, ಜ.24-ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 8 ವರ್ಷದ ಬಾಲಕಿಗೆ ಬಂದೂಕುಧಾರಿಯೊಬ್ಬ ಹಾರಿಸಿದ ಗುಂಡುತಾಗಿ ಸಾವನ್ನಪ್ಪಿರುವ ಘಟನೆ ಚಿಕಾಗೋ ನಗರದ ನೈಋತ್ಯ ಭಾಗದಲ್ಲಿ ನಡೆದಿದೆ. ಮೃತ ಬಾಲಕಿತನ್ನು ಚಿಕಾಗೋದ ಮೆಲಿಸ್ಸಾ ಒರ್ಟೆಗಾ ಎಂದು ಗುರುತಿಸಲಾಗಿದೆ.
ತನ್ನ ತಾಯಿಯೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹತ್ತಿರದ ಅಂಗಡಿಯಿಂದ ಹೊರಬಂದ 26 ವರ್ಷದ ವ್ಯಕ್ತಿ ಗುಂಡು ಹಾರಿಸಿದ ಎಂದು ಪೊಲೀಸ್ ವರದಿ ತಿಳಿಸಿದೆ. ಗಂಭೀರ ಸ್ಥಿತಿಯಲ್ಲಿ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತು ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಂಧನದಲ್ಲಿಲ್ಲಎಂದು ಪೊಲೀಸ್ ಅೀಧಿಕ್ಷಕ ಡೇವಿಡ್ ಬ್ರೌನ್ ಹೇಳಿದ್ದಾರೆ ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ತರುವವರೆಗೂ ಇಲಾಖೆಯು ವಿಶ್ರಮಿಸುವುದಿಲ್ಲ ಎಂದು ಹೇಳಿದರು. ಮೆಲಿಸ್ಸಾಳ ದುರಂತ ಸಾವು ನಮ್ಮ ನಗರವನ್ನು ಬೆಚ್ಚಿಬೀಳಿಸಿದೆ ಎಂದು ಹೇಳಿದ್ದಾರೆ ಮಗುವಿನ ಪ್ರಾಣಕ್ಕೆ ಕುತ್ತು ಬಂದರೆ ಸಾಂತ್ವನ ಹೇಳಲು ಪದಗಳಿಲ್ಲ. ಕುಟುಂಬದ ದುಃಖವನ್ನು ವಿವರಿಸಲು ಪದಗಳಿಲ್ಲ.
ಚಿಕಾಗೋದಲ್ಲಿ ಹತ್ಯಾಕಾಂಡಗಳು ಹೆಚ್ಚುತ್ತಿರುವ ನಡುವೆಯೇ ಗುಂಡಿನ ದಾಳಿ ನಡೆದಿದೆ. ಕಳೆದ ವರ್ಷ ಸುಮಾರು 800 ಜನರ ಹತ್ಯೆಗಳೊಂದಿಗೆ, ಕಾಲು ಶತಮಾನದಲ್ಲಿ ನಗರದ ಅತ್ಯಂತ ಮಾರಕವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Articles You Might Like

Share This Article