ಬೆಂಗಳೂರು,ಜ.2-ಸೇಲಂಗೆ ಹೋಗುತ್ತಿದ್ದ ಕಾರನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಅಡಿಕೆ ಮಂಡಿ ನೌಕರರ ಮೇಲೆ ಹಲ್ಲೆ ಮಾಡಿ 80 ಲಕ್ಷ ಹಣ ದರೋಡೆ ಮಾಡಿದವರು ನಕಲಿ ಪೊಲೀಸರು ಎಂಬುದು ವಿಲ್ಸನ್ಗಾರ್ಡನ್ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪೊಲೀಸರ ವೇಷ ಧರಿಸಿ ಹಣದೊಂದಿಗೆ ಪರಾರಿಯಾಗಿರುವ ಕಿಡಿಗೇಡಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಒಂದು ತಂಡ ಆಂಧ್ರಪ್ರದೇಶಕ್ಕೆ, ಮತ್ತೊಂದು ತಂಡ ತಮಿಳುನಾಡಿಗೆ ಹೋಗಿ ಕಾರ್ಯಾಚರಣೆ ನಡೆಸುತ್ತಿದೆ.
ತುಮಕೂರಿನ ಗುಬ್ಬಿ ತಾಲ್ಲೂಕು ತೆವೆಡೆಹಳ್ಳಿಯ ಅಡಿಕೆ ಮಂಡಿ ಮಾಲೀಕ ಮೋಹನ್ ಎಂಬುವರ ಬಳಿ ಚಾಲಕನಾಗಿ ಕೆಲಸ ಮಾಡುವ ಚಂದನ್ ಮತ್ತು ನೌಕರ ಕುಮಾರಸ್ವಾಮಿ ಡಿ.27ರಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ 80 ಲಕ್ಷ ಹಣದೊಂದಿಗೆ ಕಾರಿನಲ್ಲಿ ಸೇಲಂಗೆ ಹೋಗುತ್ತಿದ್ದರು.
ಮೈಸೂರು ರಸ್ತೆ ಮುಖಾಂತರ ಕೆಎಚ್ರಸ್ತೆ ಜಂಕ್ಷನ್ ಬಳಿ ಬರುತ್ತಿದ್ದಂತೆ ಪೊಲೀಸ್ ಸಮವಸ್ತ್ರ ಧರಿಸಿ ಕಾರಿಗೆ ಪೊಲೀಸ್ ಸ್ಟಿಕ್ಕರ್ ಹಾಕಿಕೊಂಡು ಬಂದ ನಾಲ್ವರು ಇವರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಹಣವಿದ್ದ ಬ್ಯಾಗ್ ಸಮೇತ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ
ಈ ಬಗ್ಗೆ ದರೋಡೆಗೊಳಗಾದ ನೌಕರರು ತಮ್ಮ ಮಾಲೀಕ ಮೋಹನ್ ಅವರಿಗೆ ವಿಷಯ ತಿಳಿಸಿದ್ದು, ಅವರು ವಿಲ್ಸನ್ಗಾರ್ಡನ್ ಠಾಣೆಗೆ ದೂರು ನೀಡಿದ್ದಾರೆ. ಒಬ್ಬ ಸಬ್ಇನ್ಸ್ಪೆಕ್ಟರ್ ಸಮವಸ್ತ್ರ ಧರಿಸಿದ್ದರೆ, ಕಾನ್ಸ್ಟೆಬಲ್ ಸಮವಸ್ತ್ರ ಧರಿಸಿದ್ದ ಮೂವರು ತೆಲುಗು ಭಾಷೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಲಿಂಬಾವಳಿ ವಿರುದ್ಧ ಕಾನೂನು ಪ್ರಕಾರ ತನಿಖೆ : ಸಿಎಂ ಬೊಮ್ಮಾಯಿ
ಅಡಿಕೆ ಮಂಡಿಯ ವಹಿವಾಟು ತಿಳಿದಿರುವವರೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಅಂದು ಖಾಕಿ ಸೋಗಿನಲ್ಲಿ 80 ಲಕ್ಷ ಹಣ ದರೋಡೆ ಮಾಡಿರುವುದು ನಕಲಿ ಪೊಲೀಸರು ಎಂಬುದನ್ನು ಪತ್ತೆಹಚ್ಚಿದ್ದು ಘಟನೆ ನಡೆದ ಸುತ್ತಮುತ್ತಲಿನ ರಸ್ತೆಗಳ ಅಂಗಡಿಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ.
80 lakh robbery, fake police, Bengaluru,