82ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಭಾಷಣದ ಮುಖ್ಯಾಂಶಗಳು

Spread the love

Baraguru-01

 • ಏಕೀಕರಣದ ಸಾರ್ಥಕತೆ ಕರ್ನಾಟಕ ಎಲ್ಲ ದಿಕ್ಕುಗಳಲ್ಲೂ ಮೊಳಗಲಿ
 • ನೆಲ-ಜಲದ ಸಂಘರ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿರಬೇಕು
 • ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೆ ಅಂತಿಮ ಅಧಿಕಾರ ಬೇಕು.
 • ರಾಜ್ಯ ಭಾಷಾ ಶಿಕ್ಷಣ ಮಾಧ್ಯಮ ಜಾರಿಗೆ ಸಂವಿಧಾನಕ್ಕೆ ತಿದ್ದುಪಡಿಯಾಗಲಿ
 • ವಿಶ್ವವಿದ್ಯಾಲಯಗಳ ಏಕ ರೂಪ ಕಾಯ್ದೆಗೆ ವಿರೋಧ
 • ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಅಗತ್ಯ.
 • ಕನ್ನಡ ಭಾಷಾ ಹೋರಾಟವು ಸಾಮಾಜಿಕ ಚಳವಳಿಯಾಗಬೇಕು
 • ಸಮಾನ ಶಿಕ್ಷಣ ನೀತಿಗಾಗಿ ಆಂದೋಲನ ನಡೆಯಬೇಕು
 • ರಾಷ್ಟ್ರೀಯ ಉದ್ಯೋಗ ನೀತಿ ಜಾರಿಗೆ ಬರಲಿ
 • ಉದ್ಯೋಗ ಪರಿಶೀಲನಾ ಸಮಿತಿ ರಚನೆಯಾಗಲಿ
 • ಸೈನಿಕರನ್ನು ಪಕ್ಷ ರಾಜಕೀಯದ ಅಂಗವಾಗಿ ನೋಡಬಾರದು

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಸಾಮಾಜಿಕ ನ್ಯಾಯದ ರಾಜ್ಯಬೇಕೇ ಹೊರತು ಪ್ರತ್ಯೇಕ ರಾಜ್ಯವಲ್ಲ; ಕಂದಾಯ ವಿಭಾಗವಾರು ಸಚಿವಾಲಯ ವಿಕೇಂದ್ರೀಕರಣವಾಗಲಿ, ರಾಜ್ಯಾದ್ಯಂತ ಮನೋ ಸೇತುವೆ ನಿರ್ಮಾಣ, ಸ್ವಾಯತ್ತ ರಾಜ್ಯ ನಿರ್ಮಾಣಕ್ಕೆ ಆಗ್ರಹ, ಪ್ರತ್ಯೇಕತೆ, ಪರಕೀಯತೆ ಕೂಗು ಏಕೀಕೃತ ಅಖಂಡ ಕರ್ನಾಟಕದಲ್ಲೇ ಕೊನೆಗೊಂಡು, ಏಕೀಕರಣದ ಸಾರ್ಥಕತೆ ನಾಡಿನ ಎಲ್ಲ ದಿಕ್ಕುಗಳಲ್ಲೂ ಮೊಳಗಬೇಕು, ನೆಲ-ಜಲದ ಜಗಳಗಳ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಾಗಿರಬೇಕು- ಇವು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರ ಭಾಷಣದಲ್ಲಿ ಮಾರ್ದನಿಸಿರುವ ಕನ್ನಡ, ಕರುನಾಡಿನ ರಕ್ಷಣೆ ಸೂತ್ರಗಳ ನುಡಿಸಾಲುಗಳು.

ಮಾತೃ ಭಾಷೆ ಮಾಧ್ಯಮ ಜಾರಿ ವಿಷಯದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು, ರಾಜ್ಯ ಭಾಷಾ ಶಿಕ್ಷಣ ಜಾರಿಗೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಕನ್ನಡಕ್ಕೆ ಉನ್ನತ ಶಿಕ್ಷಣದಲ್ಲಿ ಸೂಕ್ತ ಸ್ಥಾನ ಲಭಿಸಲು ನಿಯಮಾವಳಿ ರೂಪಿಸಬೇಕು, ವಿಶ್ವ ವಿದ್ಯಾಲಯಗಳಿಗೆ ಏಕರೂಪ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಕನ್ನಡ ಭಾಷಾ ಹೋರಾಟವು ಸಾಮಾಜಿಕ ಚಳವಳಿಯಾಗಬೇಕು ಹಾಗೂ ಸಮಾನ ಶಿಕ್ಷಣ ನೀತಿಗಾಗಿ ಆಂದೋಲನ ನಡೆಯಬೇಕು ಎಂದೂ ಅವರು ಸಲಹೆ ಮಾಡಿದ್ದಾರೆ. ಕೃಷ್ಣಾ-ತುಂಗಭದ್ರೆಯರ ಬೀಡು, ಅನ್ನ, ಚಿನ್ನ, ಬೆಳಕು ನೀಡುವ ಹೊನ್ನಾಡು ಮತ್ತು ಶ್ವೇತ ಬಂಗಾರ (ಹತ್ತಿ) ಬೆಳೆವ ಸಿರಿನಾಡು ಎಂದೇ ಪ್ರಸಿದ್ಧವಾದ ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಪಂಡಿತ ತಾರಾನಾಥ ಮಹಾಮಂಟಪದ ಶಾಂತರಸ ವೇದಿಕೆಯಲ್ಲಿ ಇಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಭಾಷಣ ಮಾಡಿದರು.

ಏಕೀಕರಣದಿಂದ ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ಸನ್ನಿವೇಶದ ಬಗ್ಗೆ ಬೇಸರದಿಂದ ನುಡಿದ ಅವರು ಪ್ರತ್ಯೇಕತೆಯೊಂದೇ ಇದಕ್ಕೆ ಪರಿಹಾರವಲ್ಲ. ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ ಭೂಗೋಳದಲ್ಲೇ ಅನುಭವಿಸುವ ಪರಕೀಯತೆ. ಈ ಪರಕೀಯತೆ ಏಕೀಕೃತ ಅಖಂಡ ಕರ್ನಾಟಕದಲ್ಲಿಯೇ ಕೊನೆಗಾಣಬೇಕು ಎಂದು ಡಾ.ಬರಗೂರು ಸಾರಿದರು.  ಪ್ರತ್ಯೇಕ ರಾಜ್ಯ ಬೇಡಿಕೆಯವರಲ್ಲಿ ನನ್ನದೊಂದು ಬೇಡಿಕೆ. ನಾವು ಒಂದಾಗಿ ಸಮಸ್ಯೆಗಳನ್ನು ಬಿಡಿಸೋಣ. ಸವಾಲುಗಳನ್ನು ಒಂದಾಗಿ ಎದುರಿಸೋಣ ಎಂದು ಅವರು ಸಲಹೆ ಮಾಡಿದರು. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಅನ್ಯಾಯವಾದರೂ ಒಂದಾಗಿ ಪ್ರತಿಭಟಿಸಬೇಕು. ಒಡೆದು ಹೋಗುವುದಕ್ಕೆ ನಾವು ಒಂದಾಗಲಿಲ್ಲ ಎಂಬುದನ್ನು ತೋರಿಸಿಕೊಡಬೇಕು. ಇಂಥದೊಂದು ಕ್ರಿಯೆಗೆ ಕರ್ನಾಟಕದ ಎಲ್ಲ ಪ್ರದೇಶಗಳ ನೋಟವೇ ಬದಲಾಗಬೇಕು. ಅಪನಂಬಿಕೆಯ ವಾತಾವರಣ ಹೋಗಬೇಕು. ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳ ಜವಾಬ್ದಾರಿಯೂ ದೊಡ್ಡದಾಗಬೇಕು. ಎಲ್ಲ ಪ್ರದೇಶದ ಜನಪ್ರತಿನಿಧಿಗಳ ದನಿ ಗಟ್ಟಿಯಾಗಬೇಕು ಎಂದು ಅವರು ಕನ್ನಡಾಭಿಮಾನಿಗಳ ಪ್ರಚಂಡ ಕರತಾಡನದ ನಡುವೆ ಕರೆ ನೀಡಿದರು.

ಅಸಮತೋಲನ ಮತ್ತು ಅಸಮಾಧಾನಗಳನ್ನು ತಪ್ಪಿಸಲು ಹಾಗೂ ಜನಮುಖಿ ನ್ಯಾಯದ ವೇಗವನ್ನು ವೃದ್ಧಿಸಲು, ರಾಜಧಾನಿ ಕೇಂದ್ರಿತ ಸಚಿವಾಲಯವನ್ನು ವಿಕೇಂದ್ರೀಕರಣಗೊಳಿಸಬೇಕು. ಅಂದರೆ ಕರ್ನಾಟಕದ ಪ್ರತಿ ಕಂದಾಯ ವಿಭಾಗಕ್ಕೊಂದು ಸಚಿವಾಲಯವನ್ನು ಸ್ಥಾಪಿಸಬೇಕು. ರಾಜ್ಯದೊಳಗೆ ಇಂಥದೊಂದು ಸ್ವಾಯತ್ತತೆಯ ಸಂರಚನೆ ಆಗಿ ಅನುಷ್ಠಾನಗೊಳ್ಳದೆ ಹೋದರೆ ಇಂದಲ್ಲ ನಾಳೆ ಪ್ರತ್ಯೇಕತೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು. ಬೆಂಗಳೂರಲ್ಲಿ ಸುಗಮ ಸಂಚಾರಕ್ಕೆ ಮೇಲ್ ಸೇತುವೆಗಳನ್ನು ನಿರ್ಮಿಸುವ ಸರ್ಕಾರ, ಕರ್ನಾಟಕದಾದ್ಯಂತ ಅಸಮತೋಲನ ಮತ್ತು ಅಸಮಾಧಾನಗಳ ನಿವಾರಣೆಗೆ ಮನೋ ಸೇತುವೆಗಳನ್ನು ನಿರ್ಮಿಸಬೇಕಾಗಿದೆ ಎಂದು ಅವರು ಅರ್ಥಗರ್ಭಿತವಾಗಿ ಪ್ರಸ್ತಾಪಿಸಿದರು.

ಹೊರರಾಜ್ಯದವರು ತೆಗೆಯುವ ನೆಲ-ಜಲದ ಜಗಳಗಳ ಸಂದರ್ಭದಲ್ಲಿ ಕರ್ನಾಟಕದ ನಾವೆಲ್ಲ ಒಂದಾಗಿ ಉತ್ತರಿಸಬೇಕು ಎಂದು ಅವರು ಕರೆ ನೀಡಿದರು. ರಾಜ್ಯದ ಸ್ವಾಯತ್ತತೆ ಕುರಿತು ವಿಶ್ಲೇಷಣೆ ಮಾಡಿದ ಅವರು ರಾಜ್ಯಗಳು ಸಂಯುಕ್ತ ಭಾರತದ ಭಾಗವಾಗುವ ಬದಲು ಕೇಂದ್ರ ಸರ್ಕಾರದ ತೋರು ಬೆರಳ ದಾರಿಯಲ್ಲಿ ಸಾಗುವ ಪಾದಚಾರಿಗಳಾಗುತ್ತಿವೆ ಎಂದು ವಿಷಾದಿಸಿದರು. ರಾಜ್ಯದ ಸ್ವಾಯತ್ತತೆಗಾಗಿ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಬೇಕು ಸಲಹೆ ಮಾಡಿದರು.  ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಸರ್ಕಾರವು ಕಡ್ಡಾಯಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಇದು ದೇಶದ ಎಲ್ಲ ಮಾತೃಭಾಷೆ ಹಾಗೂ ರಾಜ್ಯ ಭಾಷೆಗಳಿಗೆ ಆಘಾತಕಾರಿಯಾಗುವ ತೀರ್ಪು. ಭಾಷಾ ನೀತಿಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ರಾಜ್ಯಕ್ಕೆ ತಿಳಿದಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಅವರು ಸಮರ್ಥಿಸಿಕೊಂಡರು.

ಸ್ವಾಯತ್ತತೆ ಮತ್ತು ಖಾಸಗಿ ಸವಲತ್ತುಗಳ ಶಿಕ್ಷಣ ಸಂಸ್ಥೆಗಳು ಕನ್ನಡಕ್ಕೆ ಸೂಕ್ತ ಉನ್ನತ ಶಿಕ್ಷಣದಲ್ಲಿ ಸ್ಥಾನ ನೀಡದೆ ಅನ್ಯಾಯ ಮಾಡುತ್ತಿರುವುದನ್ನು ತಪ್ಪಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು. ಈಗಲಾದರೂ ಸರ್ಕಾರವು ವೃತ್ತಿ ಶಿಕ್ಷಣವನ್ನೂ ಒಳಗೊಂಡಂತೆ ಒಟ್ಟು ಉನ್ನತ ಶಿಕ್ಷಣದಲ್ಲಿ ಕನ್ನಡದ ಸ್ಥಾನವನ್ನು ಗಟ್ಟಿಗೊಳಿಸಬೇಕು. ಕುಂಟು ನೆಪಗಳನ್ನು ಕೈಬಿಡಬೇಕು. ಒಟ್ಟು ಶಿಕ್ಷಣದಲ್ಲಿ ಆಯಾ ಕೋರ್ಸುಗೆ ಅನುಸಾರವಾಗಿ ಉಚಿತ ರೀತಿಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಉನ್ನತ ಶಿಕ್ಷಣದ ಕಾಪೆರ್Çೀರೇಟರೀಕರಣದ ಬದಲು ಕರ್ನಾಟಕೀಕರಣ ಎಂದು ನಾಡೋಜ ಡಾ. ರಾಮಚಂದ್ರಪ್ಪ ಹೇಳಿದರು.  ಕನ್ನಡಕ್ಕೆ ಸಾವಿಲ್ಲ; ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕನ್ನಡಿಗರಿಗೆ ಕೊಟ್ಟರೆ ಕನ್ನಡದ ಕಂಟಕಗಳಿಗೆ ಅವರೇ ಸವಾಲು ಎಸೆಯುತ್ತಾರೆ. ಕನ್ನಡಿಗರಿಗೆ ಬದುಕುವ ಶಕ್ತಿ; ಸಾಮಾಜಿಕ ಶಕ್ತಿ; ಆರ್ಥಿಕ ಶಕ್ತಿ; ಶಿಕ್ಷಣದ ಶಕ್ತಿ; ಉದ್ಯೋಗ ಶಕ್ತಿ; ಹಸಿವು ಮುಕ್ತ ಶಕ್ತಿ; ಸಮಾನತೆಯ ಶಕ್ತಿ ನೀಡಬೇಕು ಎಂದು ಅವರು ಕರೆ ನೀಡಿದರು.  ಭಾಷಾ ಹೋರಾಟಗಳು ಸಾಮಾಜಿಕ ಹೋರಾಟಗಳೂ ಆಗಬೇಕು. ಭಾಷೆಯನ್ನು ಉಳಿಸುವುದೆಂದರೆ ಬದುಕನ್ನು ಉಳಿಸುವುದು, ಬದುಕನ್ನು ಉಳಿಸುವುದೆಂದರೆ ಭಾಷೆಯನ್ನು ಉಳಿಸುವುದು ಎಂದಾಗಬೇಕು ಎಂದು ಅವರು ಅರ್ಥೈಸಿದರು.
ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು. ಸಾಹಿತ್ಯ ಪರಿಷತ್ತು ಪ್ರೇರಕ ಶಕ್ತಿಯಾಗಬೇಕು ಎಂದು ಕರೆ ನೀಡಿದರು.  ಖಾಸಗಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಅರ್ಹರಿಗೆ ಆದ್ಯತೆ ಕೊಡುವುದರ ಜೊತೆಗೆ ಸಂವಿಧಾನದತ್ತ ಮೀಸಲಾತಿಯನ್ನೂ ಅರ್ಹತೆಯ ಆಧಾರದ ಮೇಲೆ ನೀಡಬೇಕು. ಸಮಗ್ರ ರಾಷ್ಟ್ರೀಯ ಉದ್ಯೋಗ ನೀತಿ ನಿರೂಪಣೆ ಮಾಡಿ ಅನುಷ್ಠಾನಗೊಳಿಸುವುದರಿಂದ ಸ್ಥಳೀಯರಿಗೆ ಹಾಗೂ ಸಾಮಾಜಿಕ.ಆರ್ಥಿಕ ದುರ್ಬಲರಿಗೆ ಉದ್ಯೋಗ ಲಭಿಸುತ್ತದೆ-ದೇಶದ ಒಕ್ಕೂಟ ವ್ಯವಸ್ಥೆಗೆ ಅರ್ಥಬರುತ್ತದೆ. ಭಾಷೆ ಮತ್ತು ಬದುಕಿಗೆ ಭವಿಷ್ಯದ ಭರವಸೆ ಬರುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.

ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಅವರ ಭಾಷಣವು ಕೇವಲ ಕನ್ನಡ, ಕರುನಾಡು, ಕನ್ನಡಿಗರು ಮತ್ತು ಭಾಷೆ, ಸಂಸ್ಕøತಿ ಪರಂಪರೆಗಷ್ಟೇ ಸೀಮಿತವಾಗಿಲಿರಲಿಲ್ಲ. ಭಯೋತ್ಪಾದನೆ, ಧರ್ಮ ಸಂಘರ್ಷ, ನೈತಿಕ ಪೆÇಲೀಸ್ ಗಿರಿ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತೀಕರಣ ಹಾಗೂ ರೈತರ ಆತ್ಮಹತ್ಯೆ ಸಮಸ್ಯೆಗಳ ಮೇಲೂ ಅವರು ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲಿದರು. ಶಾಲೆಗಳ ಸಬಲೀಕರಣ, ಕನ್ನಡ ತಂತ್ರಜ್ಞಾನ ಅಭಿವೃದ್ಧಿ ಮೊದಲಾದ ವಿಷಯಗಳ ಬಗ್ಗೆಯೂ ಅವರು ತಮ್ಮ ವಾಗ್ಝರಿಯನ್ನು ಪ್ರವಹಿಸಿದರು.


ಭಯೋತ್ಪಾದನೆ, ಯುದ್ಧೋತ್ಪಾದನೆಗೆ ವಿಷಾದ; ಬಡವರು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಬೇಸರ
ಸಾಮಾಜಿಕ ಪಿಡುಗಿನ ವಿರುದ್ಧ ಸರ್ಜಿಕಲ್ ದಾಳಿಗೆ ಬರಗೂರು ಕರೆ

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಇಂದು ಧರ್ಮ-ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಯುದ್ಧೋತ್ಪಾದನೆಗಳು ಒಟ್ಟಿಗೆ ವಿಜೃಂಭಿಸುತ್ತಿವೆ ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ನೊಂದು ನುಡಿದಿದ್ದಾರೆ.   ನುಡಿಹಬ್ಬವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡಿದ ಅವರು ಜಾತಿವಾದ, ಕೋಮುವಾದ, ಲಿಂಗತ್ವ ಅಸಮಾನತೆ, ಆರ್ಥಿಕ ಅಸಮಾನತೆ – ಮುಂತಾದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ವಿರೋಧಿಸಿ, ಜಾತಿ ವಿನಾಶ, ಧಾರ್ಮಿಕ ಸೌಹಾರ್ದ, ಮಹಿಳಾ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳನ್ನು ಸ್ಥಾಪಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಕೋಮುವಾದದ ವಿರೋಧವೆಂದರೆ ಎಲ್ಲ ಧರ್ಮಗಳ ಮೂಲಭೂತವಾದದ ವಿರೋಧ. ಜನರನ್ನು ಒಡೆಯುವುದಕ್ಕಾಗಿ ಧರ್ಮ, ದೇವರುಗಳನ್ನು ಬಳಸಿಕೊಳ್ಳುವ ಸಂಕುಚಿತ ಧಾರ್ಮಿಕ ಸರ್ಜಿಕಲ್ ದಾಳಿಗಳನ್ನು ನಾವು ಒಟ್ಟಾಗಿ ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು.

ಜನ ಸಾಮಾನ್ಯರ ಸಂಕಷ್ಟದ ಕಾಲವಿದು. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು, ಎಲ್ಲ ಬಡವರು ವಿವಿಧ ಪ್ರಮಾಣದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಭಯೋತ್ಪಾದನೆ, ಯುದ್ಧೋತ್ಪಾದನೆಗಳಷ್ಟೇ ಹಿಂಸೆಯಾಗದೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೇ ಹಿಂಸೆ ಅಂತರ್ಗತವಾಗಿ ಬಿಟ್ಟಿದೆ ಎಂದು ವಿಷಾದಿಸಿದರು. ದೀನ ದಲಿತರ, ಬಡ ಬಗ್ಗರ, ಮಹಿಳೆಯರ, ಮಕ್ಕಳ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದು ಆದ್ಯತೆಯಾಗಬೇಕು. ಇಂಥ ಆಶಯವು ಕನ್ನಡ ಸಾಹಿತ್ಯ ಸಂವೇದನೆಯ ಭಾಗವಾಗಿದೆ ಎಂದು ಅವರು ಹೇಳಿದರು.  ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ಕ್ರೌರ್ಯದ ಕತೆಗಳಾಗಿ ಕಾಡುತ್ತಿವೆ. ಕಣ್ಣೀರ ಕವಿತೆಗಳು ಎದುರು ನಿಂತಿವೆ. ಅಸಹಾಯಕತೆ ಆಕ್ರೋಶಗಳೊಂದಾದ ವೈರುಧ್ಯಗಳು ಪ್ರಶ್ನಿಸುತ್ತಿವೆ. ಮಹಿಳೆಯುರ ಮೇಲಿನ ದೌರ್ಜನ್ಯ, ಹಾಗೂ ಅತ್ಯಾಚಾರಗಳೆಂಬ ಸರ್ಜಿಕಲ್ ದಾಳಿಗೆ ವಿರುದ್ಧವಾಗಿ ಕನ್ನಡ ಮತ್ತು ಕರ್ನಾಟಕದ ಸಂವೇದನೆ ನಿಲ್ಲಬೇಕು ಎಂದು ಅವರು ಕರೆ ನೀಡಿದರು.  ನಾವು ದೇಶದ ಹೊರಗೆ ನಡೆಯುವ ಸೈನಿಕ ಸರ್ಜಿಕಲ್ ದಾಳಿಗಳನ್ನು ಬೆಂಬಲಿಸೋಣ. ದೇಶದೊಳಗಿನ ಸಾಮಾಜಿಕ ಪಿಡುಗಿನ ಸರ್ಜಿಕಲ್ ದಾಳಿಗಳನ್ನು ಸೋಲಿಸೋಣ. ಆರ್ಥಿಕ ಸರ್ಜಿಕಲ್ ದಾಳಿಗಳನ್ನು ಹತ್ತಿಕ್ಕೋಣ ಎಂದು ಡಾ. ಬರಗೂರು ಸಲಹೆ ಮಾಡಿದರು.


ಜಾತಿ-ಧರ್ಮಗಳ ಕಂದಕದಿಂದ ಬದುಕಿಗೆ ಸಂಕಟ

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಬಡವ ಬಲ್ಲಿದರ ನಡುವೆ, ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಕಂದಕವಿದೆ. ಮನುಷ್ಯ ಮನುಷ್ಯರ ನಡುವೆ ಮತ್ತು ಮನುಷ್ಯ ಮನಸ್ಸಿನೊಳಗೇ ಕಂದಕಗಳಿವೆ. ಲೆಕ್ಕವಿಲ್ಲದಷ್ಟು ಕಂದಕಗಳ ನಡುವೆ ನಮ್ಮ ಬಹುಪಾಲು ಸಾಮಾಜಿಕ ಬದುಕು ಸಂಕಟ ಪಡುತ್ತಿದೆ; ಕುಂಟು ನೋಟದ ನಡಿಗೆಯಲ್ಲಿ ನರಳುತ್ತಿದೆ ಎಂದು 82ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪವಿಷಾದಿಸಿದ್ದಾರೆ.  ಇಂಥ ಸಂದರ್ಭದಲ್ಲಿ ನಾವು ಜಾತಿ, ಮತ, ಧರ್ಮಗಳ ದ್ವೀಪಗಳನ್ನು ದಾಟಬೇಕು. ಕಂದಕಗಳನ್ನು ಮುಚ್ಚಬೇಕು. ಈ ಕಂದಕ ಮುಚ್ಚುವ ಕಾಯಕದಲ್ಲಿ ಸಾಹಿತಿಗಳ ಪಾತ್ರ ದೊಡ್ಡದಾಗಬೇಕು. ಮನುಷ್ಯ ಬದುಕಿನ ಶೋಧಾಭಿವ್ಯಕ್ತಿಗೆ ತೊಡಗುವ ಸಾಹಿತ್ಯ ಸ್ವತಃ ಮನುಷ್ಯ ರೂಪಕವಾಗಬೇಕೆಂದು ಅವರು ಸಮ್ಮೇಳಾನಧ್ಯಕ್ಷ ಭಾಷಣದಲ್ಲಿ ಹೇಳಿದರು.

ನಮ್ಮ ದೇಶವು ಜಾತೀಕರಣದಿಂದ ಜಾಗತೀಕರಣದತ್ತ ಚಲಿಸಿದೆ. ಜಾತೀಕರಣ ಮತ್ತು ಜಾಗತೀಕರಣಗಳು ಒಟ್ಟಿಗೆ ಬಲವಾಗುತ್ತಿರುವ ವಿಶಿಷ್ಟ ಸನ್ನಿವೇಶ ನಮ್ಮದಾಗಿದೆ. ನಮಗೆ ಈಗ ನಿರ್ದಿಷ್ಟ ಜಾತಿಯೊಳಗಿದ್ದೂ ಜಾತಿಯನ್ನು ಮೀರಿದ ಸಾಮಾಜಿಕ ನಾಯಕತ್ವ ಬೇಕು. ನಿರ್ದಿಷ್ಟ ಧರ್ಮದೊಳಗಿದ್ದೂ ಧರ್ಮವನ್ನು ಮೀರಿದ ನೋಟವುಳ್ಳ ಸಾಮಾಜಿಕ ನಾಯಕತ್ವಬೇಕು. ನಿರ್ದಿಷ್ಟ ಪಕ್ಷದೊಳಗಿದ್ದೂ ಪಕ್ಷವನ್ನು ಮೀರಿದ ರಾಜಕೀಯ ನಾಯಕತ್ವ ಬೇಕು. ನಾಯಕರೊಡನಿದ್ದೂ ಮೀರುವ ಪ್ರತಿನಾಯಕರಾಗುವ ಸಾಂಸ್ಕøತಿಕ ನಾಯಕತ್ವ ಬೇಕು ಎಂದು ಅವರು ಅಭಿಪ್ರಾಯಪಟ್ಟರು.


ಅನ್ನದಾತರ ಆತ್ಮಹತ್ಯೆ : ಮಮ್ಮಲ ಮರುಗಿದ ಸಮ್ಮೇಳನಾಧ್ಯಕ್ಷರು

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಕನ್ನಡ ಸಾಹಿತ್ಯವು ರೈತರ ಸಮಸ್ಯೆಗಳಿಗೂ ಸ್ಪಂದಿಸಿ, ರೈತಸಂವೇದನೆಯನ್ನು ಒಳಗೊಂಡಿದೆ. ಅನ್ನದಾತರೆಂದು ಕರೆಸಿಕೊಳ್ಳುವ ರೈತರ ಸಮಸ್ಯೆಗಳು ಇಂದು ಸಂಕೀರ್ಣ ರೂಪತಾಳುತ್ತಿವೆ. ರೈತರು ತತ್ತರಿಸಿದ ಬದುಕಿಗೆ ಬಲಿಯಾಗುತ್ತಿದ್ದಾರೆ. ಸಾವಿರಾರು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು 82ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಮ್ಮಲ ಮರುಗಿದ್ದಾರೆ.  ಸಮ್ಮೇಳಾಧ್ಯಕ್ಷ ಭಾಷಣ ಮಾಡಿದ ಅವರು, ಕನ್ನಡ ಸಾಹಿತ್ಯ ಸಂವೇದನೆ ಯಾವತ್ತೂ ರೈತಪರವಾಗಿದೆ. ಕುವೆಂಪು ಅವರ ನೇಗಿಲಯೋಗಿ ಮತ್ತು ಬೇಂದ್ರೆಯವರ ಭೂಮಿತಾಯಿಯ ಚೊಚ್ಚಲ ಮಗ ಕವಿತೆಗಳನ್ನು ಉಲ್ಲೇಖಿಸಿದರು.

1952ರಲ್ಲಿ ಕೇಂದ್ರ ಸರ್ಕಾರವು ತನ್ನ ಬಜೆಟ್‍ನಲ್ಲಿ ಶೇ. 12.5ರಷ್ಟು ಹಣವನ್ನು ಕೃಷಿಗಾಗಿ ಒದಗಿಸಿತ್ತು. 2015ರಲ್ಲಿ ಈಗಿನ ಕೇಂದ್ರ ಸರ್ಕಾರವು ತನ್ನ ಬಜೆಟ್‍ನಲ್ಲಿ ಶೇ. 3.7ರಷ್ಟು ಹಣವನ್ನು ಒದಗಿಸಿದೆ. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ 37.3ರಷ್ಟು ಪಾಲು ಒದಗಿಸಿತ್ತು. ಹತ್ತನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಇದು ಶೇ. 10.6ಕ್ಕೆ ಇಳಿದಿದೆ. ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಶೇ. 69ರಷ್ಟು ಸಣ್ಣ ರೈತರಿಗೆ ಮತ್ತು ಶೇ. 87ರಷ್ಟ್ಟು ಅತಿ ಸಣ್ಣ ರೈತರಿಗೆ ಸರ್ಕಾರಿ ಸಾಲ ಸಿಗುತ್ತಿಲ್ಲ. ರೈತರು ಹೆಚ್ಚಿನ ಬಡ್ಡಿ ತೆತ್ತು ಖಾಸಗಿ ಸಾಲ ನೀಡಿಕೆದಾರರಿಂದ ಸಾಲ ಪಡೆಯುತ್ತಾರೆ ಎಂದು ಡಾ. ಬರಗೂರು ಅಂಕಿ-ಅಂಶ ನೀಡಿದ್ದಾರೆ.

ಇದೇ ವರದಿ ಪ್ರಕಾರ ದೇಶದಲ್ಲಿ ಶೇ. 70ರಷ್ಟು ಖಾಸಗಿ ಸಾಲ ನೀಡಿಕೆದಾರರು ಇದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಯಾರೆಂದು ನೋಡಿ; ಉತ್ತರ ಸ್ಪಷ್ಟ. ಸಣ್ಣರೈತರು ಮತ್ತು ಅತಿ ಸಣ್ಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೂರಾರು ಎಕರೆಯ ಒಡೆಯರಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯದ ಹಿಂದೆ ನಮ್ಮ ದೇಶ ಅಳವಡಿಸಿಕೊಂಡ ಅಮೆರಿಕ ಆರ್ಥಿಕ ನೀತಿಯ ಪಾಲು ಸಾಕಷ್ಟಿದೆ ಎಂದು ಉದಾಹರಣೆ ನೀಡಿದರು.  ಕೃಷಿಗೆ ಸಬ್ಸಿಡಿ ಕಡಿತದ ನೋಟ ಬಂದದ್ದು ಅಲ್ಲಿಂದಲೇ. ಆದರೆ ಅದೇ ಅಮೇರಿಕದಲ್ಲಿ ಶೇ. 5ರಷ್ಟಿರುವ ರೈತರಿಗೆ ಒಟ್ಟು ಶೇ. 26ರಷ್ಟು ಸಬ್ಸಿಡಿ ಸಿಗುತ್ತದೆ. ಶೇ. 60ಕ್ಕೂ ಹೆಚ್ಚು ರೈತರಿರುವ ನಮ್ಮ ದೇಶದಲ್ಲಿ ಶೇ. 2.33 ರಷ್ಟು ಸಬ್ಸಿಡಿ ಕೊಡಲಾಗುತ್ತದೆ. ಎಲ್ಲಕ್ಕೂ ಅಮೆರಿಕಾದ ಕಡೆ ನೋಡುವ ನಮ್ಮ ಸರ್ಕಾರಗಳು ರೈತರ ಸಬ್ಸಿಡಿ ವಿಷಯದಲ್ಲಿ ಅದೇ ಅಮೆರಿಕವನ್ನು ಯಾಕೆ ಅನುಸರಿಸುತ್ತಿಲ್ಲ? ವಿಶ್ವಬ್ಯಾಂಕ್ ಹೆಚ್ಚು ಸಬ್ಸಿಡಿ ಕೊಡುವುದನ್ನು ಒಪ್ಪುತ್ತಿಲ್ಲ. ಇದೇ ಜಾಗತೀಕರಣದ ರಹಸ್ಯ ಎಂದು ಅವರು ವಾಸ್ತವಾಂಶವನ್ನು ಬಿಚ್ಚಿಟ್ಟರು.


ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಡಾ.ಬರಗೂರು ಸಪ್ತ ಸೂತ್ರ

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲೆಗಳ ಶಿಕ್ಷಣದ ಬಗ್ಗೆ ಅಷ್ಟೊಂದು ಅಕ್ಕರೆಯಿದ್ದರೆ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಅವರು ಉಚಿತ ಪ್ರವೇಶ ನೀಡುವ ಕಾಯಿದೆ ಜಾರಿಗೆ ತರಲಿ ಎಂದು 82ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಸರ್ಕಾರವು ಆರ್.ಟಿ.ಇ. ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳ ಸಂಖ್ಯೆ ಮತ್ತು ಶಕ್ತಿಗೆ ಕುಂದುಂಟಾಗುತ್ತಿದೆ ಎಂದು ಅವರು ಸಮೇಳನಾಧ್ಯಕ್ಷರ ಭಾಷಣದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು. ಸಾಹಿತ್ಯ ಪರಿಷತ್ತು ಪ್ರೇರಕ ಶಕ್ತಿಯಾಗಬೇಕು ಎಂದು ಅವರು ಹೇಳಿದರು.  ಶಾಲೆ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕಾಗಿ ಅವರು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮ ಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು ಸ್ಥಾಪಿಸಬೇಕು. ಈ ಶಾಲೆಯು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಒಳಗೊಂಡಿರಬೇಕು.

ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು.  ಬಹು ಮುಖ್ಯವಾಗಿ ಸರ್ಕಾರವು ಪ್ರಾಥಮಿಕ ಪೂರ್ವ ಶಾಲೆಗಳನ್ನು ಸ್ಥಾಪಿಸಬೇಕು. ಎಲ್.ಕೆ.ಜಿ; ಯು.ಕೆ.ಜಿ. ಮತ್ತು ಸರ್ಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯಿದೆ ರೂಪಿಸಬೇಕು. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು.

ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು. ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆದು ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು.


ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಡಾ.ಬರಗೂರು ಸಪ್ತ ಸೂತ್ರ

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲೆಗಳ ಶಿಕ್ಷಣದ ಬಗ್ಗೆ ಅಷ್ಟೊಂದು ಅಕ್ಕರೆಯಿದ್ದರೆ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಅವರು ಉಚಿತ ಪ್ರವೇಶ ನೀಡುವ ಕಾಯಿದೆ ಜಾರಿಗೆ ತರಲಿ ಎಂದು 82ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಸರ್ಕಾರವು ಆರ್.ಟಿ.ಇ. ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳ ಸಂಖ್ಯೆ ಮತ್ತು ಶಕ್ತಿಗೆ ಕುಂದುಂಟಾಗುತ್ತಿದೆ ಎಂದು ಅವರು ಸಮೇಳನಾಧ್ಯಕ್ಷರ ಭಾಷಣದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು. ಸಾಹಿತ್ಯ ಪರಿಷತ್ತು ಪ್ರೇರಕ ಶಕ್ತಿಯಾಗಬೇಕು ಎಂದು ಅವರು ಹೇಳಿದರು.  ಶಾಲೆ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕಾಗಿ ಅವರು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮ ಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು ಸ್ಥಾಪಿಸಬೇಕು. ಈ ಶಾಲೆಯು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಒಳಗೊಂಡಿರಬೇಕು.

ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು.  ಬಹು ಮುಖ್ಯವಾಗಿ ಸರ್ಕಾರವು ಪ್ರಾಥಮಿಕ ಪೂರ್ವ ಶಾಲೆಗಳನ್ನು ಸ್ಥಾಪಿಸಬೇಕು. ಎಲ್.ಕೆ.ಜಿ; ಯು.ಕೆ.ಜಿ. ಮತ್ತು ಸರ್ಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯಿದೆ ರೂಪಿಸಬೇಕು. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು.

ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು. ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆದು ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು.


ಮಾಸ್ತಿಗುಡಿ ದುರಂತ ಸ್ಮರಿಸಿದ ಡಾ.ಬರಗೂರು

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಬೆಂಗಳೂರು ಸಮೀಪದ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಮಾಸ್ತಿಗುಡಿ ಸಿನಿಮಾದ ಸಾಹಸ ಚಿತ್ರೀಕರಣ ವೇಳೆ ದುರಂತ ಸಾವಿಗೀಡಾದ ಅನಿಲ್ ಮತ್ತು ಉದಯ್ ಅವರಿಗೆ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಶ್ರದ್ಧಾಂಜಲಿ ಸಮರ್ಪಿಸಿದರು. ಮಾಸ್ತಿಗುಡಿ ಕನ್ನಡ ಸಿನಿಮಾರಂಗದ ದುರಂತ ರೂಪಕವಾಗಿ ನನಗೆ ಕಾಣಿಸುತ್ತದೆ ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವರು ನೊಂದು ನುಡಿದರು. ನೇರ ಸಾಹಸದ ಪ್ರಚಾರಗಳಿಸುವ ಹುಚ್ಚು ಆಕಾಂಕ್ಷೆ, ಸಹಕಲಾವಿದರಿಗಿಲ್ಲದ ರಕ್ಷಣೆ, ನೀರಿನ ಆಳದಲ್ಲಿ ಹೂಳು ಇದೆ ಎಂಬುದನ್ನು ಗಮನಿಸದ ಅವಿವೇಕ, ಈಜು ಬಾರದಿದ್ದರೂ ಸಾಹಸಕ್ಕೆ ಸೈ ಎನ್ನುವ ಹುಂಬುತನ. ಅಮಾಯಕರು ಬಲಿಯಾದ ಮೇಲೆ ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪ, ಪ್ರತ್ಯಾರೋಪ – ಇವೆಲ್ಲವನ್ನೂ ಹೆಣೆದರೆ ಅದು ಒಟ್ಟು ಚಿತ್ರ ರಂಗದ ಸೂಕ್ಷ್ಮ ರಹಿತ ಸತ್ಯದ ದುರಂತ ರೂಪಕವೇ ಆಗುತ್ತದೆ. ಈ ದುರಂತ ರೂಪಕ ಸ್ಥಾಯಿಯಾಗದಂತೆ ಮಾಡುವ ಜವಾಬ್ದಾರಿ ನಮ್ಮ ಸಿನಿಮಾರಂಗದ ಮೇಲಿದೆ ಎಂದು ಡಾ. ಬರಗೂರು ಹೇಳಿದರು.


ರಾಷ್ಟ್ರೀಯ ಉದ್ಯೋಗ ನೀತಿಗೆ ಸಲಹೆ

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಶಿಕ್ಷಣ ಕ್ಷೇತ್ರದ ನೇಮಕಾತಿ ಸೇರಿದಂತೆ ಎಲ್ಲ ಇಲಾಖೆಗಳ ಅಗತ್ಯ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸಿ ಏಕಕಾಲಕ್ಕೆ ಭರ್ತಿ ಮಾಡುವ ಸಮಾನ ನೀತಿಯನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಅಗತ್ಯ ಮತ್ತು ಆದ್ಯತೆಯಾಗಬೇಕು ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.  ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡುವುದಿರಲಿ, ಬೇರೆ ರಾಜ್ಯಗಳಲ್ಲಿ ಕೊಡುತ್ತಿರುವಷ್ಟು ಗೌರವಧನವನ್ನೂ ಕೊಡುತ್ತಿಲ್ಲ. ಅಗತ್ಯವಾದಷ್ಟು ಹುದ್ದೆಗಳನ್ನು ಸೃಷ್ಟಿಮಾಡಿ ಸೇವಾವಧಿ ಮತ್ತು ಅರ್ಹತೆಯ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ ಹೊಸ ನಿರುದ್ಯೋಗಿಗಳ ಆಯ್ಕೆಗೂ ಅವಕಾಶ ನೀಡುವ ಹೊಸ ನಿಯಮಾವಳಿ ರೂಪಿಸಲು ಸಾಧ್ಯ. ಈ ರೀತಿ ಮಾಡದೆ ಹೋದರೆ ಶಿಕ್ಷಣಕ್ಷೇತ್ರವನ್ನು ಶೋಷಣೆ ಕೇಂದ್ರವಾಗಿಸಿದ ಸತ್ಕೀರ್ತಿ ಸರ್ಕಾರಕ್ಕೆ ಸಿಗುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವವರ ಪಟ್ಟಿಯನ್ನು ತಯಾರಿಸಿ ಒಟ್ಟಿಗೇ ಬದುಕಿನ ಭದ್ರತೆ ಕೊಡುವ ಉದ್ಯೋಗ ನೀತಿಗೆ ಸರ್ಕಾರ ಮುಂದಾಗಬೇಕು, ಕಡೆ ಪಕ್ಷ, ಒಂದು ಉದ್ಯೋಗ ಪರಿಶೀಲನಾ ಸಮಿತಿ ನೇಮಿಸಿ ಸಮಸ್ತ ವಿವರಗಳೊಂದಿಗೆ ನಿರ್ದಿಷ್ಟ ಪರಿಹಾರಗಳನ್ನು ಪಡೆದು ಕಾರ್ಯ ಪ್ರವೃತ್ತರಾಗಬೇಕು. ಕನ್ನಡಿಗರ ಅನಿಶ್ಚಿತ ವ್ಯಕ್ತಿ ಬದುಕಿಗೆ ಕೊನೆ ಹಾಡಬೇಕು. ಇದು ಮಾನವೀಯ ಸರ್ಕಾರವೊಂದರ ನೈತಿಕ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡುವುದು, ಆಯಾ ರಾಜ್ಯ ಭಾಷೆಯ ಕಲಿಕೆಯನ್ನು ಉದ್ಯೋಗ ನೀಡಿಕೆಗೆ ಕಡ್ಡಾಯ ಮಾಡುವುದು ಈ ರಾಷ್ಟ್ರೀಯ ಉದ್ಯೋಗ ನೀತಿಯ ಕೇಂದ್ರವಾಗಬೇಕು ಎಂದು ಅವರು ಸಲಹೆ ಮಾಡಿದ್ದ್ದಾರೆ.
ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆ ಕೊಡುವುದರ ಜೊತೆಗೆ ಸಂವಿಧಾನದತ್ತ ಮೀಸಲಾತಿಯನ್ನೂ ಅರ್ಹತೆಯ ಆಧಾರದ ಮೇಲೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಕೊರಳಿನ ಕನ್ನಡಾಭಿಮಾನ ಬೇಡ, ಕರುಳಿನ ಕನ್ನಡಾಭಿಮಾನ ಬೇಕು

ಶಾಂತರಸ ಪ್ರಧಾನ ವೇದಿಕೆ, ರಾಯಚೂರು, ಡಿ.2-ಕನ್ನಡಾಭಿಮಾನ ಪ್ರತಿಯೊಬ್ಬ ಕನ್ನಡಿಗರಲ್ಲೂ ಇರಬೇಕು. ನಮಗೆ ಬೇಕಾಗಿರುವುದು ಕೊರಳಿನ ಕನ್ನಡಾಭಿಮಾನ ಅಲ್ಲ. ಕರುಳಿನ ಕನ್ನಡಾಭಿಮಾನ ಬೇಕು. ಕರುಳು ಕೊರಳಿಗೆ ಬಂದು ದನಿಯಾಗುವ ಕನ್ನಡಾಭಿಮಾನ ಬೇಕು ಎಂದು 82ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಕನ್ನಡ ಕುಲಕೋಟಿಗೆ ಕಳಕಳಿಯ ಮನವಿ ಮಾಡಿದ್ದಾರೆ.  ಕನ್ನಡಪರ ಹೋರಾಟದ ಅಂತರಂಗದ ಅರಿವಾಗಿ ಸಾಮಾಜಿಕ ಆಯಾಮವೊಂದು ಇರಬೇಕು. ಕನ್ನಡಾಭಿಮಾನಕ್ಕೆ ಕನ್ನಡ ಸಾಹಿತ್ಯ ಸಾಕ್ಷಿಯಾಗಿದೆ. ಕರುಳ ಬಳ್ಳಿಯ ಕೊರಳಾಗಿ ಕನ್ನಡಕ್ಕೆ ಶಕ್ತಿ ತುಂಬಿದೆ. ಇದು ನಮ್ಮ ಕನ್ನಡಾಭಿಮಾನದ ಆದರ್ಶದ ಮಾದರಿ ಎಂದು ಅವರು ಸಾಹಿತ್ಯಾತ್ಮಕವಾಗಿ ಬಣ್ಣಿಸಿದರು.
ಕರ್ನಾಟಕದೊಳಗಿನ ಸಾಮಾಜಿಕ-ಆರ್ಥಿಕ ಸ್ತರಗಳ ಸಂದರ್ಭದಲ್ಲಿ ಭಿನ್ನ ನಿಲುವಿಗೆ ಬದ್ಧರಾಗಬೇಕು. ಅಂದರೆ ನಾವು ಕನ್ನಡ ಕೋಟ್ಯಾಧಿಪತಿಗಳಿಂದ ಕಷ್ಟಕ್ಕೆ ಸಿಕ್ಕಿದ ಬಡ ಕನ್ನಡಿಗರ ಪರವಾಗಿರಬೇಕು ಎಂದು ಅವರು ಸಲಹೆ ಮಾಡಿದರು.  ಶೋಷಿತ ಮಹಿಳೆಯರಿಗೆ ಬೆಂಬಲವಾಗಬೇಕು; ಶೋಷಿತ ರೈತರಿಗೆ ಮಿಡಿಯಬೇಕು. ವಂಚಿತ ಉದ್ಯೋಗಿಗಳ ಪರವಾಗಿರಬೇಕು. ದಲಿತರಿಗೆ ದನಿಯಾಗಬೇಕು; ಧಾರ್ಮಿಕ ಸಹಿಷ್ಣುತೆಗೆ ಸ್ಪಂದಿಸಬೇಕು. ಸಮಾನತೆ ಆದರ್ಶವಾಗಬೇಕುಎಂದು ಅವರು ಹೇಳಿದರು.


ಕರ್ನಾಟಕದ ತಾಯೀಕರಣ : ಕನ್ನಡ ನುಡಿ ಹಬ್ಬದ ವ್ಯಾಕರಣ

ಶಾಂತರಸ ಪ್ರಧಾನ ವೇದಿಕೆ, ಡಿ.2- ಕರ್ನಾಟಕ ತಾಯೀಕರಣಗೊಳ್ಳಬೇಕು. ಕನ್ನಡ ಸಂವೇದನೆಯಲ್ಲಿ ಸಮತೆಯ ಸಾಮಾಜಿಕ ಆಯಾಮ ಸದಾ ಇರಬೇಕು. ತಾಯೀಕರಣಗೊಂಡ ಸಮತೆಯ ಕರ್ನಾಟಕ ನಮ್ಮದಾಗಬೇಕು ಎಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ವ್ಯಾಖ್ಯಾನಿಸಿದ್ದಾರೆ.   ತಾಯ್ತನ ಈಗ ನಮ್ಮ ಪ್ರತೀಕವಾಗಬೇಕು. ತಾಯಿಗೆ ತನ್ನ ಮಕ್ಕಳೆಲ್ಲರೂ ಸಮಾನ. ಗಂಡಾಗಲಿ ಹೆಣ್ಣಾಗಲಿ, ಹಿರಿಯರಾಗಲಿ, ಕಿರಿಯರಾಗಲಿ ಭೇದ ಭಾವವಿಲ್ಲದ ಒಂದೇ ಮನೋಭಾವ ಮನೆಯ ಪಡಸಾಲೆ, ಹಜಾರ, ಅಡುಗೆಮನೆ ಬಚ್ಚಲು, ಹಿತ್ತಲು-ಎಲ್ಲ ಪ್ರದೇಶಗಳ ಬಗ್ಗೆಯೂ ತಾಯಿಯದು ಸಮಾನ ದೃಷ್ಟಿ. ಆದ್ದರಿಂದ ನಮ್ಮ ಸಮಾಜಕ್ಕೆ ತಾಯ್ತನ ಬೇಕು. ಸರ್ಕಾರಕ್ಕೆ ತಾಯ್ತನ ಬೇಕು. ಸಾಹಿತ್ಯ-ಸಂಸ್ಕøತಿಗೆ ತಾಯ್ತನ ಬೇಕು ಎಂದು ಅವರು ಸಮೇಳನಾಧ್ಯಕ್ಷ ಭಾಷಣದಲ್ಲಿ ತಿಳಿಸಿದ್ದಾರೆ.

ನಾವೆಲ್ಲ ತಾಯೀಕರಣಗೊಳ್ಳಬೇಕು. ತಾಯಿಯೆಂದರೆ ಮಮತೆ ಮತ್ತು ಸಮತೆ. ಈ ಸಮತಾಮಯಿ ತಾಯಿ ಸಂಕಟಪಡುತ್ತಾಳೆ; ಸಂತಳಾಗುತ್ತಾಳೆ; ಸಿಟ್ಟಾಗುತ್ತಾಳೆ; ಸ್ಫೋಟಿಸುತ್ತಾಳೆ. ಅಂತಃಕರಣವಾಗುತ್ತಾಳೆ. ಜಾತೀಕರಣ ಮತ್ತು ಜಾಗತೀಕರಣಕ್ಕೆ ಎದುರಾಗುವ ತಾಯೀಕರಣವಾಗುತ್ತಾಳೆ ಎಂದು ಎಂದು ಅವರು ನುಡಿದಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin