ಬೆಂಗಳೂರು,ಜು.13- 75ನೇ ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸುಮಾರು 84 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಪ್ರತಿ ವರ್ಷ ಆ.15ರ ಸ್ವಾತಂತ್ರ್ಯದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಪಟ್ಟಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಸಂಪ್ರದಾಯವಾಗಿದೆ. ಅದರಂತೆ ಈ ಬಾರಿ 84 ಕೈದಿಗಳಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ದೊರೆಯಲಿದೆ.
ರಾಜಧಾನಿ ಬೆಂಗಳೂರು, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ದಾವಣೆಗೆರೆ, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯಾ ದ್ಯಂತ ಒಟ್ಟು 15 ಸಾವಿರಕ್ಕೂ ಹೆಚ್ಚು ಕೈದಿಗಳು ಜೀವಾವಧಿ, 1 ವರ್ಷ, 2 ವರ್ಷ, 3 ವರ್ಷ ಹೀಗೆ ವಿವಿಧ ರೀತಿ ಶಿಕ್ಷೆಗೊಳಪಟ್ಟಿದ್ದಾರೆ.
ಶಿಕ್ಷೆಯ ಸಂದರ್ಭದಲ್ಲಿ ಯಾವ ಕೈದಿಗಳು ಉತ್ತಮರಾಗಿ ನಡೆದುಕೊಂಡು ಪರಿವರ್ತನೆ ಹೊಂದುತ್ತಾರೋ ಅಂಥವರನ್ನು ಗುರುತಿಸಿ ಬಿಡುಗಡೆ ಮಾಡಲಾಗುತ್ತದೆ.
ಜೈಲಿನ ಮುಖ್ಯಸ್ಥರು ಇಂತಹ ಕೈದಿಗಳನ್ನು ಬಿಡುಗಡೆ ಮಾಡಬಹುದೆಂದು ಮೊದಲು ಗೃಹ ಇಲಾಖೆಗೆ ವರದಿ ಸಲ್ಲಿಸಬೇಕು. ಬಳಿಕ ಗೃಹ ಇಲಾಖೆಯವರು ಕಾನೂನು ಇಲಾಖೆ ಜೊತೆ ಚರ್ಚಿಸಿ ಸಚಿವ ಸಂಪುಟದ ತೀರ್ಮಾನಕ್ಕೆ ಬಿಡುತ್ತಾರೆ. ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
ರಾಜ್ಯದಲ್ಲಿ ಸುಮಾರು 100 ಕಾರಾಗೃಹಗಳಿವೆ. ಇದರಲ್ಲಿ ಕೇಂದ್ರ, ಜಿಲ್ಲಾ, ಮುಕ್ತ ಮತ್ತು ತಾಲೂಕು ಮಟ್ಟದ ಜೈಲುಗಳು 15,000 ಕ್ಕೂ ಹೆಚ್ಚು ಕೈದಿಗಳನ್ನು ಒಳಗೊಂಡಿವೆ. ಅವರಲ್ಲಿ ಸುಮಾರು 10,000 ಕೈದಿಗಳು ವಿಚಾರಣಾೀನ ಕೈದಿಗಳಾಗಿದ್ದಾರೆ.
ಗೃಹ ಇಲಾಖೆಯಲ್ಲಿನ ರಾಜ್ಯ ಮಟ್ಟದ ಸ್ಕ್ರೀನಿಂಗ್ ಸಮಿತಿಯು ಕೈದಿಗಳ ಜೈಲು ಶಿಕ್ಷೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಹೀಗಾಗಿ ಕೆಲವು ಕೈದಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟದಲ್ಲಿ ತೀರ್ಮಾನವಾದ ನಂತರ ಅಂತಿಮ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿಕೊಡಲಗುತ್ತದೆ. ಈ ಬಾಗಿ ಮೊದಲ ಹಂತದಲ್ಲಿ ಜೀವಾವ ಶಿಕ್ಷೆಗೆ ಗುರಿಯಾಗಿರುವ 84 ಕೈದಿಗಳನ್ನು ರಾಜ್ಯ ಕಾರಾಗೃಹ ಇಲಾಖೆ ಗುರುತಿಸಿದ್ದು, ಅವರನ್ನು ಬಿಡುಗಡೆ ಮಾಡಲಾಗುವುದು.
ಆ.15ಕ್ಕೆ ದೇಶದಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ. ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸನ್ನಡತೆ ಕೈದಿಗಳನ್ನು ಗುರುತಿಸಿ ಆ.15ರಂದು ಬಿಡುಗಡೆ ಮಾಡಲು ಸೂಚನೆ ಕೊಟ್ಟಿತ್ತು.
ನಾಲ್ಕು ಮಹಿಳಾ ಕೈದಿಗಳು ಸೇರಿದಂತೆ ಗುರುತಿಸಲಾದ 84 ಕೈದಿಗಳು ಗೃಹ ಇಲಾಖೆ ನಿಗದಿಪಡಿಸಿದ ಮಾನದಂಡಕ್ಕೆ ಒಳಪಡುತ್ತಾರೆ. 84 ರಲ್ಲಿ, 81 ಕೈದಿಗಳು ತಮ್ಮ ಅವಯ ಮೂರನೇ ಎರಡರಷ್ಟು ಅವಯನ್ನು ಪೂರ್ಣಗೊಳಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ಅವರ ಹೆಸರುಗಳು ಮತ್ತು ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಬಳಿಕ ಈ ಕೈದಿಗಳನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುತ್ತದೆ. ಎರಡನೇ ಮತ್ತು ಮೂರನೇ ಹಂತಗಳಲ್ಲಿ ಹೆಚ್ಚಿನ ಕೈದಿಗಳನ್ನು 2023ರ ಗಣರಾಜ್ಯೋತ್ಸವಂದು ಹಾಗೂ ಸ್ವಾತಂತ್ರ್ಯ ದಿನಾಚರಣೆಯಂತು ಬಿಡುಗಡೆ ಮಾಡಲಾಗುತ್ತದೆ.
ಗೃಹ ಇಲಾಖೆಯ ಮಾರ್ಗಸೂಚಿಪ್ರಕಾರ, 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮತ್ತು ಅವರ ಶಿಕ್ಷೆಯ ಶೇ.50ರಷ್ಟು ಪೂರ್ಣಗೊಳಿಸಿದ ಮಹಿಳೆಯರು ಮತ್ತು ಲಿಂಗ ಪರಿವರ್ತನೆ ಅಪರಾಗಳು, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪುರುಷ ಅಪರಾಗಳು ತಮ್ಮ ಅವಯ ಶೇ.50ರಷ್ಟು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ದೈಹಿಕವಾಗಿ ವಿಕಲಾಂಗ ಕೈದಿಗಳು ಶೇ.70ರಷ್ಟು ಅಂಗವೈಕಲ್ಯ ಅಥವಾ ಅದಕ್ಕಿಂತ ಹೆಚ್ಚು ಮತ್ತು ತಮ್ಮ ಶಿಕ್ಷೆಯ ಶೇ.50ರಷ್ಟು ಪೂರ್ಣಗೊಳಿಸಿರುವ ಅನಾರೋಗ್ಯದ ಅಪರಾಗಳು, ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ ದಂಡ ಪಾವತಿಸದ ಕಾರಣ ಇನ್ನೂ ಜೈಲಿನಲ್ಲಿರುವ ಕೈದಿಗಳು ಹಾಗೂ 18 ರಿಂದ 21 ವರ್ಷ ವಯಸ್ಸಿನ ಯುವ ಕೈದಿಗಳು ಶಿಕ್ಷೆಯ 50 ಪ್ರತಿಶತವನ್ನು ಪೂರ್ಣಗೊಳಿಸಿದವರು ಜೈಲಿನಿಂದ ಬಿಡುಗಡೆ ಹೊಂದಲು ಅರ್ಹರಾಗಿರುತ್ತಾರೆ.