ಮಧ್ಯ ಪ್ರದೇಶದಲ್ಲಿ ಹಂದಿಜ್ವರಕ್ಕೆ 85 ಹಂದಿಗಳು ಸಾವು

Social Share

ಕತ್ನಿ, ನ.8- ಮಧ್ಯ ಪ್ರದೇಶದ ಕತ್ನಿ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, 85 ಹಂದಿಗಳು ಸಾವನ್ನಪ್ಪಿವೆ. ಇತ್ತೀಚೆಗೆ ದೇಶದಲ್ಲಿ ಹಲವು ಭಾಗಗಳಲ್ಲಿ ಈ ಸಾಂಕ್ರಾಮಿಕ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಕರ್ನಾಟಕದ ಮಂಗಳೂರಿನಲ್ಲಿ ಹಂದಿಜ್ವರ ಕಾಣಿಸಿಕೊಂಡು ಹಲವು ಹಂದಿಗಳನ್ನು ಕೊಳ್ಳಲಾಗಿದೆ.

ಬೆಂಗಳೂರಿನಲ್ಲೂ ಕೂಡ ಈ ಸೋಂಕು ಕಾಣಿಸಿಕೊಂಡಿದೆ. ಈಗ ಮಧ್ಯ ಪ್ರದೇಶದಲ್ಲೂ ಸೋಂಕು ಕಾಣಿಸಿಕೊಂಡಿದೆ, ಪಶು ಸಂಗೋಪನಾ ಇಲಾಖೆಯ ನಾಲ್ಕು ತಂಡಗಳು ಜಿಲ್ಲೆಯಲ್ಲಿ ತಪಾಸಣೆ ನಡೆಸಿದ್ದು, ಬಾಧಿತ 115 ಹಂದಿಗಳನ್ನು ಗುರುತಿಸಿದ್ದಾರೆ. ಜ್ವರ ತಗುಲಿದ ಹಂದಿಗಳನ್ನು ಕೊಲ್ಲಲಾಗುತ್ತಿದೆ.

ಸಿದ್ದರಾಮಯ್ಯನವರೇ ನಿಮ್ಮ ಕ್ಷೇತ್ರ ಅಂತಿಮಗೊಳಿಸಿ : ಸಿಎಂ ಬೊಮ್ಮಾಯಿ

ಅವುಗಳ ಮಾಲೀಕರಿಗೆ 2500ರಿಂದ 15 ಸಾವಿರ ರೂಪಾಯಿವರೆಗೂ ತೂಕ ಆಧರಿಸಿ ಪರಿಹಾರ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Articles You Might Like

Share This Article