ಹೈದರಾಬಾಎರ್,ಆ.3- ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿ 87 ಮಂದಿ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಆಂಧ್ರಪ್ರೇಶದಲ್ಲಿ ನಡೆದಿದೆ. ಅಚ್ಯುತಪುರಂ ಜಿಲ್ಲೆಯಲ್ಲಿರುವ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯ ಉಡುಪು ತಯಾರಿಕಾ ಘಟಕದಲ್ಲಿ ಈ ಘಟನೆನಡೆದಿದೆ.
ಪ್ರಾರಂಭದಲ್ಲಿ ಕೆಲವು ಮಹಿಳಾ ಉದ್ಯೋಗಿಗಳು ವಾಕರಿಕೆ, ವಾಂತಿ ಕಾಣಿಸಿಕೊಂಡಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಸ್ವಸ್ಥಗೊಂಡ 87 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಚ್ಚುತಪುರಂನಲ್ಲಿರುವ ಗಾರ್ಮೆಂಟ್ಸ್‍ನಲ್ಲಿ ಅನಿಲ ಸೋರಿಕೆಯಾಗಿ ಹಲವು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಅವರಲ್ಲಿ ಕೆಲವರನ್ನು ಸ್ಥಳೀಯರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅನಕಾಪಲ್ಲೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಈವರೆಗೂ ನೌಕರರ ಅನಾರೋಗ್ಯಕ್ಕೆ ನಿಜವಾದ ಕಾರಣ ತಿಳಿದುಬಂದಿಲ್ಲ. ಬ್ರಾಂಡಿಕ್ಸ್ ಗಾರ್ಮೆಂಟ್ಸ್‍ನಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಇದರಲ್ಲಿ ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಸದ್ಯ ಪ್ಲಾಂಟ್‍ನಲ್ಲಿ ಗ್ಯಾಸ್ ವಾಸನೆ ಬರುತ್ತಿಲ್ಲ, ಎಪಿಪಿಸಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.