ಚಂಡೀಗಢ, ಜ.20- ಪಂಜಾಬ್ನ 88 ವರ್ಷದ ವೃದ್ಧರಿಗೆ ಲಾಟರಿಯಲ್ಲಿ 5 ಕೋಟಿ ರೂ. ಬಹುಮಾನ ಬಂದಿದೆ. ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ಮಹಾಂತ್ ದ್ವಾರಕದಾಸ್ ಅವರಿಗೆ 5 ಕೋಟಿ ರೂ. ಮೊತ್ತದ ಮೊದಲ ಬಹುಮಾನ ಬಂದಿದೆ.
ಜ.16ರಂದು ಪಂಜಾಬ್ ರಾಜ್ಯದ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶ ಬಂದಿದ್ದು, ಇದರಲ್ಲಿ ದ್ವಾರಕದಾಸ್ ಅವರಿಗೆ 5 ಕೋಟಿ ರೂ. ಬಹುಮಾನ ಬಂದಿರುವುದಾಗಿ ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಪರಮ್ಸಿಂಗ್ ತಿಳಿಸಿದ್ದಾರೆ.
ರಕ್ಷಣಾ ವೆಚ್ಚ ಹೆಚ್ಚಿಸಿ ಶತ್ರಗಳಿಗೆ ಪ್ರತಿಸವಾಲು ಎಸೆದ ‘ಕಿರಿಕ್’ ಕೊರಿಯಾ
ಈ ಬಹುಮಾನದ ಮೊತ್ತದಲ್ಲಿ ಶೇ.30ರಷ್ಟು ತೆರಿಗೆ ಕಡಿತ ಮಾಡಿ ಅವರಿಗೆ ಹಣ ನೀಡಲಾಗುತ್ತದೆ. ಕಳೆದ 40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದೆ. ನನಗೆ ಬಹುಮಾನ ಬಂದಿರುವುದು ಭಾರೀ ಖುಷಿಯಾಗಿದೆ. ನಾನು ಗೆದ್ದ ಹಣವನ್ನು ನನ್ನ ಇಬ್ಬರು ಗಂಡು ಮಕ್ಕಳಿಗೆ ಮತ್ತು ಡೇರಾಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ತಂದೆ ಸೋದರ ಸಂಬಂಧಿಯೊಬ್ಬರಿಗೆ ಹಣ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಈಗ ಅದಕ್ಕೆ ಬಹುಮಾನ ಬಂದಿದೆ ಎಂದು ಬಹಳ ಖುಷಿಯಿಂದ ಅವರ ಮಗ ನರೇಂದ್ರಕುಮಾರ್ ಶರ್ಮ ಹೇಳಿದ್ದಾರೆ.
88-year-old, man, Punjab, wins, Rs 5 crore, lottery,