9ನೇ ಮಹಡಿಯಿಂದ ಜಾರಿ ಬಿದ್ದು ಟೆಕ್ಕಿ ಸಾವು

Jump Suicide

ಬೆಂಗಳೂರು, ಮಾ.2- ಸ್ನೇಹಿತರೆಲ್ಲ ಸೇರಿ ಪಾರ್ಟಿ ಮಾಡುತ್ತಿದ್ದಾಗ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಆಯತಪ್ಪಿ 9ನೆ ಮಹಡಿಯಿಂದ ಜಾರಿಬಿದ್ದು ಮೃತಪಟ್ಟಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಗೌತಮ್‍ಕುಮಾರ್ (28) ಮೃತಪಟ್ಟ ದುರ್ದೈವಿ. ಗೌತಮ್‍ಕುಮಾರ್ ಕಾಡಬೀಚನಹಳ್ಳಿಯ ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇಲ್ಲಿನ ಗ್ರೀನ್‍ಲೇ ಲೇಔಟ್ ಶೋಭಾ ಡೇ ಅಪಾರ್ಟ್‍ಮೆಂಟ್‍ನ 9ನೆ ಮಹಡಿಯಲ್ಲಿ ಗೌತಮ್‍ಕುಮಾರ್ ಸೇರಿ ಸ್ನೇಹಿತರೆಲ್ಲ ರಾತ್ರಿ 11.30ರಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಗೌತಮ್‍ಕುಮಾರ್ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.  ಶವವನ್ನು ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sri Raghav

Admin