9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ

IPS-01

ಬೆಂಗಳೂರು,ನ.3-ಆಡಳಿತ ಇನ್ನಷ್ಟು ಚುರುಕು ನೀಡುವ ನಿಟ್ಟಿನಲ್ಲಿ ಸರ್ಕಾರ 9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ.  ಗುರುವಾರ ವರ್ಗಾವಣೆಗೊಳಿಸಿರುವ ಬಹುತೇಕ ಅಧಿಕಾರಿಗಳು ಹಿರಿಯರಾಗಿದ್ದು ಆಯಕಟ್ಟಿನಿಂದ ಕೆಲವು ಪ್ರಮುಖ ಇಲಾಖೆಗಳಿಗೆ ಎತ್ತಂಗಡಿ ಮಾಡಲಾಗಿದೆ.  ಎಸ್.ಎಸ್.ಪಟ್ಟಣಶೆಟ್ಟಿ , ವಿ.ಪಿ.ಇಕ್ಕೇರಿ, ಎಸ್.ಶಶಿಕಾಂತ್ ಸೆಂಥಿಲ್, ಡಾ.ಬಗಡಿ ಗೌತಮ್, ಶಮೀರ್ ಶುಕ್ಲ , ಡಾ.ಎಂ.ಲೋಕೇಶ್, ರಾಜೇಂದ್ರ ಕುಮಾರ್ ಕಠಾರಿಯ, ಮೌನಿಶ್ ಮೌದ್ಗಲ್ ವರ್ಗಾವಣೆಗೊಂಡಿರುವ ಅಧಿಕಾರಿಗಳಾಗಿದ್ದಾರೆ.
ವರ್ಗಾವಣೆ ಪಟ್ಟಿ ಈ ಕೆಳಕಂಡಂತೆ
1. ಎಸ್.ಎಸ್. ಪಟ್ಟಣ ಶೆಟ್ಟಿ -ಕಾರ್ಯದರ್ಶಿಗಳು -ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
2. ವಿ.ಪಿ.ಇಕ್ಕೇರಿ: ಆಯುಕ್ತರು- ಸರ್ವೆ ಭೂಮಾಪನ ದಾಖಲೆ, ಬೆಂಗಳೂರು.
3. ಎಸ್.ಶಶಿಕಾಂತ್ ಸೆಂಥಿಲ್: ನಿರ್ದೇಶಕರು-ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
4. ಡಾ.ಬಗಡಿ ಗೌತಮ್: ಜಿಲ್ಲಾಧಿಕಾರಿ-ರಾಯಚೂರು
5. ಶಮೀರ್ ಶುಕ್ಲ : ಆಯುಕ್ತರು-ಉದ್ಯೋಗ ಮತ್ತು ತರಬೇತಿ
6. ಡಾ.ಎಂ.ಲೋಕೇಶ್: ಜಿಲ್ಲಾಧಿಕಾರಿ -ಶಿವಮೊಗಗ
7. ರಾಜೇಂದ್ರಕುಮಾರ್ ಕಠಾರಿಯ: ಕರ್ನಾಟಕ ಗಣಿ ಮತ್ತು ಪರಿಸರ ಪುನಶ್ವೇತನ ಮಂಡಳಿ
8. ಮೌನೇಶ್ ಮೌದ್ಗಲ್: ವ್ಯವಸ್ಥಾಪಕ ನಿರ್ದೇಶಕರು-ಮೈಸೂರು ಮಿನಿರಲ್ಸ್

► Follow us on –  Facebook / Twitter  / Google+

Sri Raghav

Admin