ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ 9 ಮಂದಿ ಅರೆಸ್ಟ್

Social Share

ಬೆಂಗಳೂರು, ಜ.9- ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ 9 ಮಂದಿ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.ಮೆಹಬೂಬ್ ಕೊಲೆಯಾದ ಯುವಕ. ಮೊಬೈಲ್‍ನಲ್ಲಿ ಫ್ರೀ ಫೈರ್ ಎಂಬ ಆಪ್‍ನ ಅಕೌಂಟ್ ಖರೀದಿಸಲು ಸಾಲವಾಗಿ ಕೊಟ್ಟಿದ್ದ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ ವೇಳೆ ಯುವಕರ ನಡುವೆ ನಡೆದ ಗಲಾಟೆ ಸಮಯದಲ್ಲಿ ಮಂಜುನಾಥ್ ಮತ್ತು ಮೆಹಬೂಬ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಈ ಇಬ್ಬರನ್ನು ಕೋಣನಕುಂಟೆ ಕ್ರಾಸ್‍ನಲ್ಲಿರುವ ಆಸ್ಪ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿತ್ತು , ಹೆಚ್ಚಿನ ಚಿಕಿತ್ಸೆಗೆ ಮೆಹಬೂಬ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ , ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಈ ಸಂಂಬಂಧ 9 ಮಂದಿ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಸಿದ್ದಾರೆ. ಇವರು ಕೃತ್ಯಕ್ಕೆ ಬಳಸಿದ್ದ ಲಾಂಗ್, ಕತ್ತಿ, ಡ್ರಾಗರ್, ಹಾಕಿ ಸ್ಟಿಕ್, ಮರದ ದೊಣ್ಣೆ ಹಾಗೂ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತ ಹರೀಶ್ ಪಾಂಡೆ, ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ ವಿಭಾಗ ಎಸಿಪಿ ಶಿವಕುಮಾರ್. ಟಿ.ಎಂ , ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನಂಜೇಗೌಡ.ಎಸ್ ನೇತೃತ್ವದಲ್ಲಿ ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಗಳಾದ ವಿನಯ್ ಕೆ.ಎಲ್, ಸೌಮ್ಯ.ಎಂ.ಎಸ್. ಅರುಣ್ ಕುಮಾರ್ ಎಂ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article