ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆ, ಸಿಡಿಲಿಗೆ 9 ಮಂದಿ ದುರ್ಮರಣ

Social Share

ಭೂಪಾಲ್, ಆ.7- ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಅನಾಹುತಗಳು ಸಂಭವಿಸುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿಶಾ, ಸಟ್ನಾ ಮತ್ತು ಗುಣಾ ಜಿಲ್ಲೆಗಳಲ್ಲಿ ಆಗಸದಲ್ಲಿ ಉಂಟಾದ ಸಿಡಿಲಿನಿಂದಾಗಿ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.

ಮರದ ಆಸರೆಗೆ ಹೋಗಿ ಜೀವ ಕಳೆದುಕೊಂಡರು: ಮಧ್ಯಪ್ರದೇಶದ ವಿಶಾ ಜಿಲ್ಲೆಯ ಅಗ್ಸೋಡ್ ಗ್ರಾಮದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಆಸರೆ ಪಡೆದಿದ್ದಾಗ ಉಂಟಾದ ಸಿಡಿಲಿಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಕುನ್ವರ್ ಸಿಂಗ್ ಮುಕ್ತಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೃತಪಟ್ಟ ನತದೃಷ್ಟರನ್ನು ಗಾಲು ಮಲ್ವಿಯಾ, ರಾಮು, ಗುಡ್ಡು ಮತ್ತು ಪ್ರಭುಲಾಲ್ ಎಂದು ಗುರುತಿಸಲಾಗಿದ್ದು, ಮೃತಪಟ್ಟವರೆಲ್ಲರೂ 30 ರಿಂದ 40 ವಯೋಮಾನದವರು ಎಂದು ಕುನ್ವರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ವಾರಸುದಾರರಿಗೆ ಒಪ್ಪಿಸ ಲಾಗಿದೆ.

ನಾಲ್ವರ ಬಲಿ, ಇಬ್ಬರಿಗೆ ಗಾಯ:
ಸಟ್ನಾ ಜಿಲ್ಲೆಯ ಪೋಡಿ- ಪಟುರ್ವಾ ಮತ್ತು ಜಟ್ವಾರಾ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಅವಘಡಗಳಲ್ಲಿ ನಾಲ್ವರು ಸಾವನ್ನಪ್ಪಿ, ಇಬ್ಬರು ಗಾಯ ಗೊಂಡಿರುವ ಘಟನೆ ಸಂಭವಿಸಿದೆ.

ಅವಘಡದಲ್ಲಿ ಮೃತಪಟ್ಟವರನ್ನು ಅಂಜನಾ (34), ಚಂದ್ರ( 65), ರಾಜಕುಮಾರ್ (65) ಮತ್ತು ರಾಮ್‍ಕುಮಾರ್ ಯಾದವ್ (43) ಎಂದು ಗುರುತಿಸಲಾಗಿದ್ದರೆ, 12 ಮತ್ತು 16 ವರ್ಷದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಬಳಿ ಮತ್ತೊಂದು ಪ್ರಕರಣದಲ್ಲಿ ಗುಣಾ ಜಿಲ್ಲೆಯ ಭೋರಾ ಗ್ರಾಮದಲ್ಲಿ ಉಂಟಾದ ಸಿಡಿಲಿಗೆ ಮನ್ನು ಹೈರ್ವಾರ್ (45) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಇನ್ನೂ 3 ದಿನ ಮಳೆ:
ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಧ್ಯಪ್ರದೇಶದಲ್ಲಿ ಇನ್ನೂ 3 ದಿನಗಳ ಕಾಲ ತುಂತುರು ಅಥವಾ ಭಾರೀ ಮಳೆ ಬೀಳಲಿದೆ ಎಂದು ಭೂಪಾಲ್‍ನ ಹವಾಮಾನ ಇಲಾಖೆಯ ಹಿರಿಯ ತಜ್ಞ ವೇದ್ ಪ್ರಕಾಶ್‍ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Articles You Might Like

Share This Article