ಮಾಲ್ಡೀವ್ಸ್‌ನಲ್ಲಿ ಅಗ್ನಿ ಅನಾಹುತ, 9 ಭಾರತೀಯರ ಸಾವು

Social Share

ಮಾಲೆ,ನ.10- ಮಾಲ್ಡೀವ್ಸ್‍ನ ರಾಜಧಾನಿ ಮಾಲೆಯಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ 9 ಭಾರತೀಯರು ಸೇರಿ 11 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ನಗರದ ಹೃದಯ ಭಾಗದ ಕ್ರೀಡಾಂಗಣದ ಬಳಿ ಇರುವ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಟ್ಟಡದ ಮೇಲಿನ ಮಹಡಿಯಲ್ಲಿ ಈವರೆಗೂ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮೃತಪಟ್ಟವರಲ್ಲಿ ಬಹುತೇಕ ಮನೆ ಕೆಲಸದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಕಟ್ಟಡದ ನೆಲಮಹಡಿಯಲ್ಲಿರುವ ವಾಹನಗಳ ದುರಸ್ತಿ ಗ್ಯಾರೇಜ್‍ನಿಂದ ಬೆಂಕಿ ಕಾಣಿಸಿಕೊಂಡು ನಾಲ್ಕು ಮಹಡಿಯ ಕಟ್ಟಡವನ್ನು ಬೆಂಕಿ ಕೆನ್ನಾಲಿಗೆ ಸಂಪೂರ್ಣ ಆವರಿಸಿದೆ.

ರಾಷ್ಟ್ರೀಯ ಪ್ರಕೃತಿ ವಿಕೋಪ ಪಡೆಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದೆ. ಕಟ್ಟಡದಿಂದ ರಕ್ಷಿಸಲ್ಪಟ್ಟವರಿಗೆ ಸಮೀಪದಲ್ಲೇ ಪುನರ್ ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಮಾಲ್ಡೀವ್ಸ್‍ನಲ್ಲಿರುವ ಭಾರತೀಯ ರಾಯಬಾರಿ ಕಚೇರಿ ಅಗ್ನಿ ದುರಂತದಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದು, ತಾವು ಮಾಲ್ಡೀವ್ಸ್‍ನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.

ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರೆಸ್ಟ್

ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಲಾಗಿದ್ದು, ಸಂಬಂಧಿಕರ ಮಾಹಿತಿಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಮಾಲ್ಡೀವ್ಸ್ ರಜಾಕಾಲಕ್ಕೆ ಹೆಸರಾದ ಪ್ರವಾಸಿ ತಾಣವಾಗಿದೆ. ಮಾಲೆಯಲ್ಲಿ ಸುಮಾರು ಎರಡೂವರೆ ಲಕ್ಷ ಜನ ಸಂಖ್ಯೆ ಇದ್ದು, ಬಹುತೇಕರು ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾದಿಂದ ವಲಸೆ ಬಂದವರಾಗಿದ್ದಾರೆ. ಕೋವಿಡ್ ವೇಳೆ ಇವರ ಜೀವನ ನಿರ್ವಹಣೆ ಪರಿಪಾಟಿಲು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ರಸ್ತೆ ಡಾಂಬರು ಕಿತ್ತುಬಂದರೆ ಎಂಜಿನಿಯರ್‌ಗಳಿಗೆ ಕಾದಿದೆ ಮಾರಿಹಬ್ಬ

Articles You Might Like

Share This Article