ಜಮ್ಮು, ಸೆ 14 – ಮಿನಿ ಬಸ್ಸೊಂದು ಆಳವಾದ ಕಂದರಕ್ಕೆ ಉರುಳಿದ ಪರಿಣಾಮ 9 ಜನರು ಸಾವನ್ನಪ್ಪಿ , 27 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲಾಯಲ್ಲಿ ನಡೆದಿದೆ.
ಸುಮಾರು 36 ಪ್ರಯಾಣಿಕರನ್ನು ಹೊತ್ತ ಬಸ್ ಗಾಲಿ ಮೈದಾನದಿಂದ ಪೂಂಚ್ ತೆರಳುತ್ತಿದ್ದಾಗ ಸಾವ್ಜಿಯಾನ ಗಡಿಯ ಬೆಲ್ಟನ್ ಬ್ರಾರಿ ನಾಲಾ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೇನೆ, ಪೊಲೀಸರು ಮತ್ತು ಸ್ಥಳೀಯ ಗ್ರಾಮಸ್ಥರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವನರ್ ಮನೋಜ್ ಸಿನ್ಹಾ ಅವರು ಅಪಘಾತದಲ್ಲಿ ಜೀವಕಳೆದುಕೊಂಡ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಕಂದಕದಿಂದ ಗಾಯಾಳುಗಳನ್ನು ಮೇಲಕ್ಕೆತ್ತಿ ಆಸ್ಪತ್ರಗೆ ಸಾಗಿಸಲಾಗಿದೆ.