90 ದಿನಗಳೊಳಗೆ ತನಿಖೆಯ ಪೂರ್ಣ ವರದಿ ಸಲ್ಲಿಸಲು ಸೂಚನೆ : ವಿ.ಎಸ್.ಉಗ್ರಪ್ಪ

ugrappa

ತುಮಕೂರು, ಜ.17- ತುಮಕೂರು ನಗರದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಆರೋಗ್ಯ ಹಾಗೂ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ತಡೆ ಸಮಿತಿ 90 ದಿನಗಳೊಳಗೆ ತನಿಖೆಯ ಪೂರ್ಣ ವರದಿ ನೀಡಲು ಸೂಚಿಸಿವೆ.  ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ಸಂತ್ರಸ್ಥೆ ಹಾಗೂ ಆಕೆಯ ತಾಯಿ ಮತ್ತು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂತ್ರಸ್ಥೆಗೆ ಚಿಕಿತ್ಸೆ ನೀಡಿರುವ ವೈದ್ಯರೂ ಸೇರಿದಂತೆ ಎಲ್ಲರಿಂದಲೂ ಪರಿಪೂರ್ಣ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಭಾರತೀಯ ದಂಡ ಸಂಹಿತೆ ಕಲಂ 376ಸಿ, 202 ಮತ್ತು 36ರ ರೀತ್ಯಾ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ ಎಂದರು.

ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರವೆಸಗಿರುವುದು ನಾಗರೀಕತೆಯನ್ನು ಪ್ರಶ್ನೆ ಮಾಡುವಂತಿದೆ. ತನಿಖೆಯನ್ನು ಕಾನೂನು ಚೌಕಟ್ಟಿನಲ್ಲಿ 90 ದಿನಗಳೊಳಗೆ ಪೂರ್ಣಗೊಳಿಸಿ, ವಿಚಾರಣೆಯನ್ನು ಅತಿಬೇಗ ಮುಕ್ತಾಯಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸಂತ್ರಸ್ಥೆಗೆ ವೈದ್ಯಕೀಯ ವೆಚ್ಚಕ್ಕಾಗಿ 25 ಸಾವಿರ ರೂ. ಈಗಾಗಲೇ ನೀಡಲಾಗಿದೆ. ನಿರ್ಭಯ ಮತ್ತಿತರ ಕಾರ್ಯಕ್ರಮಗಳಡಿ ಸಿಗಬೇಕಾದ 3 ಲಕ್ಷ ರೂ.ಗಳನ್ನು ಶೀಘ್ರವೇ ಕೊಡುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದರು.ಈ ರೀತಿ ಅಪರಾಧವೆಸಗುವವರನ್ನು ಕಠಿಣವಾಗಿ ಶಿಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಶೇ.3ರಷ್ಟು ಮಾತ್ರ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.

ಸರ್ಕಾರ ಮತ್ತು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಿ ಶೇ.97ರಷ್ಟು ಶಿಕ್ಷೆ ಕೊಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಇದಕ್ಕಾಗಿ ತನಿಖಾಧಿಕಾರಿ ಡಿಸಿ ಮತ್ತು ಎಸ್‍ಪಿಗಳನ್ನು ಕಾರಣೀಭೂತರನ್ನಾಗಿ ಮಾಡಲು ನನ್ನ ಅಧ್ಯಕ್ಷತೆಯ ಸಮಿತಿ ನೀಡಿರುವ ಪ್ರಾರಂಭಿಕ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಅಂತಿಮ ವರದಿಯಲ್ಲೂ ಕೂಡ ಇದನ್ನು ಉಲ್ಲೇಖಿಸುವುದಾಗಿ ಅವರು ಹೇಳಿದರು.ಸಮಿತಿು ಸದಸ್ಯರಾದ ಮೋಟಮ್ಮ, ಶರಣಪ್ಪ ಮಟ್ಟೂರು, ಮಾಜಿ ವಿಧಾನಸಭಾ ಸದಸ್ಯೆ ಪ್ರಫುಲ್ಲಾ ಮಧುಕರ್, ವಿಮಲ, ಲೀಲಾ ಸಂಪಿಗೆ, ಪ್ರಭಾ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin