90 ಮೀ. ಎತ್ತರದ ಏರಿಯಲ್ ಲ್ಯಾಡರ್ ವಾಹನಗಳಿಗೆ ಚಾಲನೆ

Social Share

ಬೆಂಗಳೂರು,ಅ.20- ಅತಿ ಎತ್ತರದ ಕಟ್ಟಡಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಉಂಟಾದಾಗ ತಕ್ಷಣವೇ ರಕ್ಷಣೆಗೆ ಧಾವಿಸುವ ಏರಿಯಲ್ ಲ್ಯಾಡರ್ ಫ್ಲಾಟ್‍ಫಾರ್ಮ್ ವಾಹನಗಳನ್ನು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು.

ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಕೋಟಾ ಶ್ರೀನಿವಾಸಪೂಜಾರಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್, ಅಗ್ನಿಶಾಮಕ ಪಡೆಯ ಡಿಐಜಿ ಅಮರ್‍ಕುಮಾರ್ ಪಾಂಡೆ ಮತ್ತಿತರರು ವಾಹನಗಳನ್ನು ಲೋಕಾರ್ಪಣೆಗೊಳಿಸಿದರು.

ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ

ಮುಂಬೈ ಹೊರತುಪಡಿಸಿದರೆ ಏರಿಯಲ್ ಲ್ಯಾಡರ್ ಫ್ಲಾಟ್ ಫಾರ್ಮ್ ಹೊಂದಿರುವ ಎರಡನೆ ನಗರ ಎಂಬ ಹೆಗ್ಗಳಿಗೆ ಬೆಂಗಳೂರು ಪಾತ್ರವಾಗಿದೆ. ಸುಮಾರು 90 ಮೀಟರ್ ಎತ್ತರದ ತಲುಪಬಲ್ಲ ಈ ವಾಹನಗಳನ್ನು 32 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ.

ವಾಹನಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆಧುನಿಕ ಕಾಲದಲ್ಲಿ ಈ ವಾಹನಗಳು ಆಪತ್ತು ಎದುರಾದಾಗ ಜನರ ರಕ್ಷಣೆಗೆ ಧಾವಿಸುತ್ತವೆ. ವಿಶ್ವದ ಎಲ್ಲಾ ಮೆಟ್ರೋ ನಗರಗಳಲ್ಲಿ ಅತಿ ಅವಶ್ಯಕವಾಗಿ ಇದನ್ನು ಉಪಯೋಗಿಸುತ್ತಾರೆ ಎಂದು ಹೇಳಿದರು.

ಪ್ರಸ್ತುತ ಭಾರತದಲ್ಲಿ ಮುಂಬೈ ಬಿಟ್ಟರೆ ಬೆಂಗಳೂರಿನಲ್ಲಿ ಈ ವಾಹನಗಳು ಕಾರ್ಯಾಚರಣೆ ನಡೆಸುತ್ತವೆ. ಎತ್ತರದ ಕಟ್ಟಡಗಳಲ್ಲಿ ಅಗ್ನಿ ಅವಘಡ ಉಂಟಾದಾಗ ಈ ವಾಹನಗಳ ಅವಶ್ಯಕತೆ ತುಂಬಾ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಐಕ್ಯತೆಗೆ ಧಕ್ಕೆ ತರುವ ಶಕ್ತಿಗಳನ್ನು ಸಹಿಸಲ್ಲ : ಆರಗ ಜ್ಞಾನೇಂದ್ರ

ಹಿಂದೆ ನಾನು ಗೃಹ ಮಂತ್ರಿಯಾಗಿದ್ದಾಗ ಈ ವಾಹನಗಳನ್ನು ಖರೀದಿಸಲು ಅನುದಾನ ಒದಗಿಸಿದ್ದೆ. ಆದರೆ, ಅದು ಅನುಷ್ಠಾನವಾಗಿರಲಿಲ್ಲ. ವಿಳಂಬವಾದರೂ ಗೃಹ ಸಚಿವ ಆರಗ ಜ್ಞಾನೆಂದ್ರ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಇದಕ್ಕಾಗಿ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ ಎಂದರು.

ಅಗ್ನಿಶಾಮಕ ಪಡೆಗೆ ದೊಡ್ಡ ಶಕ್ತಿಯೇ ಇದೆ. ಈ ಆಧುನಿಕ ಲ್ಯಾಡರ್‍ಗಳು ಆಪತ್ ಕಾಲದ ಮಿತ್ರನಂತೆ ಕಾರ್ಯ ನಿರ್ವಹಿಸುತ್ತವೆ. ಎತ್ತರ ಕಟ್ಟಡ ಕಟ್ಟಬೇಕಾದರೆ ಎಲ್ಲಾ ರೀತಿಯ ವ್ಯವಸ್ಥೆ ಇರಬೇಕು. ವಿಶೇಷವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.

ಈವರೆಗೂ ನಮ್ಮಲ್ಲಿ 50 ಮೀಟರ್ ಎತ್ತರದ ಲ್ಯಾಡರ್‍ಗಳಿದ್ದವು. ಈಗ 90 ಮೀಟರ್ ಎತ್ತರದ ಲ್ಯಾಡರ್‍ಗಳನ್ನು ಖರೀದಿಸಿದ್ದೇವೆ. ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಇಲ್ಲಿನ ಜನರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಯಾರಿಗೆ ಆಪತ್ತು ಎದುರಾದಾಗ ನೆನಪಾಗುವುದು ಅಗ್ನಿಶಾಮಕ ಪಡೆ. ತಮ್ಮ ಪ್ರಾಣದ ಹಂಗು ತೊರೆದು ಇನ್ನೊಬ್ಬರ ಪ್ರಾಣ ರಕ್ಷಣೆ ಮಾಡುತ್ತಾರೆ ಎಂದು ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿವೃಷ್ಟಿ ಸಂದರ್ಭದಲ್ಲೂ ಅಗ್ನಿಶಾಮಕ ಪಡೆಯವರು ಸಾವಿರಾರು ಜನರನ್ನು ರಕ್ಷಣೆ ಮಾಡಿದ್ದಾರೆ ಎಂದು ನಾನು ಬೇರೆ ಬೇರೆ ಭಾಗಕ್ಕೆ ಹೋದಾಗ ಸಾರ್ವಜನಿಕರೇ ಹೇಳಿದ್ದಾರೆ. ಅವರ ಸೇವೆಯನ್ನು ಎಷ್ಟು ಸ್ಮರಿಸಿದರೂ ಸಾಲದು ಎಂದರು.

ಕೆಲ ತಿಂಗಳ ಹಿಂದೆ ಮನೆಗೆ ಬೆಂಕಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದರು. ಇಂತಹ ವಾಹನಗಳಿದ್ದರೆ ಅವರನ್ನು ರಕ್ಷಣೆ ಮಾಡಬಹುದಿತ್ತು. ಇಲಾಖೆಯನ್ನು ಬಲಪಡಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಾಖಲೆ ಬರೆದಿದ್ದಾರೆ ಎಂದು ಪ್ರಶಂಶಿಸಿದರು.

ಇಂತಹ ಉಪಕರಣಗಳು ನಮ್ಮ ಇಲಾಖೆ ಸಿಬ್ಬಂದಿಯ ಶಕ್ತಿಯನ್ನು ಹೆಚ್ಚಿಸುತ್ತವೆ. ಗೃಹ ಇಲಾಖೆಯನ್ನು ಬಲಪಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಸಹಕಾರ ಕೊಟ್ಟಿವೆ. 4 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ, 2ಸಾವಿರ ಸಿಬ್ಬಂದಿ ನೇಮಕ, ವಸತಿ ಸೌಲಭ್ಯ ಹಾಗೂ ತರಬೇತಿ ನೀಡಬೇಕೆಂಬ ಬೇಡಿಕೆ ಇದೆ. ಇವೆಲ್ಲವನ್ನೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಏರಿಯಲ್ ಲ್ಯಾಡರ್‍ನ ಏಣಿಯ ತೊಟ್ಟಿಲ ಮೇಲೆ ಸುಮಾರು 90 ಮೀಟರ್ ಎತ್ತರದವರೆಗೂ ಹೋಗಿ ವೀಕ್ಷಣೆ ಮಾಡಿದರು. ಇದು ಸಹಜವಾಗಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಯಿತು.

Articles You Might Like

Share This Article