9/11 ಭಯೋತ್ಪಾದಕರ ದಾಳಿಗೆ ಇಂದು 16 ವರ್ಷ

America-Attack--01

ನ್ಯೂಯಾರ್ಕ್, ಸೆ.11-ಕಳೆದ ವಾರದಿಂದ ಎರಡು ವಿನಾಶಕಾರಿ ಚಂಡಮಾರುತಕ್ಕೆ ಅಮೆರಿಕಾ ತತ್ತರಿಸಿದೆ. ಈ ನಡುವೆ ಜಗತ್ತನ್ನೇ ಬೆಚ್ಚಿ ಬೀಳಿಸಿದ 9/11 ಭಯೋತ್ಪಾದಕ ದಾಳಿ ನಡೆದು ಇಂದಿಗೆ 16 ವರ್ಷ ಕಳೆದಿದೆ. ಇದರ ನೆನಪಿಗಾಗಿ ವಿಶ್ವ ವ್ಯಾಪಾರ ಕೇಂದ್ರ (ಡಬ್ಲ್ಯುಟಿಒ)ಮುಂದೆ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೇಣದ ಬತ್ತಿ ಬೆಳಗಿಸಿ ಮಡಿದವರಿಗೆ ಸಾರ್ವಜನಿಕರು ಆತ್ಮಶಾಂತಿ ಕೋರಿದರು. ಈ ಭೂಮಿಯಲ್ಲಿ ವಾಸಿಸುವ ನಾವು ಒಂದು ಭಾಗ. ನಾವೆಲ್ಲರೂ ಒಂದೇ. ನಿಮ್ಮನ್ನು ಪ್ರೀತಿಸುತ್ತಿದ್ದೇನೆ, ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಾರ್ವಜನಿಕರು ಜಗತ್ತಿಗೆ ಸಂದೇಶ ರವಾನಿಸಿದರು.

ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರತಿವರ್ಷ ಗೌರವ ಸಮರ್ಪಣೆ ಸಲ್ಲಿಸಲಾಗುತ್ತಿದೆ. ಥ್ಯಾಂಕ್ಯೂ ನ್ಯೂಯಾರ್ಕ್ ಎಂದು ದಾಳಿಯಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ಹೇಳಿದರು. ಈ ಘೋರ ದಾಳಿಯಲ್ಲಿ 3 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದು, ಇಂತಹ ಭೀಕರ ಘಟನೆಯನ್ನು ಅಮೆರಿಕಾ ಎಂದಿಗೂ ಮರೆಯುವುದಿಲ್ಲ ಎಂದು ಅಲ್ಲಿನ ಜನರು ತಿಳಿಸಿದ್ದಾರೆ.

Sri Raghav

Admin