Home ಇದೀಗ ಬಂದ ಸುದ್ದಿ ಬೆಂಗಳೂರು ಪ್ರೆಸ್‌‍ಕ್ಲಬ್‌ಗೆ ಹೊಸ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು ಪ್ರೆಸ್‌‍ಕ್ಲಬ್‌ಗೆ ಹೊಸ ಪದಾಧಿಕಾರಿಗಳ ಆಯ್ಕೆ

0
ಬೆಂಗಳೂರು ಪ್ರೆಸ್‌‍ಕ್ಲಬ್‌ಗೆ ಹೊಸ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು, ಜೂ.8-ಬೆಂಗಳೂರು ಪ್ರೆಸ್‌‍ಕ್ಲಬ್‌ಗೆ ನಿನ್ನೆ ನಡೆದ 2024-25ನೇ ಸಾಲಿನ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆರ್‌.ಶ್ರೀಧರ, ಉಪಾಧ್ಯಕ್ಷರಾಗಿ ಬಿ.ಎನ್‌.ಮೋಹನ್‌ಕುಮಾರ್‌, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ.ಶಿವಕುಮಾರ್‌(ಬೆಳ್ಳಿತಟ್ಟೆ) ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಜಿ.ವೈ.ಮಂಜುನಾಥ್‌, ಜಂಟಿ ಕಾರ್ಯದರ್ಶಿಯಾಗಿ ಬಿ.ಎನ್‌.ಧರಣೇಶ್‌ ಖಜಾಂಚಿಯಾಗಿ ಜಿ.ಗಣೇಶ್‌ ಅವರು ಚುನಾಯಿತರಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೋಹಿಣಿ ವಿ.ಅಡಿಗ, ಸಿ.ಆರ್‌.ಮಂಜುನಾಥ್‌, ಮುಮ್ತಾಜ್‌ ಅಲೀಂ, ಯಾಸಿರ್‌ ಮುಶ್ತಾಕ್‌, ಎ.ಎಚ್‌.ಶರಣಸಪ್ಪ , ಶಿವಣ್ಣ (ಈ ಸಂಜೆ)ಮಿನಿ ತೇಜಸ್ವಿ(ಮಹಿಳಾ ಮೀಸಲು)ಅವರು ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರು ಪ್ರೆಸ್‌‍ಕ್ಲಬ್‌ನ ಪ್ರಕಟಣೆ ತಿಳಿಸಿದೆ.