ನವದೆಹಲಿ, ಆ.1– ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾನು ರನ್‌ಔಟ್ ಆಗಿದ್ದೆ ನನ್ನ ಕ್ರಿಕೆಟ್ ಜೀವನದ ಅತ್ಯಂತ ಬೇಸರದ ಕ್ಷಣವಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
2019ರ ಜುಲೈ 9 ರಂದು ಓಲ್ಡ್ ಟೆಫಾರ್ಡ್‌ನಲ್ಲಿ ನಡೆದಿದ್ದ ಸೆಮೀಸ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 240 ರನ್ ಗಳಿಸಿತ್ತು. ಆ ನಂತ ಎಡೆಬಿಡದೆ ಸುರಿದ ಮಳೆಯಿಂದಾಗಿ ಫಲಿತಾಂಶದ ನಿರ್ಣಯಕ್ಕಾಗಿ ಮೀಸಲು ದಿನವನ್ನು ಮೀಸಲಿಡಲಾಗಿತ್ತು. ಈ ಹಂತದಲ್ಲಿ ಭಾರತ ತಂಡವು ಫೈನಲ್ ಹಂತ ತಲುಪುವ ಮೆಚ್ಚಿನ ತಂಡವಾಗಿತ್ತು.
ತಂಡದ ಮೊತ್ತ 5 ರನ್‌ಗಳಾಗುವಷ್ಟರಲ್ಲೇ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹಾಗೂ ವಿರಾಟ್‌ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ರವೀಂದ್ರ ಜಡೇಜಾ (77 ರನ್) ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು ಪಂದ್ಯವನ್ನು ಗೆಲ್ಲುವಿನ ದಡದತ್ತ ತೆಗೆದುಕೊಂಡು ಹೋಗಿದ್ದರಾದರೂ ಆ ಸಮಯದಲ್ಲಿ ರನ್ ಕದಿಯುವ ರಭಸದಲ್ಲಿ ಮಾರ್ಟಿನ್ ಗುಪ್ಟಿನ್‌ರ ಚುರುಕಿನ ಕ್ಷೇತ್ರ ರಕ್ಷಣೆಯಿಂದ ಎಂಎಸ್‌ಡಿ ರನ್ ಔಟ್ ಆದರು. ಆನಂತರ ತಂಡವು ಸೋಲಿನ ದವಡೆಗೆ ಸಿಲುಕಿ ಫೈನಲ್ ಹಂತ ತಲುಪುವ ಅವಕಾಶ ಕೈಚೆಲ್ಲಿಕೊಂಡಿತು.
ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಎಂಎಸ್ ಧೋನಿ ಅವರು, `ಇದು ಕಷ್ಟಕರವಾಗಿತ್ತು ಏಕೆಂದರೆ ಇದು ನನ್ನ ಕೊನೆಯ ವಿಶ್ವಕಪ್ ಎಂದು ನನಗೆ ತಿಳಿದಿತ್ತು, ಆದ್ದರಿಂದ ಗೆಲ್ಲುವ ತಂಡದಲ್ಲಿದ್ದರೆ ಒಳ್ಳೆಯದು. ಇದು ಹೃದಯ ವಿದ್ರಾವಕ ಕ್ಷಣವಾಗಿದೆ, ಆದ್ದರಿಂದ ನಾವು ಫಲಿತಾಂಶವನ್ನು ಸ್ವೀಕರಿಸಿದ್ದೇವೆ ಮತ್ತು ನಾವು ಮುಂದುವರಿಯಲು ಪ್ರಯತ್ನಿಸಿದ್ದೇವೆ ‘ಎಂದು ಧೋನಿ ಹೇಳಿದರು.
ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಇದು ಸಮಯ ತೆಗೆದುಕೊಳ್ಳುತ್ತದೆ ಮತ್ತು ವಿಶ್ವಕಪ್ ನಂತರ ಸ್ವಲ್ಪ ಸಮಯ ಸಿಗುತ್ತದೆ. ಅದರ ನಂತರ ನಾನು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ, ಹಾಗಾಗಿ ನನಗೆ ಸಾಕಷ್ಟು ಸಮಯ ಸಿಕ್ಕಿತು.
ಆದ್ದರಿಂದ, ನಿಜಕ್ಕೂ ಇದು ಹೃದಯಾಘಾತವಾಗಿತ್ತು, ಆದರೆ ಅದೇ ಸಮಯದಲ್ಲಿ ನೀವು ಅದರಿಂದ ಹೊರಬರಬೇಕು. ಆದ್ದರಿಂದ ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಿ, ಆದರೆ ನೀವು ಅದನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಎಂಎಸ್ಧೋನಿ ತಿಳಿಸಿದರು.