ಬೆಂಗಳೂರು, ನ.8- ಕಾವೇರಿ ನ್ಯಾಯಾೀಧಿಕರಣ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹಂಚಿಕೆಯಾಗಿರುವಂತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ 24 ಟಿಎಂಸಿ ನೀರನ್ನು ಮೀಸಲಿಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಸಚಿವರು ಆಗಿರುವ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ಅಲ್ಲಿ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಮ್ಮ ಅಧಿಕಾರಿಗಳು ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡುವುದಾಗಿ ಪ್ರಾಧಿಕಾರದವರು ಭರವಸೆ ನೀಡಿದ್ದಾರೆ. ಬಹುಶಃ ಮುಂದಿನ ವಾರ ವಿಚಾರಣೆಗೆ ಸಮಯ ನಿಗದಿಯಾಗಬಹುದು. ನಾವು ಅದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದೇವೆ. ನಮಗೆ ಎಷ್ಟು ನೀರು ಬೇಕು, ಎಷ್ಟು ಉಳಿತಾಯವಾಗಲಿದೆ, ಸಮುದ್ರಕ್ಕೆ ಎಷ್ಟು ಹರಿದು ಹೋಗುತ್ತದೆ ಎಂಬ ಮಾಹಿತಿಯನ್ನು ಸಲ್ಲಿಸಲಿದ್ದೇವೆ.
ನಮಗೆ ಕುಡಿಯುವ ನೀರಿಗೆ 24 ಟಿಎಂಸಿ ಬೇಕು ಎಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಮೀಸಲಿಟ್ಟಿದ್ದೇವೆ. ಅದನ್ನು ಬಿಡಬ್ಯೂಎಸ್‍ಎಸ್‍ಬಿ ಬಳಸಿಕೊಳ್ಳಬೇಕು ಎಂದು ನಿನ್ನೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಮೊದಲು 18 ಟಿಎಂಸಿ ನಿಗದಿ ಮಾಡಲಾಗಿತ್ತು. ಉಳಿಕೆ ಆರು ಟಿಎಂಸಿಯನ್ನು ಬಳಕೆ ಮಾಡಲು ಪರಿಶೀಲನೆ ನಡೆಸಿ ಅನುಮತಿ ನೀಡಲಾಗಿದೆ. ಗರಿಷ್ಠ 24 ಟಿಎಂಸಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ. ಇನ್ನೂ ಮುಂದೆ ಅಣೆಕಟ್ಟೆಗಳಲ್ಲಿ 24 ಟಿಎಂಸಿಯನ್ನು ಮೀಸಲಿರಿಸಿ ನಂತರ ಉಳಿದ ನೀರನ್ನು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್
ಕೆಆರ್‍ಎಸ್‍ನಲ್ಲಿ ನೀರಿದೆ ನಮಗೆ ಬಿಡಿ ಎಂದು ತಮಿಳುನಾಡಿನವರು ಕೇಳುತ್ತಾರೆ. ಇನ್ನೂ ಮುಂದೆ ಕುಡಿಯುವ ನೀರಿಗೆ 24 ಟಿಎಂಸಿಯನ್ನು ಮೀಸಲಿಡಬೇಕು. ಇದು 2018ರ ಸುಪ್ರೀಂಕೋರ್ಟ್ ಆದೇಶದಲ್ಲೇ ಉಲ್ಲೇಖವಿದೆ. ನಮ್ಮ ಹಕ್ಕನ್ನು ನಾವು ಕಳೆದುಕೊಳ್ಳುವುದಿಲ್ಲ. ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದಾದರೆ ನಮ್ಮ ಅಭ್ಯಂತರ ಇಲ್ಲ. ನ್ಯಾಯಾಲಯದ ಆದೇಶದ ಪ್ರಕಾರವೇ ನಿರ್ಧಾರ ಕೈಗೊಂಡು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ 24 ಟಿಎಂಸಿ ಬಳಸಿಕೊಳ್ಳಲು ಅನುಮತಿಸಿಸಲಾಗಿದೆ ಎಂದರು.
ಬೆಂಗಳೂರು ಸುತ್ತಮುತ್ತಾ ಆನೆಕಲ್‍ನಲ್ಲಿ ಬೆಂಗಳೂರು ಬೆಳೆದಿದೆ, ವಿಮಾನ ನಿಲ್ದಾಣಕ್ಕೆ ನೀರು ಪೂರೈಸಲೇಬೇಕು.
ಹಿಂದೆ ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ಮುಂದಕ್ಕೆ ನೀರು ಕೊಡಬಾರದು ಎಂದು ನಿರ್ಧರಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಆದೇಶ ಬದಲಿಸಿವೆ, ಹೀಗಾಗಿ ಎಲ್ಲಾ ಕಡೆಗೂ ನೀರು ಹಂಚಿಕೆ ಮಾಡಬೇಕಿದೆ, ಬೆಂಗಳೂರು ಉತ್ತರ ಭಾಗದಲ್ಲಿ ಬೆಳೆಯುತ್ತಿದೆ ಎಂದರು.
ಅದಾನಿ ಸಂಸ್ಥೆಯಲ್ಲಿ ಅಮೆರಿಕದಿಂದ 553 ಮಿಲಿಯನ್ ಡಾಲರ್ ಹೂಡಿಕೆ
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿನಲ್ಲಿ ಕೆಲ ನದಿಗಳ ಅಂತರ್ ಜೋಡಣೆಯ ಪ್ರಸ್ತಾವನೆ ಮಾಡಿರುವುದರ ಬಗ್ಗೆ ಸದ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡುತ್ತೇವೆ ಅದರ ಬಗ್ಗೆ ಅವರಿಗೆ ಚಿಂತೆ ಬೇಡ. ನಾವು ನಮ್ಮ ರಾಜ್ಯದಲ್ಲಿ ಆಂತರಿಕವಾಗಿ ನದಿ ಜೋಡಣೆ ಮಾಡುತ್ತೇವೆಯೋ, ಅಣೆಕಟ್ಟುತ್ತೇವೆಯೋ ಅದರ ಬಗ್ಗೆ ತಮಿಳುನಾಡು ತಲೆ ಕೆಡಿಕೊಳ್ಳುವ ಅಗತ್ಯ ಇಲ್ಲ. ಮಳೆ ಇಲ್ಲದೆ ಸಂಕಷ್ಟ ಸಂದರ್ಭದಲ್ಲೂ ತಮಿಳುನಾಡಿಗೆ 2 ಸಾವಿರ ಎರಡುವರೆ ಸಾವಿರ ಬಿಡಿ ಎನ್ನುತ್ತಾರೆ, ಸಂಕಷ್ಟ ಕಾಲದಲ್ಲಿ ಇದನ್ನು ಪಾಲನೆ ಮಾಡುವುದು ಕಷ್ಟವಾಗುತ್ತದೆ. ನಿನ್ನೆ ಮೊನ್ನೆ ಮಳೆಯಾಗಿದ್ದರಿಂದ ಕೆಆರ್‍ಎಸ್‍ಗೆ ಒಳ ಸ್ವಲ್ಪ ಹರಿವು ಹೆಚ್ಚಾಗಿದೆ ಎಂದರು.