Home ಇದೀಗ ಬಂದ ಸುದ್ದಿ ರಾಜಾಜಿನಗರದ ಪೈಪ್‌ಲೈನ್‌ ಕಾಮಗಾರಿ: ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳಿಗೆ ನೋಟೀಸ್‌‍

ರಾಜಾಜಿನಗರದ ಪೈಪ್‌ಲೈನ್‌ ಕಾಮಗಾರಿ: ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳಿಗೆ ನೋಟೀಸ್‌‍

0
ರಾಜಾಜಿನಗರದ ಪೈಪ್‌ಲೈನ್‌ ಕಾಮಗಾರಿ: ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳಿಗೆ ನೋಟೀಸ್‌‍

ಬೆಂಗಳೂರು,ಜೂ.13-ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗಾಗಿ ತೆಗೆದಿದ್ದ ಚರಂಡಿಗೆ ಬಿದ್ದು ಯುವಕ ಗಂಭೀರ ಗಾಯಗೊಂಡಿರುವ ಬಗ್ಗೆ ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು ಸಂಬಂಧಪಟ್ಟ ಬಿಡ್ಲ್ಯೂಎಸ್‌‍ಎಸ್‌‍ಬಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆ ದಾರನಿಗೆ ನೋಟೀಸ್‌‍ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಬಿಡ್ಲ್ಯೂಎಸ್‌‍ಎಸ್‌‍ಬಿ ಕಾಮಗಾರಿ ನಡೆಯುತ್ತಿದ್ದು ಅದಕ್ಕಾಗಿ ಚರಂಡಿಯನ್ನು ತೆಗೆೆಯಲಾಗಿದೆ. ಜೂ.4 ರಂದು ಕೆಲಸ ಮುಗಿಸಿಕೊಂಡು ಮಂಜುನಾಥ್‌ ಎಂಬುವವರು ತಡರಾತ್ರಿ ತಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಕಾಫಿಡೇ ಎದುರು ಕಾಮಗಾರಿಗಾಗಿ ಅಗೆದಿದ್ದ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಂಜುನಾಥ್‌ ಅವರ ತಂದೆ ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.