ಜಿನೀವಾ, ಅ.31-ಸುಡಾನ್‌ನ ಆಸ್ಪತ್ರೆಯ ಮೇಲೆ ಬಂದೂಕುಧಾರಿಗಳ ಗುಂಪು ದಾಳಿ ಮಾಡಿ ಗುಂಡಿಕ್ಕಿ 460 ಜನರನ್ನು ಕೊಂದಿರುವ ಘಟನೆ ಕಳೆದ ರಾತ್ರಿ ನಡೆದಿದೆ.ವೈದ್ಯರು ಮತ್ತು ದಾದಿಯರನ್ನು ಅಪಹರಿಸಲಾಗಿದ್ದು ನಂತರ ಸಿಬ್ಬಂದಿ, ರೋಗಿಗಳು ಮತ್ತು ಅಲ್ಲಿ ಆಶ್ರಯ ಪಡೆದಿದ್ದ ಜನರ ಮೇಲೆ ಗುಂಡು ಹಾರಿಸಿ ನರಮೇಧ ಮಾಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ದೇಶದ ಡಾರ್ಫರ್ ಪ್ರದೇಶದಲ್ಲಿ ಪ್ರಬಲ ಅರೆಸೈನಿಕ ಗುಂಪಾದ ರಾಪಿಡ್ ಸಪೋರ್ಟ್ ಫೋರ್ಸ ಹಿಂಸಾಚಾರದ ಭಾಗವಾಗಿದೆ.
ಕಳೆದ 18 ತಿಂಗಳ ಕಾಲ ಮುತ್ತಿಗೆ ಹಾಕಿದ ನಂತರ ಪ್ರಮುಖ ನಗರವಾದ ಎಲ್-ಫಶರ್ ಅನ್ನು ವಶಪಡಿಸಿಕೊಂಡಿದೆ. ಹೋರಾಟಗಾರರು ಮನೆ ಮನೆಗೆ ಹೋಗಿ ನಾಗರಿಕರನ್ನು ಕೊಂದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿ ತಿಳಿಸಿದೆ.
ಆಸ್ಪತ್ರೆ ದಾಳಿ ಮತ್ತು ಇತರ ಹಿಂಸಾಚಾರದ ಬಗ್ಗೆ ಹಲವು ವಿವರಗಳು ನಿಧಾನವಾಗಿ ಹೊರಬರುತ್ತಿವೆ ಮತ್ತು ಒಟ್ಟು ಸಾವಿನ ಸಂಖ್ಯೆ ನಿಗರವಾಗಿ ಇನ್ನೂ ತಿಳಿದಿಲ್ಲ. ಎಲ್-ಫಶರ್‌ನ ಪತನವು ಆಫ್ರಿಕಾದ ಮೂರನೇ ಅತಿದೊಡ್ಡ ದೇಶದಲ್ಲಿ ಆರ್‌ಎಸ್‌ಎಫ್ ಮತ್ತು ಮಿಲಿಟರಿ ನಡುವಿನ ಕ್ರೂರ ಯುದ್ದ , ಎರಡು ವರ್ಷಗಳ ಈ ಯುದ್ಧದ ಹೊಸ ಹಂತವನ್ನು ಸೂಚಿಸುತ್ತೆದೆ.
ಯುಎನ್‌ನ ಅಂಕಿಅಂಶಗಳ ಪ್ರಕಾರ, ಯುದ್ಧವು 40,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಆದರೆ ನೆರವು ಗುಂಪುಗಳು ಅದು ಕಡಿಮೆ ಎಣಿಕೆಯಾಗಿದೆ ಮತ್ತು ನಿಜವಾದ ಸಂಖ್ಯೆ ಹಲವು ಪಟ್ಟು ಹೆಚ್ಚಿರಬಹುದು ಎಂದು ಹೇಳುತ್ತವೆ.ಯುದ್ಧವು 14 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಸಾವಿರಾರು ಜನರನ್ನು ಕೊಂದಿದೆ ಎನ್ನಲಾಗಿದೆ.
ಸ್ಪೇನ್‌ನಷ್ಟು ಗಾತ್ರದ ಪ್ರದೇಶವಾದ ಡಾರ್ಫರ್‌ನ ಕೆಲವು ಭಾಗಗಳಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಕ್ಷಾಮವನ್ನು ಘೋಷಿಸಲಾಗಿದೆ.
