ನವದೆಹಲಿ,ಸೆ.16-ಪುರಾತನ ಕಾಲದ ಅತಿ ವಿಶಿಷ್ಠ ಉಂಗುರಗಳನ್ನು ಸಂಗ್ರಹಿಸುವ ಮೂಲಕ ಲೀಸೆಸ್ಟರ್‍ಶೈರ್‍ನ ವ್ಯಕ್ತಿಯೊಬ್ಬರು ದಾಖಲೆ ನಿರ್ಮಿಸಿದ್ದಾರೆ.2003ರಲ್ಲಿ ನಿಧನರಾದ ಆ ವ್ಯಕ್ತಿ ಶತ ಶತಮಾನದ ಗ್ರೀಕ್, ರೋಮನ್ ವಂಶಜರಿಗೆ ಸೇರಿದ ಅತಿ ವಿಶಿಷ್ಠ 54 ಉಂಗುರಗಳನ್ನು ಸಂಗ್ರಹಿಸಿದ್ದರು ಎನ್ನುವ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.
ಅವರು ಸಂಗ್ರಹಿಸಿದ್ದ ಉಂಗುರಗಳಲ್ಲಿ ಗ್ರೀಕ್, ರೋಮನ್, ಬೈಜಾಂಟೈನ್, ವೈಕಿಂಗ್ ಮತ್ತು ಮಧ್ಯಕಾಲೀನ ಸಮಯಕ್ಕೆ ಸೇರಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ.ಉದಾಹರಣೆಗೆ ಕ್ರಿ.ಪೂ. 4ನೇ ಹಾಗೂ 1ನೇ ಶತಮಾನದ ಹೆಲೆನಿಸ್ಟಿಕ್ ಪೂರ್ವ ಗ್ರೀಕ್ ಅವ„ಯ ಚಿನ್ನದ ಉಂಗುರವು ಅವರ ಸಂಗ್ರಹಲದಲ್ಲಿತ್ತು.
ಕ್ಯಾಬೊಕಾನ್ ಗ್ರೆನೇಡ್‍ಗಳೊಂದಿಗೆ 4 ಕಲ್ಲುಗಳಿರುವ ಒಂದು, ರೆಕ್ಕೆಗಳನ್ನು ಹೊಂದಿರುವ ಜೇನುನೊಣದಂತೆ ಕಾಣುತ್ತಿದ್ದ ಉಂಗುರ ಮತ್ತು 2ನೇ ಶತಮಾನದ ವಿಬಿಯಾ ಸಬಿನಾ ಕಾರ್ನೆಲಿಯನ್ ಬಸ್ಟ್‍ನೊಂದಿಗಿನ ಚಿನ್ನದ ಉಂಗುರ, ಚಕ್ರವರ್ತಿ ಹ್ಯಾಡ್ರಿಯನ್ ಅವರ ಪತ್ನಿ ಸೇರಿದ ಉಂಗುರವೂ ಇತ್ತು.
ತಮಿಳುನಾಡು, ತೆಲಂಗಾಣದಲ್ಲಿ ಶಂಕಿತ IS ಉಗ್ರರ ತರಬೇತಿ ಕೇಂದ್ರಗಳ ಮೇಲೆ NIA ದಾಳಿ
1950 ರ ದಶಕದ ಕೊನೆಯಲ್ಲಿ ಮತ್ತು 1960 ರ ದಶಕದ ಆರಂಭದಲ್ಲಿ ಉಂಗುರಗಳನ್ನು ಸಂಗ್ರಹಿಸಲಾಯಿತು. ಇದು ಬಹುಶಃ ವಸ್ತುಸಂಗ್ರಹಾಲಯದ ಹೊರಗೆ ನೋಡಿದ ಪ್ರಾಚೀನ ಉಂಗುರಗಳ ದೊಡ್ಡ ಸಂಗ್ರಹವಾಗಿದೆ.
ಅತಿ ವಿಶಿಷ್ಠ ಉಂಗುರಗಳನ್ನು ಸಂಗ್ರಹಿಸಿದ್ದ ಮನುಷ್ಯ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಎಂಜಿನಿಯರ್ ಆಗಿದ್ದ. ಅವರು ದೇಶಾದ್ಯಂತ ಕೆಲಸ ಮಾಡಿದರು ಮತ್ತು ಹರಾಜಿನಲ್ಲಿ ಅನೇಕ ಉಂಗುರಗಳನ್ನು ಖರೀದಿಸಿದರು. 2018 ರಲ್ಲಿ ಅವರ ವಂಶಸ್ಥರು ಉಂಗುರಗಳನ್ನು ಮಾರಾಟ ಮಾಡಲು ನಿರ್ಧರಿಸಿದರು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.
#collectionofancientrings, #ancientrings, #Leicestershire,