ಬೆಂಗಳೂರು, ಮೇ 15- ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದರೆ ಅದರಿಂದ ಏನ್ ಪ್ರಯೋಜನ ಅಂತಾ ನೀವು ಮಾತನಾಡಿಕೊಳ್ಳುತ್ತಿದ್ದೀರಾ. ನೀವ್ ಏನ್ ಬೇಕಾದರೂ ಮಾಡ್ಕೊಳ್ಳಿ ನಾವು ಮಾತ್ರ ಬೆಂಗಳೂರು ಅಭಿವೃದ್ಧಿಗೆ ಗ್ರೇಟರ್ ಯೋಜನೆಗಳನ್ನೇ ಹಮಿಕೊಳ್ಳುತ್ತಿದ್ದೀವಿ ಅಂತಿದ್ದಾರೆ ನಮ ಜಿಬಿಎ ಆಯುಕ್ತರಾಗಿ ಇಂದಿನಿಂದ ಅಧಿಕಾರ ವಹಿಸಿಕೊಂಡಿರುವ ಮಹೇಶ್ವರ್ ರಾವ್ ಅವರು.
ಹೌದು, ಪ್ರತಿ ಮಳೆಗಾಲದಲ್ಲೂ ನಗರದಲ್ಲಿ ರಾಜಕಾಲುವೆಗಳು ತುಂಬಿ ಹರಿದು ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸುತ್ತಿವೆ. ಪ್ರತಿ ಮಳೆ ಸಂದರ್ಭದಲ್ಲೂ ನಾವು ಮುಂದಿನ ಮಳೆಗಾಲದ ವೇಳೆಗೆ ಕಾಲುವೆ ಹೂಳೆತ್ತುತ್ತಿವೆ ಎಂದು ಅಧಿಕಾರಿಗಳು ಭರವಸೆ ನೀಡುವುದು ಇದುವರೆಗೂ ಮಾಮೂಲಾಗಿ ಹೋಗಿತ್ತು.
ಇದೀಗ ಗ್ರೇಟರ್ ಬೆಂಗಳೂರಿನ ಆಯುಕ್ತರಾಗಿರುವ ಮಹೇಶ್ವರ್ ರಾವ್ ಅವರು ಗ್ರೇಟರ್ ಹೆಸರಿಗೆ ತಕ್ಕಂತೆ ರಾಜಕಾಲುವೆಗಳ ಹೂಳೆತ್ತಲು ನಾವು ಈ ಬಾರಿ ರೋಬೋಟ್ ಬಳಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ಮೊದಲ ಯೋಜನೆ ಇದಾಗಿದೆ. ರಾಜಕಾಲುವೆ ಹೂಳೆತ್ತಲು ಟೆಕ್ನಾಲಜಿ ಮೊರೆ ಹೋಗಲಾಗಿದ್ದು, ಮನುಷ್ಯ ಮಾದರಿಯ ರೋಬೋಟ್‌ಗಳನ್ನು ರಾಜಕಾಲುವೆಗೆ ಇಳಿಸಲು ಪ್ಲಾನ್ ಮಾಡಲಾಗಿದೆ.
ರಾಜಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ರೋಬೋಟ್‌ಗಳನ್ನು ಖರೀದಿಸಲು ಈಗಾಗಲೇ ಕೆಲವು ಕಂಪೆನಿಗಳ ಜೊತೆ ಜಿಬಿಎ ಮಾತುಕತೆ ನಡೆಸಿದೆ.
ಆರಂಭದಲ್ಲಿ ರೋಬೋಟ್ ಬಳಕೆಯ ಪ್ರಾಯೋಗಿಕ ಪ್ರಯತ್ನ ನಡೆಸಲಾಗುವುದು ಅದು ಯಶಸ್ವಿಯಾದರೆ ಎಲ್ಲಾ ಕಡೆ ಗಳಲ್ಲೂ ರೋಬೋಟ್ ಬಳಸಿ ರಾಜಕಾಲುವೆ ಕ್ಲೀನ್ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಈಗಾಗಲೇ ಕೊಚ್ಚಿಯಲ್ಲಿ ರೋಬಾಟ್ ಬಳಸಿ ರಾಜಕಾಲುವೆ ಹೂಳು ಕ್ಲಿನ್ ಮಾಡಲಾಗ್ತಿದೆ..ರಾಜಧಾನಿ ಬೆಂಗಳೂರಿಗೂ ಅದೆ ಮಾದರಿಯಲ್ಲಿ ರಾಜಕಾಲುವೆ ಹುಳು ಎತ್ತಲು ತಂತ್ರಜ್ಞಾನದ ಮೊರೆ ಹೋಗಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.