ಚನ್ನಪಟ್ಟಣ,ಸೆ.13- ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರವಾಹನಕ್ಕೆ ಮಹಿಳೆಯೊಬ್ಬಳು ಬೆಂಕಿ ಇಟ್ಟು ಸುಟ್ಟಿರುವ ಘಟನೆ, ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಿಕಲಚೇತನ ಸುರೇಶ್ ಎಂಬುವರ ದ್ವಿಚಕ್ರವಾಹನ ಬೆಂಕಿಗೆ ಆಹುತಿಯಾಗಿದ್ದು, ಗ್ರಾಮದ ಸರಿತಾ ಎಂಬುವರು ತಮ್ಮ ದ್ವಿಚಕ್ರವಾಹನಕ್ಕೆ ಪೆಟ್ರೊಲ್ ಸುರಿದು ಬೆಂಕಿ ಹಾಕಿದ್ದಾರೆಂದು ವಾಹನದ ಮಾಲೀಕ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೆಲವರ್ಷಗಳ ಹಿಂದೆ ದ್ವಿಚಕ್ರವಾಹನ ಮಾಲೀಕ ವಿಕಲಚೇತನ ಸುರೇಶ್ ತಮ್ಮ ಕೆ.ಎ.42 ಬಿ 3555 ಸಂಖ್ಯೆಯ ಆಕ್ಟಿವ್ಹೊಂಡಾವನ್ನು 15 ಸಾವಿರಕ್ಕೆ ಸರಿತಾರವರಿಗೆ ಗಿರವಿ ಇಟ್ಟಿದ್ದರೆನ್ನಲ್ಲಾಗಿದ್ದು, ತಾನು ಪಡೆದ ಸಾಲದ ಹಣವನ್ನು ಸರಿತಾರವರಿಗೆ ಪೊೀನ್ಪೇ ಮಾಡಿದ ಸುರೇಶ್ ತಮ್ಮ ವಾಹನವನ್ನು ಕೊಡುವಂತೆ ಕೇಳಿದ್ದ.
ರಾಜ್ಯದ 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ
ಸರಿತಾ ಇವರ ದ್ವಿಚಕ್ರವಾಹನವನ್ನು ಚನ್ನಪಟ್ಟಣದ ಗ್ಯಾರೇಜ್ನಲ್ಲಿ, ವಾಹನದ ಬಣ್ಣವನ್ನು ಬದಲಾಯಿಸಿದರೆನ್ನಲ್ಲಾಗಿದ್ದು, ತಾನು ಹಣವನ್ನು ನೀಡಿದರೂ ವಾಹನವನ್ನು ನೀಡದೆ, ವಾಹನ ಬೋರ್ ಕೆಲಸಕ್ಕೆ ಬಂದಿದೆ ಎಂದು ಗ್ಯಾರೇಜ್ನಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ವಾಹನದ ಪೊಟೋ ತಗೆದು ಪೊಲೀಸ್ ಠಾಣೆಗೆ ನೀಡಿ, ಪೊಲೀಸರ ಮುಖಾಂತರ ನನ್ನ ವಾಹನವನ್ನು ಪಡೆದು ಮನೆಯಲ್ಲಿ ನಿಲ್ಲಿಸಿದ ಸಂದರ್ಭಲ್ಲಿ ಸರಿತಾ ದ್ವಿಚಕ್ರವಾಹನಕ್ಕೆ ಬೆಂಕಿ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ.
ದ್ವಿಚಕ್ರವಾಹನ ಸಂಪೂರ್ಣವಾಗಿ ಸುಟ್ಟು ಭಷ್ಮವಾಗಿದ್ದು, ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
#woman, #setfire, #bike, #parked, #house,