ಜನವರಿಯಲ್ಲಿ 1500 ಎಇಇ ಹುದ್ದೆಗಳಿಗೆ ನೇಮಕಾತಿ

Social Share

ಬೆಳಗಾವಿ,ಡಿ.20- ಇಂಧನ ಇಲಾಖೆಯಲ್ಲಿ ಕರೆಯಲಾಗಿದ್ದ 1500 ಸಹಾಯಕ ಕಾರ್ಯಪಾಲಕ ಅಭಿಯಂತರ(ಎಎಇ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಜನವರಿ ತಿಂಗಳ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಶಾಸಕ ಎಸ್.ಸುರೇಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಇಇ ಹುದ್ದೆಗಳಿಗೆ ನೇರನೇಮಕಾತಿಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಇ)ಕ್ಕೆ ನೀಡಲಾಗಿತ್ತು. ಕೆಲವು ಕಾರಣದಿಂದ ಪರೀಕ್ಷೆ ಫಲಿತಾಂಶ ತಡವಾಗಿದೆ ಎಂದು ಒಪ್ಪಿಕೊಂಡರು.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಈ ಅಧಿವೇಶನ ಮುಗಿಯುವುದರೊಳಗೆ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು. ಜನವರಿ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದರು.

ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ನಾಮಪತ್ರ

ಯಾವ ಕಾರಣಕ್ಕೆ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ ಎಂಬುದಕ್ಕೆ ವಿವರಣೆ ನೀಡಲು ಕೆಇಎ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದಷ್ಟು ಶೀಘ್ರ ನೇಮಕಾತಿ ಆದೇಶ ನೀಡುತ್ತೇವೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸುರೇಶ್‍ಕುಮಾರ್, ಕೆಪಿಟಿಸಿಎಲ್‍ನ 1200 ಹುದ್ದೆಗಳಿಗೆ ಪರೀಕ್ಷೆ ನಡೆದು 5 ತಿಂಗಳು ನಡೆದಿದೆ. ಪರೀಕ್ಷೆ ಬರೆದವರು ತೀವ್ರ ಹತಾಶೆಯಲ್ಲಿದ್ದಾರೆ. ಯಾವ ಕಾರಣಕ್ಕೆ ವಿಳಂಬವಾಗಿದೆ, ತಕ್ಷಣವೇ ಲೋಪದೋಷ ಉಂಟಾಗಿದ್ದರೆ ಸರಿಪಡಿಸಿ ಫಲಿತಾಂಶ ಪ್ರಕಟಿಸಿ ನೇಮಕಾತಿ ಆದೇಶವನ್ನು ನೀಡಬೇಕೆಂದು ಮನವಿ ಮಾಡಿದರು.

ಜಪಾನ್ ವಿರುದ್ಧ ಉತ್ತರ ಕೊರಿಯಾ ಆಕ್ರೋಶ : ರಕ್ತ-ನಿರ್ಣಾಯಕ ಕ್ರಮದ ಎಚ್ಚರಿಕೆ

AAE recruitment, January, Minister Sunil Kumar,

Articles You Might Like

Share This Article