ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

Social Share

ನವದೆಹಲಿ,ನ.15- ತಮ್ಮ ಮಗಳನ್ನು ವಿಕೃತವಾಗಿ ಕೊಂದ ಆರೋಪಿಯನ್ನು ಗಲ್ಲು ಶಿಕ್ಷೆಗೊಳಪಡಿಸುವಂತೆ ಶ್ರದ್ದಾ ವಾಲ್ಕರ್ ಅವರ ತಂದೆ ಒತ್ತಾಯಿಸಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶ್ರದ್ದಾ ತಂದೆ ವಿಕಾಸ್ ವಾಲ್ಕರ್, ಈ ಕೃತ್ಯದ ಹಿಂದೆ ಲವ್ ಜಿಹಾದ್ ನಡೆದಿರುವ ಅನುಮಾನವಿದೆ. ಆರೋಪಿಗೆ ಗಲ್ಲು ಶಿಕ್ಷೆ ಧಿವಿಸಬೇಕು. ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಮಗಳೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆರೋಪಿ ಅಫ್ತಾಬ್‍ನೊಂದಿಗೂ ಸಂಪರ್ಕದಲ್ಲಿರಲಿಲ್ಲ. ಶ್ರದ್ದಾ ತನ್ನ ಚಿಕ್ಕಪ್ಪನೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ. ಆಕೆ ಕಾಣೆಯಾಗಿದ್ದಾಗ ಮುಂಬೈನ ವಾಸೈ ಪೊಲೀಸ್ ಠಾಣೆಗೆ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.

ಶ್ರದ್ದಾ ವಾಲ್ಕರ್ ಮತ್ತು ಆರೋಪಿ ಅಫ್ತಾಬ್ ಪೂನಾವಾಲ ನಡುವೆ 2019ರಿಂದ ಸಹಜೀವನ ಸಂಬಂಧವಿದ್ದು, ಕುಟುಂಬದ ಸದಸ್ಯರ ವಿರೋಧದಿಂದಾಗಿ ಅವರು ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ

ಮಾರ್ಚ್-ಏಪ್ರಿಲ್‍ನ ಹಿಮಾಚಲ ಪ್ರದೇಶ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಿದ್ದರು. ದೆಹಲಿಗೆ ಮೇನಲ್ಲಿ ಬಂದು ನೆಲೆಸುವ ಮೊದಲು ಶ್ರದ್ದಾ ದೆಹಲಿಯಲ್ಲಿ ಪ್ರತ್ಯೇಕ ಮನೆಯಲ್ಲಿ ವಾಸವಿದ್ದಳು. ಮೇ 15ರಂದು ಅಫ್ತಾಬ್‍ನ ಫ್ಲಾಟ್‍ಗೆ ಆಕೆ ಸ್ಥಳಾಂತರಗೊಂಡಿದ್ದಾಳೆ.

ಇಬ್ಬರ ನಡುವೆ ಏರಿದ ಧ್ವನಿಯಲ್ಲಿ ಗಲಾಟೆ ನಡೆಯುತ್ತಿತ್ತು. ಅದನ್ನು ಮರೆಮಾಚಲು ಮ್ಯೂಸಿಕ್ ವ್ಯಾಲ್ಯೂಮ್ ಹೆಚ್ಚು ಮಾಡಲಾಗುತ್ತಿತ್ತು ಎಂದು ನೆರೆಹೊರೆಯವರು ತಿಳಿಸಿದರು.

ಪೊಲೀಸರ ಮಾಹಿತಿ ಪ್ರಕಾರ ಮೇ 18ರಂದು ಶ್ರದ್ದಾಳ ಹತ್ಯೆಯಾಗಿದೆ. ಅಫ್ತಾಬ್‍ನನ್ನು ಮದುವೆಯಾಗುವಂತೆ ಶ್ರದ್ದಾ ಬಲವಂತಪಡಿಸಿದ್ದರಿಂದ ಪೂರ್ವನಿಯೋಜಿತ ಸಂಚು ರೂಪಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ.

ಆರೋಪಿ ಬಾಣಸಿಗ ವೃತ್ತಿಯಲ್ಲೂ ಪಳಗಿದ್ದು, ಮಾಂಸ ಶೇಖರಣೆಯ ಪದ್ದತಿ ಅನುಸರಿಸಿ ಶ್ರದ್ದಾಳ ದೇಹದ ತುಂಡುಗಳನ್ನು ಅಡಗಿಸಲು 300 ಲೀಟರ್‍ನ ರೆಫ್ರಿಜಿರೇಟರ್‍ನ್ನು ತಂದಿಟ್ಟಿದ್ದ.

ಅದರಲ್ಲಿ ಹಲವಾರು ಸುಗಂಧ ದ್ರವ್ಯಗಳನ್ನು ಸಿಂಪಡಿಸಿ ವಾಸನೆ ಹರಡದಂತೆ ಎಚ್ಚರಿಕೆ ವಹಿಸಿದ್ದ. ಮಧ್ಯರಾತ್ರಿ 2 ಗಂಟೆಯಲ್ಲಿ ಒಂದೊಂದೇ ತುಣಕನ್ನು ತೆಗೆದುಕೊಂಡು ಹೋಗಿ ದೂರದ ಅರಣ್ಯಪ್ರದೇಶ, ಚರಂಡಿಗಳಲ್ಲಿ ಎಸೆದು ಬರುತ್ತಿದ್ದ ಎನ್ನಲಾಗಿದೆ.

ರಷ್ಯಾ-ಉಕ್ರೇನ್ ಸಂಘರ್ಷ ಕುರಿತು ಜಿ-20 ಸಮ್ಮೇಳನದಲ್ಲಿ ಮೋದಿ ಪ್ರಸ್ತಾಪ

ಈಗ ಪೊಲೀಸರು ಆತ ಕಳೆದ 28 ದಿನಗಳಿಂದ ಹಲವಾರು ಸ್ಥಳಗಳಲ್ಲಿ ಎಸೆದಿರುವ ದೇಹದ ಭಾಗಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಅದನ್ನು ಡಿಎನ್‍ಎ ಪರೀಕ್ಷೆಗೊಳಪಡಿಸುವ ಮೂಲಕಖಚಿತಪಡಿಸಿಕೊಳ್ಳುವ ಯತ್ನ ನಡೆಸಿದ್ದಾರೆ. 10 ಕಡೆ ದೇಹದ ಅವಶೇಷಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಆರೋಪಿ ಶ್ರದ್ದಾ ಬದುಕಿದ್ದಾಳೆ ಎಂದು ಬಿಂಬಿಸಲು ಜೂನ್‍ವರೆಗೂ ಆಕೆಯ ಇನ್‍ಸ್ಟ್ರಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದ ಖಾತೆಗಳನ್ನು ಸಕ್ರಿಯವಾಗಿಟ್ಟಿದ್ದ. ನಂತರ ಆಕೆಯ ಫೋನ್‍ನನ್ನು ದೂರದಲ್ಲಿ ಎಸೆದು ಬಂದಿದ್ದ.

ತನಿಖೆ ಮುಂದುವರೆಸಿರುವ ಪೊಲೀಸರು ದೇಹವನ್ನು ತುಂಡರಿಸಲು ಬಳಸಿದ್ದ ಆಯುಧಗಳನ್ನು ಅಫ್ತಾಬ್‍ನಿಂದ ವಶಪಡಿಸಿಕೊಂಡಿದ್ದಾರೆ. ವಿಕೃತ ಮನಸ್ಸಿನ ಅಫ್ತಾಬ್ ರಕ್ತದ ಕಲೆಗಳಾಗಿದ್ದ ತನ್ನ ಹಾಗೂ ಶ್ರದ್ದಾಳ ಬಟ್ಟೆಗಳನ್ನು ಕಸದ ವಾಹನಗಳಿಗೆ ಎಸೆದಿದ್ದ ಎಂದು ತಿಳಿದುಬಂದಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೂರ್ಯ ಸಿಡಿದೇಳಬೇಕಿತ್ತು: ಜಾಫರ್

ಶ್ರದ್ದಾಳನ್ನು ಕೊಲೆ ಮಾಡಿ ಶವ ಅಡಗಿಸಿಟ್ಟಿದ್ದ ಆರೋಪಿ ಅದೇ ದಿನ ಮತ್ತೊಬ್ಬಳನ್ನು ಫ್ಲಾಟ್‍ಗೆ ಕರೆಸಿಕೊಂಡು ಸರಸಸಲ್ಲಾಪದಲ್ಲಿ ತೊಡಗಿದ್ದ ಎಂಬ ಮಾಹಿತಿಯೂ ಹೊರಬಿದ್ದಿದೆ. ಮೂಲತಃ ಫ್ಲರ್ಟ್ ಆಗಿದ್ದ ಅಫ್ತಾಬ್ ಅಷ್ಟೇ ವಿಕೃತ ಮನಸ್ಥಿತಿ ಹೊಂದಿದ್ದ ಎಂಬ ಮಾತುಗಳು ಕೇಳಿಬರುತ್ತಿದೆ.

ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರನ್ನು ವಿಚಾರಣೆಗೊಳಪಡಿಸಲಾಗಿದ್ದು, ಈತ ಶ್ರದ್ದಾ ಮತ್ತು ಆರೋಪಿಗೆ ಸ್ನೇಹಿತನಾಗಿದ್ದ. ಶ್ರದ್ದಾ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ತಂದೆಗೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ.
ಶ್ರದ್ದಾಳ ಫೇಸ್‍ಬುಕ್ ಖಾತೆಯಲ್ಲಿ ಯಾವುದೇ ಆಕ್ಟಿವಿಟಿ ಇಲ್ಲದೇ ಇದುದ್ದರಿಂದ ಅನುಮಾನಗೊಂಡು ಪೋಷಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಚೀನಾದೊಂದಿಗೆ ಯಾವುದೇ ಶೀತಲ ಸಮರ ಇಲ್ಲ : ಬಿಡೆನ್

ಆರೋಪಿ ತನ್ನ ಪ್ರೇಯಸಿನ್ನು ಕೊಲೆ ಮಾಡಿ ವಿಕೃತವಾಗಿ ದೇಹವನ್ನು ತುಂಡರಿಸಿರುವುದು ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದೆ. ಪೊಲೀಸರು ಫ್ಲಾಟ್‍ನಲ್ಲಿದ್ದ ಶ್ರದ್ದಾಳ ದೇಹದ ಉಳಿದ ಅಂಗಾಂಗಳನ್ನು ಸಂಗ್ರಹಿಸಿ ಪರಿಶೀಲನೆಗೊಳಪಡಿಸಿದ್ದಾರೆ.

Articles You Might Like

Share This Article