100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್‌ಗಳಿಲ್ಲ

Social Share

ಹೊಸದಿಲ್ಲಿ, ಜ16 ಭಾರತೀಯ ವಿಮಾನ ನಿಲ್ದಾಣಗಳ ಪ್ರಾಕಾರ (ಎಎಐ)ಸುರ್ಪಯಲ್ಲಿರುವ ದೇಶಾದ್ಯಂತ ತನ್ನ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್‍ಗಳಿಲ್ಲ … ಇದರ ಬಗ್ಗೆ ಕೇಂದ್ರ ವಿಮಾನಯಾನ ಸಚಿವಾಲಯವಾಗಲ್ಲಿ ,ಪ್ರಾಕಾರವಾಗಲ್ಲಿ ಚಿಂತನೆ ನಡೆಸದೆ ಮೌನವಾಗಿದೆ ಎಂಬ ಆರೋಪ ಕೇಳಿಬಂದಿದೆ.
ವಾಯುಯಾನ ಭದ್ರತಾ ನಿಯಂತ್ರಕ ಇಲಾಖೆ ಕಳೆದ ಏಪ್ರಿಲ್ 2019 ರಲ್ಲಿ ದೇಶಾದ್ಯಂತ 84 ಅತಿಸೂಕ್ಷ್ಮ ಮತ್ತು ಸೂಕ್ಷ್ಮ ವಿಮಾನ ನಿಲ್ದಾಣಗಳಿಗೆ ಮಾರ್ಚ್ 2020 ರೊಳಗೆ ದೇಹ ಸ್ಕ್ಯಾನರ್‍ಗಳನ್ನು ಸ್ಥಾಪಿಸಲು ನಿರ್ದೇಶಿಸಿತ್ತು ಆದರೆ ಈವರೆಗೆ ಒಂದೇ ಒಂದು ಸ್ಕ್ಯಾನರ್‍ಗಳಿಲ್ಲ ಅಳವಡಿಸಿಲ್ಲ.
ಕತೂಹಲ ವಿಷಯ ವೆಂದರೆ ಕಳೆದ 2020 ರಲ್ಲಿ ಕೇಂದ್ದ ಸುತ್ತೋಲೆ ಹೊರಡಿಸಿ 63 ವಿಮಾನ ನಿಲ್ದಾಣಗಳಿಗೆ 198 ಬಾಡಿ ಸ್ಕ್ಯಾನರ್‍ಗಳನ್ನು ಖರೀದಿಸಲು ಟೆಂಡರ್ ಆಹ್ವನಿಸಿತ್ತು .ಮೂರು ಕಂಪನಿಗಳು ಬಿಡ್‍ಳನ್ನು ಹಾಕಿದ್ದವು ಆದರೆ ನಂತರ ಟೆಂಡರ್‍ಅನ್ನು ರದ್ದುಗೊಳಿಸಲಾಯಿತು ಎಂದು ಅವರು ಹೇಳಿಲಾಗಿದೆ.ರದ್ದತಿಗೆ ಕಾರಣವೇನು ಎಂದು ಮಾಧ್ಯಮಗಳ ಪ್ರಶ್ನೆಗೆ ಎಎಐ ವಕ್ತಾರರು ಆಡಳಿತಾತ್ಮಕ ಕಾರಣ ಎಂದು ಹೇಳಿದ್ದಾರೆ.
ಎಎಐ ಒಟ್ಟು 137 ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತದೆ, ಇದರಲ್ಲಿ 24 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು 10 ಕಸ್ಟಮ್ ವಿಮಾನ ನಿಲ್ದಾಣಗಳು ಮತ್ತು 103 ದೇಶೀಯ ವಿಮಾನ ನಿಲ್ದಾಣಗಳಿವೆ
28 ವಿಮಾನ ನಿಲ್ದಾಣಗಳನ್ನು ವರ್ಗೀಕರಿಸಿದೆ, ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳು ಮತ್ತು ಈಶಾನ್ಯದಲ್ಲಿನ ವಿಮಾನ ನಿಲ್ದಾಣಗಳು ಸೇರಿದಂತೆ – ಅತಿಸೂಕ್ಷ್ಮ ಮತ್ತು 56 ವಿಮಾನ ನಿಲ್ದಾಣಗಳನ್ನು ಸೂಕ್ಷ್ಮ ಎಂದು ವರ್ಗೀಕರಿಸಿದೆ.

Articles You Might Like

Share This Article