ಮೈಸೂರು,ಡಿ.8-ಗುಜರಾತ್ ವಿಧಾನಸಭೆಯಲ್ಲಿ ಆಮ್‍ಆದ್ಮಿ ಪಕ್ಷ ಕಾಂಗ್ರೆಸ್‍ನ ಮತಗಳನ್ನು ಕಸಿದುಕೊಂಡಿದ್ದರಿಂದ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಅಲ್ಲಿನ ಫಲಿತಾಂಶ ಕರ್ನಾಟಕ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ನಗರದಲ್ಲಿಂದು ವರುಣಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಫಲಿತಾಂಶ ಅಚ್ಚರಿಯೇನು ಅಲ್ಲ, ನಿರೀಕ್ಷಿತ. ಅಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಮೊದಲೇ ಗೊತ್ತಿತ್ತು ಎಂದರು.
ಗುಜರಾತ್‍ನಲ್ಲಿ ಆಮ್‍ಆದ್ಮಿ ಪಕ್ಷ ಕಾಂಗ್ರೆಸ್‍ನ ಮತಗಳನ್ನು ತಿಂದು ಹಾಕಿದೆ. ಶೇ.10ಕ್ಕಿಂತಲೂ ಹೆಚ್ಚು ಮತ ಪಡೆದಿರುವ ಆ ಪಕ್ಷ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿಯೇ ಎಎಪಿಗೆ ಹಣಕಾಸು ನೆರವು ನೀಡಿ ಚುನಾವಣೆಗೆ ನಿಲ್ಲಿಸಿತ್ತು. ಆಪ್ ಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್‍ಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಿದ್ದರು. ಆದರೂ ಅವರಿಗೆ ಹೆಚ್ಚು ಸ್ಥಾನ ಗೆಲ್ಲಲು ಆಗಮಿಲ್ಲ. ಆದರೆ ಕಾಂಗ್ರೆಸನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದರು.
ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬಿರದ ಮೊರ್ಬಿ ಸೇತುವೆ ದುರಂತ
ಆದರೆ, ಗುಜರಾತ್‍ನ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗೆ ನೋಡಿದರೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಆ ರಾಜ್ಯಗಳ ಫಲಿತಾಂಶಗಳು ಕರ್ನಾಟಕದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವೇ.
ಪ್ರತಿಯೊಂದು ರಾಜ್ಯದ ಸಮಸ್ಯೆಗಳು ಮತ್ತು ವಿಷಯಗಳು ಬೇರೆಯಾಗಿರುತ್ತವೆ. ಗುಜರಾತ್‍ನ ವಿಷಯಗಳು ಕರ್ನಾಟಕದ ಚುನಾವಣೆಯಲ್ಲಿ ಚರ್ಚೆಯಾಗಲು ಸಾಧ್ಯವಿಲ್ಲ. ಮೋದಿ ಅಲೆ ವ್ಯಾಪಕವಾಗಿದೆ ಎಂಬ ಅಭಿಪ್ರಾಯಗಳು ಆಧಾರ ರಹಿತ. ಒಂದು ವೇಳೆ ಅದು ನಿಜವೇ ಆಗಿದ್ದರೆ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಏಕೆ ಸೋಲು ಅನುಭವಿಸಿದೆ. ಮೋದಿ ಅವರು ದೆಹಲಿಯಲ್ಲೇ ವಾಸವಿದ್ದಾರೆ. ಅಲ್ಲಿ ಎಎಪಿ ಗೆದ್ದಿದ್ದೆಯಲ್ಲಾ ಎಂದು ಹೇಳಿದರು.
ಹಿರಿಯರಿಗೆ ಮನವೊಲಿಸಿ ಕಿರಿಯರಿಗೆ ಅವಕಾಶ ನೀಡಲು ಮುಂದಾದ ಬಿಜೆಪಿ
ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರ ನಿಷ್ಕ್ರಿಯವಾಗಿದೆ. ಸರ್ಕಾರದ ಯಾವುದೇ ಗುತ್ತಿಗೆ ಪಡೆಯಬೇಕಾದರೂ ಶೇ.40ರಷ್ಟು ಕಮಿಷನ್ ನೀಡಬೇಕಿದೆ. ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಗುಜರಾತ್‍ನಲ್ಲಿ ಶೇ.40 ರಷ್ಟು ಕಮಿಷನ್ ಆರೋಪ ಕೇಳಿ ಬಂದಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಗುಜರಾತ್‍ನಂತೆ ಕರ್ನಾಟಕದಲ್ಲೂ ಆಮ್ ಆದ್ಮಿ ಜತೆ ಕೈ ಜೋಡಿಸಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಎಎಪಿ ಪಕ್ಷವಿಲ್ಲ. ಆದರೆ, ಬಿಜೆಪಿಯವರು ಜೆಡಿಎಸ್ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂದು ಅನುಮಾನ ವ್ಯಕ್ತಪಡಿಸಿದರು. ಇನ್ನು ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್‍ಗೆ ಜನ ಮತ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರ ಕುತಂತ್ರದಿಂದ ಗಡಿ ವಿವಾದ:
ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕಿತ್ತು. ಆದರೆ, ಅಂತಹ ಸಾಧ್ಯತೆಗಳು ಕಾಣುತ್ತಿಲ್ಲ. ಕರ್ನಾಟಕ, ಮಹಾರಾಷ್ಟ್ರ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ.
ಇನ್ಮುಂದೆ ಗ್ರಾಮ ಲೆಕ್ಕಿಗರ ಹುದ್ದೆ ಹೆಸರು ಗ್ರಾಮ ಆಡಳಿತಾಧಿಕಾರಿ
ಕೇಂದ್ರದಲ್ಲೂ ಬಿಜೆಪಿ ಆಡಳಿತವಿದೆ. ಮಾತುಕತೆ ಮೂಲಕ ವಿಷಯ ಬಗೆಹರಿಸಬಹುದಾಗಿದೆ. ಆದರೆ, ನನ್ನ ಅನುಮಾನದ ಪ್ರಕಾರ ಮಹಾರಾಷ್ಟ್ರ ಮತ್ತು ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಮಾತನಾಡಿಕೊಂಡು ಉದ್ದೇಶ ಪೂರ್ವಕವಾಗಿಯೇ ಗಡಿ ವಿವಾದವನ್ನು ಹೆಚ್ಚು ಮಾಡುತ್ತಿದ್ದಾರೆ. ಉದ್ರಿಕ್ತ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
Aam Aadmi Party, Financial, BJP, Siddaramaiah,