ಹಕ್ಕು ಪತ್ರ ವಿತರಣೆ ಬಿಜೆಪಿಯ ಚುನಾವಣಾ ಗಿಮಿಕ್ : ಭಾಸ್ಕರ್ ರಾವ್

Social Share

ಬೆಂಗಳೂರು,ಜ.20-ತಹಸೀಲ್ದಾರ್‍ಗಳಿಂದ ವಿತರಣೆಯಾಗಬೇಕಿದ್ದ ಹಕ್ಕು ಪತ್ರಗಳನ್ನು ಚುನಾವಣಾ ಪ್ರಚಾರ ದೃಷ್ಟಿಯಿಂದ ಪ್ರಧಾನಿ ಮೂಲಕ ಕೊಡಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗೆಪಾಟಲಿಗೀಡಾಗಿದ್ದಾರೆ ಎಂದು ಆಮ್‍ಆದ್ಮಿ ಪಕ್ಷದ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಇಂದಿಲ್ಲಿ ಕಿಡಿಕಾರಿದ್ದಾರೆ.

ಪ್ರೆಸ್‍ಕ್ಲಬ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂಡ ಹತ್ತು ಹಟ್ಟಿಗಳಲ್ಲಿ ವಾಸವಾಗಿರುವ ಬುಡಕಟ್ಟು ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕೆಲಸ ಬಹಳ ಹಿಂದೆಯೇ ಆಗಬೇಕಾಗಿತ್ತು. ಆದರೆ, ಇದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ತಹಸೀಲ್ದಾರರು ಮಾಡಬೇಕಾಗಿದ್ದ ಈ ಪ್ರಕ್ರಿಯೆಯನ್ನು ಪ್ರಧಾನಿ ಅವರನ್ನು ಕರೆಸಿ ಮಾಡಿಸಿ ಪ್ರಚಾರ ಗಿಟ್ಟಿಸುವ ಭರದಲ್ಲಿ ಕೆಳ ದರ್ಜೆಗಿಳಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಇಂತಹ ಪ್ರಚಾರ ಗಿಮಿಕ್ ಮಾಡುತ್ತಿದೆ. ಇದರಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಬಿಜೆಪಿಯ ಪ್ರಭಾವಿ ಶಾಸಕರು

ಈ ಹಿಂದೆಯೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರು ಪ್ರಧಾನಿ ಮೋದಿ ಅವರಿಗೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಪತ್ರ ಬರೆದಿದ್ದರು. ಬೆಂಗಳೂರಿನಲ್ಲಿ ನಡೆದಿರುವ ಕಳಪೆ ಕಾಮಗಾರಿಗಳು, ಉತ್ತರ ಕರ್ನಾಟಕದ ಅಭಿವೃದ್ಧಿ ಕ್ಷೀಣ ಹಾಗೂ ಕನ್ನಡಕ್ಕಾಗುತ್ತಿರುವ ಅನ್ಯಾಯದ ಬಗ್ಗೆಯೂ ಕೂಡ ತಿಳಿಸಿದ್ದರು.

ಆದರೆ, ಇದುವರೆಗೂ ಸುಮ್ಮನಿದ್ದು, ಈಗ ಏಕಾಏಕಿ ಚುನಾವಣಾ ಗಿಮಿಕ್ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಾಗಣ್ಣ, ಜಗದೀಶ್ ವಿ.ಸದಂ ಮತ್ತಿತರರು ಉಪಸ್ಥಿತರಿದ್ದರು.

AAP, Bhaskar Rao, BJP, election, campaign, PM Modi,

Articles You Might Like

Share This Article