ನವದೆಹಲಿ,ಫೆ.24-ದೆಹಲಿ ಮೇಯರ್, ಉಪಮೇಯರ್ ಸ್ಥಾನ ಎಎಪಿಗೆ ಲಭಿಸಿದ ಬೆನ್ನಲ್ಲೆ ಆ ಪಕ್ಷದ ಕೌನ್ಸಿಲರ್ ಪವನ್ ಶೆಹ್ರಾವತ್ ಅವರು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಎಎಪಿ ಪಕ್ಷದಲ್ಲಿರುವ ಭ್ರಷ್ಟಾಚಾರದಿಂದ ಅಲ್ಲಿ ಉಸಿರುಗಟ್ಟುವ ವಾತಾವರಣವಿರುವುದರಿಂದ ನಾನು ಆ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಎಎಪಿ ತೊರೆದು ಬಿಜೆಪಿ ಸೇರಿದ ಸದಸ್ಯನನ್ನು ದೆಹಲಿ ಬಿಜೆಪಿ ಘಟಕದ ಕಚೇರಿಯಲ್ಲಿ ವೀರೇಂದ್ರ ಸಚ್‍ದೇವ್ ಮತ್ತು ಹರ್ಷ ಮಲೋತ್ರಾ ಅವರು ಬರಮಾಡಿಕೊಂಡರು.
ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರ ಗೆಲ್ಲಲು ಅಮಿತ್ ಶಾ ಸೂಚನೆ
ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ದೆಹಲಿ ಮುನ್ಸಿಫಲ್ ಸಭೆಯಲ್ಲಿ ಮಧ್ಯರಾತ್ರಿ ನಡೆದ ಗದ್ದಲದ ಬೆನ್ನಲ್ಲೇ ಶೆಹ್ರಾವತ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಸ್ಥಾಯಿ ಸಮಿತಿಗೆ ಚುನಾವಣೆ ನಡೆಸಲು ಎಂಸಿಡಿ ಇಂದು ಮತ್ತೊಂದು ಪ್ರಯತ್ನ ನಡೆಸಲಿರುವ ಸಂದರ್ಭದಲ್ಲೆ ಅವರ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
#AAP, #councillor, #PawanSehrawat, #joins, #BJP,