ಗುಜರಾತ್‍ನಲ್ಲಿ ಎಎಪಿ ಸರ್ಕಾರ ರಚನೆ ಮಾಡಲಿದೆ : ಕೇಜ್ರಿವಾಲ್

Social Share

ನವದೆಹಲಿ,ಅ.2- ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ. ಶೀಘ್ರ ಚುನಾವಣೆ ನಡೆದರೆ ನಮ್ಮ ಪಕ್ಷ ಸರ್ಕಾರ ರಚಿಸಲಿದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಪಕ್ಷ ಬಿಜೆಪಿಗಿಂತ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದು, ಅಲ್ಪಮತದೊಂದಿಗೆ ಸರ್ಕಾರ ರಚಿಸುವುದು ಶತಸಿದ್ಧ ಹೀಗಾಗಿ ಗುಜರಾತ್ ಜನತೆ ನಮ್ಮ ಗೆಲವನ್ನು ದೊಡ್ಡ ಗೆಲುವನ್ನಾಗಿ ಪರಿವರ್ತಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಗುಪ್ತಚರ ವರದಿಯಿಂದ ಬೆಚ್ಚಿಬಿದ್ದಿರುವ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಹಸ್ಯ ಸಭೆ ನಡೆಸಿ ಕಾರ್ಯ ತಂತ್ರ ರೂಪಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.

ಅದರಲ್ಲೂ ವಿಶೇಷವಾಗಿ ಬಿಜೆಪಿಯವರು ತಮ್ಮ ವಿರೋ ಮತಗಳ ವಿಭಜನೆಗೊಳ್ಳುವಂತೆ ನೋಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಈ ಷಡ್ಯಂತ್ರದಲ್ಲಿ ಕಾಂಗ್ರೆಸ್ ಕೈ ಜೋಡಿಸಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Articles You Might Like

Share This Article