ನವದೆಹಲಿ,ಡಿ.8- ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಗಳಿಕೆಯಾದ ಮತಗಳ ಪ್ರಮಾಣದಿಂದ ಅಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್ ಸೇರಿ ಎರಡೂ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದ್ದು, ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಭೂತಪೂರ್ವ ಬೆಂಬಲ ಗಳಿಸಿದೆ.
ಸತತವಾಗಿ ಚುನಾವಣೆಗಳಲ್ಲಿ ಗಳಿಸಿದ ಮತಗಳಿಂದಾಗಿ ರಾಷ್ಟ್ರೀಯ ಪಕ್ಷವಾಗುವ ಅರ್ಹತೆಯನ್ನು ಅಮ್ ಆದ್ಮಿ ಪಡೆದುಕೊಂಡಿದೆ. 2012ರಲ್ಲಿ ಸರಿಯಾಗಿ 10 ವರ್ಷಗಳ ಹಿಂದೆ ಆರಂಭಗೊಂಡು ಆಪ್ ಹೆಸರಿನಿಂದ ರಾಜಕೀಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಅಮ್ ಆದ್ಮಿ ಹಂತ ಹಂತವಾಗಿ ಪ್ರಚಲಿತವಾಗುತ್ತಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)
ಅರವಿಂದ ಕೇಜ್ರಿವಾಲ್ ರಾಷ್ಟ್ರೀಯ ಸಂಚಾಲಕರಾಗಿ ಆರಂಭದಿಂದಲೂ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ 157 ಶಾಸಕರನ್ನು ಹೊಂದಿದೆ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಅಮ್ ಆದ್ಮಿ ಸ್ರ್ಪಧಿಸಿತ್ತು.
ಪಂಜಾಬ್ ವಿಧಾನಸಭೆಯಲ್ಲಿ ಶೇ.18.3ರಷ್ಟು, ದೆಹಲಿ ವಿಧಾನಸಭೆಯಲ್ಲಿ ಶೇ.23ರಷ್ಟು ಮತ ಗಳಿಸಿತ್ತು. ಗೋವಾ ಚುನಾವಣೆಯಲ್ಲಿ ಶೇ.0.5ರಷ್ಟು ಮತ ಗಳಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ. 2.1ರಷ್ಟು, 2019ರ ಚುನಾವಣೆಯಲ್ಲಿ 0.4ರಷ್ಟು ಮತ ಗಳಿಸಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಇದುವರೆಗಿನ ಫಲಿತಾಂಶದ ಪ್ರಕಾರ ಅಮ್ ಆದ್ಮಿ ಶೇ.12ರಷ್ಟು ಮತಗಳಿಸಿದೆ.
ಗಡಿ ದಾಟಿದ ಬಿಎಸ್‍ಎಫ್ ಯೋಧನನ್ನ ವಶಕ್ಕೆ ಪಡೆದ ಪಾಕ್
ಹಿಮಾಚಲಪ್ರದೇಶದಲ್ಲಿ ಶೇ.1ಕ್ಕಿಂತ ಹೆಚ್ಚಿನ ಮತಗಳಿಸಿದೆ. ಈ ಮೂಲಕ ಚುನಾವಣಾ ಆಯೋಗದ ಮಾನದಂಡಗಳನ್ನು ಪೂರ್ಣಗೊಳಿಸಿ ರಾಷ್ಟ್ರೀಯ ಪಕ್ಷವಾಗುವ ಅರ್ಹತೆ ಪಡೆದುಕೊಂಡಿದೆ.
ಪ್ರಸ್ತುತ ದೇಶದಲ್ಲಿ ಭಾರತೀಯ ಕಾಂಗ್ರೆಸ್, ಬಿಜೆಪಿ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಿಪಿಐ, ಸಿಪಿಎಂ, ಸಿಪಿಐ, ಬಿಎಸ್‍ಪಿ, ಎಂಸಿಪಿಗಳು ಮಾತ್ರ ರಾಷ್ಟ್ರೀಯ ಪಕ್ಷಗಳಾಗಿದ್ದವು. ಈಗ ಅಮ್ ಆದ್ಮಿ ಸೇರ್ಪಡೆಯಾಗಲಿದೆ.
ಡಬಲ್ ಇಂಜಿನ್ ಸರ್ಕಾರವೆಂದು ಎದೆ ಬಡಿದುಕೊಳ್ಳಬೇಡಿ, ಗಡಿ ವಿವಾದ ಬಗೆ ಹರಿಸಿ: ಸಿದ್ದರಾಮಯ್ಯ
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಮ್ ಆದ್ಮಿ ಪಕ್ಷ ಗುಜರಾತ್ ಚುನಾವಣೆ ಬಳಿಕ ರಾಷ್ಟ್ರೀಯ ಪಕ್ಷವಾಗಲಿದೆ. ಮೊದಲ ಬಾರಿಗೆ ರಾಜಕೀಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನ ಗುರುತು ಮೂಡಿಸಿರುವ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ಅದೇ ಹೆಜ್ಜೆ ಇಡಲಿದೆ.
ಈ ಸಾಧನೆಗಾಗಿ ಇಡೀ ದೇಶಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
AAP, hopes, national party, status,