ಚಂಡೀಗಢ, ಜ. 18- ಚುನಾವಣೆ ಘೋಷಣೆಯಾಗಿರುವ ಪಂಜಾಬ್ ರಾಜ್ಯಕ್ಕೆ ಆಮ್ ಆದ್ಮಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಸದ ಭಗವಂತ್ ಮಾನ್ ಆಯ್ಕೆಯಾಗಿದ್ದಾರೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸಂಗ್ರಹಿಸಲಾದ ಅಭಿಪ್ರಾಯಗಳನ್ನು ಆಧಾರಿಸಿ ಭಗವಂತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತಿರುವುದಾಗಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್‍ನಲ್ಲಿ ಇತ್ತೀಚೆಗೆ ಕಾಂಗ್ರೆಸ್‍ನಲ್ಲಾಗಿರುವ ಬದಲಾವಣೆಗಳ ಲಾಭ ಪಡೆದು ಎಎಪಿಯನ್ನು ಅಕಾರಕ್ಕೆ ತರುವ ಪ್ರಯತ್ನದಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಪಕ್ಷ ಅಕಾರಕ್ಕೆ ಬರುವ ಮುನ್ನವೇ ಮುಂದಿನ ಮುಖ್ಯಮಂತ್ರಿಯಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್‍ರನ್ನು ಪಂಜಾಬ್‍ನ ಸಿಎಂ ಆಗಿ ಘೋಷಣೆ ಮಾಡಿದ್ದಾರೆ.
ಪಂಜಾಬ್‍ನ ಎಎಪಿ ಪಕ್ಷದಿಂದ ಮುಖ್ಯಮಂತ್ರಿಯ ಆಯ್ಕೆಯನ್ನು ಜನರ ವಿವೇಚನೆಗೆ ಬಿಟ್ಟಿದ್ದ ಅರವಿಂದ್ ಕೇಜ್ರಿವಾಲ್ ಅವರು ಎಸ್‍ಎಂಎಸ್, ವಾಟ್ಸ್‍ಅಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮತಗಳನ್ನು ಹಾಕುವಂತೆ ಸೂಚಿಸಿದರು.
ಅರವಿಂದ್ ಕೇಜ್ರಿವಾಲ್‍ರ ಈ ಕ್ರಮ ವಿಭಿನ್ನವಾಗಿದ್ದು ಪಂಜಾಬ್‍ನ ಲಕ್ಷಾಂತರ ಮತದಾರರು ತಮ್ಮ ಅಭಿಪ್ರಾಯವನ್ನು ಎಸ್‍ಎಂಎಸ್, ವಾಟ್ಸಅಪ್ ಮೂಲಕ ವ್ಯಕ್ತಪಡಿಸಿದ್ದು ಶೇ.93ರಷ್ಟು ಮಂದಿ ಸಂಗ್ರೂರ್ ಸಂಸದ ಭಗವಂತ್ ಅವರೇ ಸಿಎಂ ಅಭ್ಯರ್ಥಿಗೆ ಸೂಕ್ತವಾದ ಅಭ್ಯರ್ಥಿಯೆಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಭಗವಂತ್ ಮಾನ್‍ರ ಹೆಸರನ್ನೇ ಎಎಪಿಯ ಮುಖ್ಯಮಂತ್ರಿಯ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.
ನವದೆಹಲಿಯಲ್ಲಿ ಕಾಂಗ್ರೆಸ್‍ನ ಮುಖ್ಯಮಂತ್ರಿ ಶೀಲಾದೀಕ್ಷಿತ್‍ರ ನಂತರ ಸತತ 2 ಬಾರಿ ದೆಹಲಿಯ ಸಿಎಂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರು ಈಗ ಪಂಜಾಬ್ ಸೇರಿದಂತೆ ಗೋವಾ ವಿಧಾನಸಭಾ ಕ್ಷೇತ್ರದÀಲ್ಲೂ ಆಡಳಿತ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ.
