ನವದೆಹಲಿ,ಫೆ.27- ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರ ಪರ ಆಮ್ ಆದ್ಮಿ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಈ ನಡುವೆ ಮನೀಶ್ ಬಂಧನಕ್ಕೆ ಬಹಳಷ್ಟು ಸಿಬಿಐ ಅಧಿಕಾರಿಗಳು ವಿರೋಧ ವ್ಯಕ್ತ ಪಡಿಸಿದ್ದರು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲಿ, ಬಿಜೆಪಿ ಮತ್ತು ಎಎಪಿ ಕೇಂದ್ರ ಕಚೇರಿಗಳೆರಡೂ ಇರುವ ಮಧ್ಯ ದೆಹಲಿಯ ಡಿಡಿಯು ಮಾರ್ಗದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸಿಸೋಡಿಯಾ ಬಂಧನದ ದಿನವನ್ನು ಕಪ್ಪು ದಿನ ಎಂದು ಅಪ್ ಪಕ್ಷ ಘೋಷಿಸಿದೆ ಮತ್ತು ದೇಶಾದ್ಯಂತ ಪ್ರತಿಭಟನೆ ನಡೆಸಿದೆ ಎಂದು ಎಎಪಿ ಹಿರಿಯ ನಾಯಕ ಗೋಪಾಲ್ ರೈ ತಿಳಿಸಿದ್ದಾರೆ. ದಿಲ್ಲಿಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಸಾವರ್ಕರ್, ಟಿಪ್ಪು ಸಿದ್ದಾಂತದ ಮೇಲೆ ಚುನಾವಣೆ ನಡೆಯುವುದಿಲ್ಲ : ಬಿಎಸ್‌ವೈ
ಕಳೆದ ವರ್ಷ ಜೂನ್‍ನಲ್ಲಿ ದೆಹಲಿಯ ಆಗಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‍ರನ್ನು ಬಂದಿಸಿದ್ದ ಸಿಬಿಐ, ನಿನ್ನೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಬಂಧಿಸಿದೆ. ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾರ ಜನಪ್ರಿಯತೆ ಸಹಿಸಲಾಗದೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆಪ್ ಆರೋಪಿಸಿದೆ.
ನಿನ್ನೆ ಸಿಬಿಐ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಆಪ್ ಸಂಸದ ಸಂಜಯ್ ಸಿಂಗ್, ಸಚಿವ ಗೋಪಾಲ್ ರೈ ಸೇರಿದಂತೆ 50 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾರನ್ನು ರಾಜಕೀಯ ಒತ್ತಡಕ್ಕಾಗಿ ಬಂಧಿಸಲು ಅನೇಕ ಸಿಬಿಐ ಅಧಿಕಾರಿಗಳು ವಿರೋಧ ವ್ಯಕ್ತ ಪಡಿಸಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.
ಭಾರತದ ಅಭಿವೃದ್ಧಿಯನ್ನು ಶ್ಲಾಘಿಸಿದ ಅಮೆರಿಕಾದ ಅನಿವಾಸಿ ಭಾರತೀಯರು
ಮನೀಸ್ ಬಗ್ಗೆ ಹಲವಾರು ಸಿಬಿಐ ಅಧಿಕಾರಿಗಳಿಗೆ ಗೌರವ ಇತ್ತು. ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಬಂಧನ ಮಾಡುವುದು ಸೂಕ್ತವಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಆದರೆ ಮೇಲಿನಿಂದ ಬಂದ ರಾಜಕೀಯ ಒತ್ತಡಕ್ಕಾಗಿ ಬಂಧಿಸಲೇಬೇಕಾಯಿತು. ಆಡಳಿತದಲ್ಲಿ ಇರುವವರ ಮಾತುಗಳನ್ನು ಕೇಳಲೇಬೇಕಾದ ಅನಿವಾರ್ಯತೆ ಅಧಿಕಾರಿಗಳಿಗಿದೆ ಎಂದು ಹೇಳಿದ್ದಾರೆ.
AAP, nationwide, protest, Manish Sisodia, arrest,