163 ಕೋಟಿ ಜಾಹೀರಾತು ಖರ್ಚು ಪಾವತಿಸಲು ಆಪ್ ಸರ್ಕಾರಕ್ಕೆ ನೋಟೀಸ್

Social Share

ನವದೆಹಲಿ,ಜ.12- ರಾಜಕೀಯ ಜಾಹೀರಾತುಗಳಿಗೆ ಮಾಡಿದ 163.62 ಕೋಟಿ ರೂ.ಗಳನ್ನು ಹತ್ತು ದಿನಗಳ ಒಳಗೆ ಪಾವತಿಸಲೇಬೇಕು ಇಲ್ಲದಿದ್ದರೆ ನಿಮ್ಮ ಕಚೇರಿಯನ್ನು ಸೀಲ್ ಮಾಡುವುದಾಗಿ ದೆಹಲಿ ಸರ್ಕಾರಕ್ಕೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.

ಆಪ್ ಸರ್ಕಾರದ ವಿರುದ್ಧವೇ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಈ ಎಚ್ಚರಿಕೆಯ ನೋಟೀಸ್ ನೀಡಿರುವುದು ಇದೀಗ ರಾಜಕೀಯ ಹಗ್ಗ ಜಗ್ಗಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಆಪ್‍ನವರು 2017ರ ಮಾರ್ಚ್ 31ರವರೆಗೆ ಜಾಹೀರಾತಿಗಾಗಿ 99.31 ಕೋಟಿ ಖರ್ಚು ಮಾಡಿದ್ದರು ಎನ್ನಲಾಗಿದೆ. ಆ ಹಣವನ್ನು ಪಾವತಿಸದಿರುವುದಕ್ಕೆ 64.31 ಕೋಟಿ ರೂ.ಗಳ ಬಡ್ಡಿ ಸೇರಿಸಿ 163 ಕೋಟಿ ಪಾವತಿಸುವಂತೆ ಈಗಾಗಲೇ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಮುಖ್ಯಮಂತ್ರಿ ಅರವಿಂದ ಕೆಜ್ರೀವಾಲ್ ಕ್ಯಾರೆ ಅನ್ನದ ಹಿನ್ನಲೆಯಲ್ಲಿ ಅಂತಿಮ ನೋಟೀಸ್ ಜಾರಿ ಮಾಡಿ ಈ ಎಚ್ಚರಿಕೆ ನೀಡಲಾಗಿದೆ.

ಡೈನೋಸಾರ್‌ಗಳ ಪಳೆಯುಳಿಕೆ ಪತ್ತೆ

ರಾಜಕೀಯ ಜಾಹೀರಾತಿಗಾಗಿ ಖರ್ಚು ಮಾಡಿರುವ 97 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಸೂಚನೆಯನ್ನು ಆಮ್ ಆದ್ಮಿ ಸರ್ಕಾರ ಕಡೆಗಣಿಸಿದ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಮಗೆ ಆದೇಶ ನೀಡಲು ಗವರ್ನರ್ ಅವರಿಗೆ ಯಾವುದೆ ಅಧಿಕಾರವಿಲ್ಲ. ನಾವು ಈ ವಿಚಾರಗಳನ್ನು ನ್ಯಾಯಲಯದಲ್ಲಿ ಪರಿಹರಿಸಿಕೊಳ್ಳುತ್ತೇವೆ ಎಂದು ಆಪ್ ಹೇಳಿಕೊಂಡಿದೆ.

AAP, #slapped, #notice, #Rs163crore #political, #advertisements,

Articles You Might Like

Share This Article