ಬೆಂಗಳೂರು, ಸೆ.10- ಮುಂಬರುವ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್‍ಪಟ್ಟ ಅಲಂಕರಿಸಬೇಕಾದರೆ ಒತ್ತಡ ನಿಭಾಯಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿವಿಲಿಯರ್ಸ್ ಹೇಳಿದ್ದಾರೆ. ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ 13ನೇ ಐಸಿಸಿ ಒಡಿಐ ವಿಶ್ವಕಪ್ ಮಹಾಟೂರ್ನಿ ನಡೆಯುತ್ತಿದ್ದು, ಅತಿಥೇಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ನೆಚ್ಚಿನ ತಂಡ ಎಂದು ಅನೇಕ ಕ್ರಿಕೆಟ್ ದಿಗ್ಗಜರು ಹೇಳಿದ್ದಾರೆ. ಈ ಮಾತನ್ನು RCBಯ ಮಾಜಿ ಸ್ಪೋಟಕ ಆಟಗಾರ ಕೂಡ ಒಪ್ಪಿಕೊಂಡಿದ್ದಾರೆ.
ಭಾರತ ತಂಡವು ವಿಶ್ವಕಪ್ ಗೆಲ್ಲಲು ಬಲಿಷ್ಠ ತಂಡವನ್ನು ಹೊಂದಿದೆ ಎಂಬ ಮಾತನ್ನು ನಾನು ಒಪ್ಪುತ್ತೇನೆ, ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ ಅವರಿಗೂ ತಂಡಕ್ಕೆ ಟ್ರೋಫಿ ಗೆದ್ದುಕೊಡುವ ಸಾಮಥ್ರ್ಯವಿದೆ ಆದರೆ ತಂಡದ ಆಟಗಾರರು ತವರಿನ ಒತ್ತಡವನ್ನು ಅನುಭವಿಸಲಿದ್ದಾರೆ' ಎಂದು ಎಬಿಡಿ ಹೇಳಿದ್ದಾರೆ. ತಮ್ಮದೇ ಅಕೃತ ಯುಟ್ಯೂಬ್‍ನಲ್ಲಿ ಮಾತನಾಡಿರುವ ಎಬಿಡಿವಿಲಿಯರ್ಸ್,
2011ರಲ್ಲಿ ಟೀಮ್ ಇಂಡಿಯಾ ತವರು ಅಂಗಳದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆಗಲೂ ತಂಡದ ಆಟಗಾರರ ಮೇಲೆ ಸಾಕಷ್ಟು ಒತ್ತಡವಿತ್ತು, ಅದನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂಬುದು ನನ್ನ ಭಾವನೆ’ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹೇಳಿದ್ದಾರೆ.
ಕೊಹ್ಲಿಗೆ ಬೆಳ್ಳಿ ಬ್ಯಾಟ್ ಉಡುಗೊರೆ ನೀಡಿದ ಲಂಕಾ ಬೌಲರ್
ಒತ್ತಡವನ್ನು ನಿಯಂತ್ರಿಸಿ:ಈ ಬಾರಿ ವಿಶ್ವಕಪ್ ಟೂರ್ನಿಯಲ್ಲೂ ಟೀಮ್ ಇಂಡಿಯಾ ಆಟಗಾರರು ನಿರ್ಭೀತಿಯಾಗಿ ಆಡಬೇಕೆಂಬ ಮಾತನ್ನು ನಾನು ಹೇಳಲು ಬಯಸುತ್ತೇನೆ. ನಾವು ತವರು ನೆಲದಲ್ಲಿ ಆಡುತ್ತಿದ್ದೇವೆ ಎಂಬ ಒತ್ತಡವನ್ನು ಮರೆತುಬಿಡಿ, ಕೆಲವೊಮ್ಮೆ ಆ ಒತ್ತಡದಿಂದ ಉತ್ತಮ ಪ್ರದರ್ಶನ ತೋರಲು ಆಗುವುದಿಲ್ಲ , ನೀವು ಮೊದಲು ನಿಮ್ಮಲ್ಲಿನ ಒತ್ತಡವನ್ನು ನಿಯಂತ್ರಿಸಿ, ಭಾರತ ಆಟಗಾರರು ನಿರ್ಭೀತಿಯಿಂದ ಆಡಬೇಕೆಂದು ನಾನು ಬಯಸುತ್ತೇನೆ, ಒಂದು ವೇಳೆ ಆಟಗಾರರು ಒತ್ತಡವನ್ನು ನಿಯಂತ್ರಿಸಿದ್ದೇ ಆದರೆ ಅವರು ವಿಶ್ವಕಪ್ ಟೂರ್ನಿಯಲ್ಲಿ ಸಾಕಷ್ಟು ದೂರ ಪ್ರಯಾಣ ಬೆಳೆಸಿ ಟ್ರೋಫಿ ಗೆದ್ದು ಸಂಭ್ರಮಿಸುವ ಸಾಧ್ಯತೆಗಳಿವೆ' ಎಂದು ಎಬಿಡಿ ತಿಳಿಸಿದ್ದಾರೆ.
ಸೂರ್ಯಕುಮಾರ್ ಅಭಿಮಾನಿ: ನಾನು ಟಿ20 ಸ್ವರೂಪದ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಅಪ್ಪಟ ಅಭಿಮಾನಿ ಎಂಬುವುದು ನಿಮಗೆಲ್ಲ ತಿಳಿದಿದೆ. ಟಿ 20 ಸ್ವರೂಪದಲ್ಲಿ ಯಾವ ರೀತಿ ಸೋಟಕ ಬ್ಯಾಟಿಂಗ್ ನಡೆಸುತ್ತಾರೋ ಅದನ್ನು ಏಕದಿನದಲ್ಲಿ ಹೊರ ತರುವಲ್ಲಿ ಎಡವಿದ್ದಾರೆ' ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್‍ನ ಭಾರತದ ಪ್ಲೇಯಿಂಗ್ 11ರಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ನೋಡಲು ಬಯಸುತ್ತೇನೆ, ಒಂದು ವೇಳೆ ಅವರಿಗೆ ಅವಕಾಶ ಸಿಕ್ಕಿದರೆ ತಮ್ಮ ಬ್ಯಾಟ್‍ನಿಂದ ತಂಡದ ಗೆಲುವಿಗೆ ಕಾಣಿಕೆ ನೀಡುತ್ತಾರೆ’ ಎಂದು ಎಬಿಡಿ ತಿಳಿಸಿದ್ದಾರೆ.
#ABdeVilliers, #Honest, #India, # WorldCup, #Squad,