ಬೆಂಗಳೂರು ನನ್ನ 2ನೇ ತವರು : ಎಬಿಡಿ

Spread the love

ನವದೆಹಲಿ, ಮೇ 24- ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅವರು ಬೆಂಗಳೂರು ನನ್ನ ಎರಡನೇ ತವರು ಎಂದು ಹೇಳುವ ಮೂಲಕ ಆರ್‍ಸಿಬಿ ತಂಡವನ್ನು ಸೇರಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಆರ್‍ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, 360 ಡಿಗ್ರಿ ಸ್ಪೆಷಾಲಿಸ್ಟ್ ಎಬಿಡಿವಿಲಿಯರ್ಸ್ ಅವರು ಮುಂದಿನ ವರ್ಷದಿಂದ ಆರ್‍ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಮಾತುಗಳನ್ನಾಡಿದ್ದರು.

ಎಬಿಡಿ ವಿಲಿಯರ್ಸ್ ಅವರು ವಿರಾಟ್ ಕೊಹ್ಲಿ ಅವರ ಮಾತಿಗೆ ತುಂಬಾ ಸಂತಸ ಪಟ್ಟಿದ್ದು, ಅವರು ನನ್ನ ಮೇಲೆ ಇಟ್ಟುಕೊಂಡಿರುವ ವಿರಾಟ್ ಕೊಹ್ಲಿ ಅವರು ಹೇಳುತ್ತಿರುವಂತೆ ನಾನು ಮುಂದಿನ ವರ್ಷ ಆರ್‍ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 10 ವರ್ಷಕ್ಕೂ ಹೆಚ್ಚು ಕಾಲ ಖಾಯಂ ಆಟಗಾರರಾಗಿ ಗುರುತಿಸಿ ಕೊಂಡಿದ್ದು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದು ಈ ವರ್ಷದ ಐಪಿಎಲ್ ಆರಂಭವಾಗುವುದಕ್ಕೂ ಮುಂಚೆ ಅವರು ನಿವೃತ್ತಿ ಘೋಷಿಸಿದ್ದರು.

ಆದರೆ ಈಗ 2023ರ ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ಸದಸ್ಯನಾಗುತ್ತೇನೆ ಎಂದು ಹೇಳಿರುವ ಎಬಿಡಿ ಅವರು ಆಟಗಾರನಾಗಿ ಬರುತ್ತಾರೋ ಅಥವಾ ಮೆಂಟರ್ ಅಥವಾ ಕೋಚ್ ಆಗಿ ಜವಾಬ್ದಾರಿ ನಿಭಾಯಿಸುತ್ತಾರೋ ಎಂಬುದರ ಸುಳಿವು ಬಿಟ್ಟುಕೊಡದೆ ತಮ್ಮ ಜಾಣ್ಮೆ ಮೆರೆದಿದ್ದಾರೆ.

ಸತತ ಮೂರನೇ ಬಾರಿಗೆ ಐಪಿಎಲ್ ಪ್ಲೇಆಫ್‍ಗೇರಿರುವ ಆರ್‍ಸಿಬಿ ನಾಳೆ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್‍ನ ಸವಾಲನ್ನು ಎದುರಿಸ ಲಿದೆ.

Facebook Comments