ಜಾಗತೀಕ ಉಗ್ರ ಪಟ್ಟಿಗೆ ಮಕ್ಕಿ

Social Share

ನ್ಯೂಯಾರ್ಕ್,ಜ.17- ಪಾಕ್ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತೀಕ ಭಯೋತ್ಪಾದಕ ಎಂದು ಪರಿಗಣಿಸಿದೆ. ಲಷ್ಕರ್-ಎ-ತೊಯ್ಬಾ ಉಗ್ರನಾಗಿರುವ ಮಕ್ಕಿಯನ್ನು ಜಾಗತೀಕ ಭಯೋತ್ಪಾದಕ ಎಂದು ಪರಿಗಣಿಸುವಂತೆ ಕಳೆದ ವರ್ಷ ಭಾರತ ಮಾಡಿಕೊಂಡಿದ್ದ ಮನವಿಗೆ ಚೀನಾ ವಿರೋಧ ವ್ಯಕ್ತಪಡಿಸಿತ್ತು.

ಚೀನಾದ ಈ ಇಬ್ಬಗೆ ನೀತಿ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ಇದೀಗ ಭಾರತದ ಬೇಡಿಕೆಗೆ ಮನ್ನಣೆ ದೊರೆತಿದ್ದು, ಮಕ್ಕಿಯನ್ನು ಜಾಗತೀಕ ಉಗ್ರ ಎಂದು ಪರಿಗಣಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮ್ಮತಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಯುವಕರನ್ನು ನೇಮಿಸಿಕೊಳ್ಳುವುದು ಮತ್ತು ದಾಳಿ ನಡೆಸುವುದರ ಜೊತೆಗೆ ಉಗ್ರರಿಗಾಗಿ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಕ್ಕಿಯನ್ನು ಈಗಾಗಲೇ ಭಾರತ ಮತ್ತು ಅಮೆರಿಕಾ ತಮ್ಮ ದೇಶಿಯ ಕಾನೂನಿನಡಿಯಲ್ಲಿ ಭಯೋತ್ಪಾದಕ ಎಂದು ಗುರುತಿಸಿವೆ.

ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

ಎಲ್‍ಇಟಿ ಮುಖ್ಯಸ್ಥ ಹಾಗೂ 26/11 ದಾಳಿಯ ಮಾಸ್ಟರ್‍ಮೈಂಡ್ ಹಫೀಜ್ ಸಯೀದ್‍ನ ಸೋದರಮಾವನಾಗಿರುವ ಮಕ್ಕಿ ಹಲವಾರು ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

2020 ರಲ್ಲಿ, ಪಾಕಿಸ್ತಾನಿ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಮಕ್ಕಿಯನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಒಂದು ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿತು ಮತ್ತು ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ಪ್ರಕಾರ ಜೈಲು ಶಿಕ್ಷೆ ವಿಧಿಸಿತು.

Abdul Rehman Makki, declared, Global Terrorist, UNSC,

Articles You Might Like

Share This Article