ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6601 ಶಾಲೆಗಳ ನಿರ್ಮಾಣ

Social Share

ಬೆಂಗಳೂರು,ಜು.23- ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6,601 ಸರ್ಕಾರಿ ಶಾಲೆಗಳು ಹಾಗೂ 1500 ಪದವಿಪೂರ್ವ ಕಾಲೇಜುಗಳ ಕೊಠಡಿ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದ, ಒಟ್ಟು 992.16 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

2022-23ನೇ ಸಾಲಿನ ಯು-ಡೈಸ್/ಸ್ಯಾಟ್ಸ್, ಅಂಕಿಅಂಶಗಳ ಪ್ರಕಾರ ತುರ್ತಾಗಿ 6,601 ಸರ್ಕಾರಿ ಶಾಲಾ ಕೊಠಡಿಗಳ ಅವಶ್ಯಕತೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ 3616 ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಿಗಾಗಿ ತಲಾ 13.90 ಲಕ್ಷ, ಪ್ರೌಢಶಾಲಾ ಕೊಠಡಿಗಳಿಗೆ 16.40 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಲಾಗಿತ್ತು.

ಇಲಾಖೆಯ ಈ ಪ್ರಸ್ತಾವನೆಗೆ ಅನುಮೋದನೆ ನೀಡಿರುವ ಸರ್ಕಾರ ಪ್ರಸಕ್ತ ಸಾಲಿನಲ್ಲಿ 6,601 ಹೆಚ್ಚುವರಿ ಕೊಠಡಿ ಹಾಗೂ 1500 ಪದವಿಪೂರ್ವ ಕಾಲೇಜುಗಳ ಕೊಠಡಿಗಳಿಗೆ ಅನುಮೋದನೆ ನೀಡಲಾಗಿದೆ.

ಕೊಠಡಿ ಕಾಮಗಾರಿಗಳಿಗೆ ತಗಲುವ ವೆಚ್ಚವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯ ಬಂಡವಾಳ ವೆಚ್ಚ, ವಿಶೇಷ ಅಭಿವೃದ್ದಿ ಯೋಜನೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಮತ್ತು ಜಿಲ್ಲಾ ಖನಿಜಗಳಡಿ ಭರಿಸಲು ಅನುಮೋದನೆ ನೀಡಲಾಗಿದೆ.

ಡಿಸೆಂಬರ್ ತಿಂಗಳ ಅಂತ್ಯದೊಳಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಭರಿಸಲಾದ ವೆಚ್ಚಕ್ಕೆ ಶಾಲಾ ಕಾಮಗಾರಿಗಳಿಗೆ ಸಂಬಂಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಕಾಲೇಜು ಕಾಮಗಾರಿಗಳಿಗೆ ಸಂಬಂಸಿದಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಕ್ತ ಲೆಕ್ಕಪತ್ರಗಳನ್ನು ಇಡತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಗಳ ವಿವರಗಳನ್ನು ತ್ರೈಮಾಸಿಕವಾರು ಸರ್ಕಾರಕ್ಕೆ ಸಲ್ಲಿಸಬೇಕು. ಕಾಲಮಿತಿಯೊಳಗೆ ಕಾಮಗಾರಿಯನ್ನು ಮುಗಿಸುವುದು, ಕಾಮಗಾರಿ ಪ್ರಾರಂಭಕ್ಕೂ ಮೊದಲು ವಾಸ್ತವ ಹಾಗೂ ನಂತರದ ಫೆÇೀಟೋಗಳನ್ನು ಇಲಾಖೆಯ ಸ್ಯಾಟ್ಸ್ ತಂತ್ರಾಂಶದಲ್ಲಿ ಅಳವಡಿಸಬೇಕು. ಖರೀದಿ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹ ಪಾರದರ್ಶಕ ಕಾಯ್ದೆ 1999ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷ ಅಕಾರಿ ಬಿ.ಎಚ್.ಗಿರಿಜಾ ಸೂಚಿಸಿದ್ದಾರೆ.

ವೆಚ್ಚದ ವಿವರಗಳನ್ನು ಕಡ್ಡಾಯವಾಗಿ ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಮ್ ತಂತ್ರಾಂಶದಲ್ಲಿ ಸಂಗ್ರಹಿಸಿಡಬೇಕು. ಪ್ರತಿಯೊಂದು ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Articles You Might Like

Share This Article