ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿ ತಂದೆ-ಮಗಳು ಸೇರಿ ಮೂವರ ಸಾವು

Social Share

ಶಿರಾ, ಆ.20- ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತರೂರು ಗೇಟ್ ಬಳಿ ತಡರಾತ್ರಿ ನಡೆದಿದೆ. ತಾಲ್ಲೂಕಿನ ಕಡವಿಗೆರೆ ಗ್ರಾಮದ ನಿವಾಸಿ ಅವಿನಾಶ್ (28) ಮತ್ತು ಅವರ ಮಗಳು ಪ್ರಣಂತಿ (5)ಹಾಗೂ ಅವಿನಾಶ್ ಸಂಬಂಕರ ಮಗಳು ಸೌಖ್ಯ (5) ಮೃತಪಟ್ಟ ದುರ್ದೈವಿಗಳು.

ಕೆಲಸದ ನಿಮಿತ್ತ ತರೂರಿನಿಂದ ತುಮಕೂರಿಗೆ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ ತರೂರು ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಸೌಖ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಸುದ್ದಿ ತಿಳಿಯುತ್ತಿದ್ದಂತೆ ಕಳ್ಳಂಬೆಳ್ಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗಗೊಂಡಿದ್ದಾರೆ.

Articles You Might Like

Share This Article