ಅಪಘಾತಗಳ ನಗರಿ ಎಂಬ ಕುಖ್ಯಾತಿ ಪಾತ್ರವಾದ ಸಿಲಿಕಾನ್‍ಸಿಟಿ ಬೆಂಗಳೂರು

Social Share

ಬೆಂಗಳೂರು,ಡಿ.3- ಸಿಲಿಕಾನ್ ಸಿಟಿ, ಹೈಟೆಕ್ ಸಿಟಿ, ನಿವೃತ್ತರ ಸ್ವರ್ಗ ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಇದೀಗ ಅಪಘಾತಗಳ ನಗರಿ ಎಂಬ ಕುಖ್ಯಾತಿಗೂ ಗುರಿಯಾಗಿದೆ. ಖಾಸಗಿ ವಿಮಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಪ್ರತಿವರ್ಷ ಬೆಂಗಳೂರಿನಲ್ಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಆಕ್ಸಿಡೆಂಟ್ ಹೆಚ್ಚು ಆಗಲು ಕಾರಣವೇನು..? ಯಾವೆಲ್ಲಾ ಏರಿಯಾಗಳು ಆಕ್ಸಿಡೆಂಟ್ ಆಗೋ ಹಾಟ್ ಸ್ಪಾಟ್ ಗಳು..? ಹೆಚ್ಚು ರಸ್ತೆ ಅಫಘಾತಕ್ಕೆ ಎಡೆ ಮಾಡಿಕೊಡ್ತಿರೋರು ಯಾರು ಎನ್ನುವ ಅಂಕಿ ಅಂಶಗಳನ್ನು ಖಾಸಗಿ ವಿಮಾ ಸಂಸ್ಥೆ ಬಿಡುಗಡೆ ಮಾಡಿದೆ.

ದೇಶದ ಆಯ್ದ ಮೆಟ್ರೋ ಸಿಟಿಗಳಲ್ಲಿ ಸರ್ವೇ ನಡೆಸಿರುವ ವಿಮಾ ಕಂಪನಿ ದೇಶದ ಉಳಿದ ನಗರಗಳಿಗೆ ಹೊಲಿಸಿದರೆ ಬೆಂಗಳೂರು ಡೇಂಜರ್ ಎಂಬ ಮಾಹಿತಿ ನೀಡಿದೆ. ಈ ಅಂಕಿ ಅಂಶಗಳನ್ನು ನೋಡಿದರೆ ಬೆಂಗಳೂರಿನಲ್ಲಿ ಪ್ರತಿನಿತ್ಯ ಸವಾರಿ ಮಾಡುವ ವಾಹನ ಸವಾರರು ಬೆಚ್ಚಿ ಬೀಳುವುದಂತೂ ಗ್ಯಾರಂಟಿ.

ಪದೇ ಪದೇ ಹೈಟೆನ್ಷನ್ ಅವಘಡ : ನಿವಾಸಿಗಳಿಗೆ ಬೆಸ್ಕಾಂ ನೋಟೀಸ್

ಬೆಂಗಳೂರಿನಲ್ಲಿ ಅತಿ ಹೆಚ್ಚು ಆಕ್ಸಿಡೆಂಟ್ ಆಗುವ ಪ್ರದೇಶಗಳು ಯಾವುದು. ಅಪಘಾತ ಸಂಭವಿಸಲು ಪ್ರಮುಖ ಕಾರಣವೇನು, ಯಾವ ಪ್ರಾಣಿಗಳಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ ಎನ್ನುವ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ.

ಅತಿ ಹೆಚ್ಚು ಆಕ್ಸಿಡೆಂಟ್ ಆಗುವ ಏರಿಯಾಗಳು:
ಬೊಮ್ಮನಹಳ್ಳಿ
ಕಲ್ಯಾಣನಗರ
ಕೋರಮಂಗಲ 6ನೇ ಬ್ಲಾಕ್
ಬನ್ನೇರುಘಟ್ಟ ರಸ್ತೆ
ಹೂಡಿ
ಈ ಮೇಲಿನ ಪ್ರದೇಶಗಳಲ್ಲೆ ಪ್ರತಿ ವರ್ಷ ಅತಿ ಹೆಚ್ಚು ಆಕ್ಸಿಡೆಂಟ್‍ಗಳು ಆಗುತ್ತಿವೆಯಂತೆ.

ಆಕ್ಸಿಡೆಂಟ್ ಆಗೋಕೆ ಪ್ರಮುಖ ಕಾರಣಗಳು:
ಇತರೆ ಚಾಲಕ/ವಾಹನ ಸವಾರರಿಂದ
ಪ್ರಾಣಿಗಳಿಂದ
ಗುಂಡಿಗಳಿಂದ
ರ್ಯಾಷ್ ಡ್ರೈವಿಂಗ್‍ನಿಂದ
ಹಾಗೂ ಕುಡಿದು ವಾಹನ ಚಲಾಯಿಸುತ್ತಿರುವುದೆ ಅಪಘಾತಗಳು ಹೆಚ್ಚಾಗಲು ಪ್ರಮುಖ ಕಾರಣಗಳು.

ಬೀದಿ ನಾಯಿಗಳ ಹಾವಳಿ: ವರದಿಯಲ್ಲಿ ಹಸು, ಇಲಿ, ಕೋತಿ, ಹಂದಿ ಮತ್ತಿತರ ಪ್ರಾಣಿಗಳಿಂದಲೂ ಅಪಘಾತಗಳು ಸಂಭವಿಸುತ್ತಿವೆ ಎಂಬ ಮಾಹಿತಿ ನೀಡಲಾಗಿದೆ, ಅದರಲ್ಲೂ ಬೀದಿ ನಾಯಿಗಳಿಂದಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದೆಯಂತೆ.

ಅಪಘಾತಗಳು ಹೆಚ್ಚಾಗಲು ಬೀದಿ ನಾಯಿಗಳು ಮೊದಲ ಕಾರಣವಾದರೆ, ಎರಡನೆ ಸ್ಥಾನದಲ್ಲಿರೋದು ಹಸುಗಳು ಹಾಗೂ ಇಲಿಗಳು ಮೂರನೇ ಸ್ಥಾನ ಪಡೆದುಕೊಂಡಿರುವುದು ಕಂಡು ಬಂದಿದೆ.

ಭಾರತ್ ಜೋಡೊ ಯಾತ್ರೆ : ರಾಹುಲ್‍ಗೆ ಮತ್ತೆ ಹೈಕೋರ್ಟ್ ನೋಟಿಸ್

ಬೆಂಗಳೂರಿಗೆ ಮೂರನೇ ಸ್ಥಾನ: ಪ್ರಾಣಿಗಳಿಂದ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ನಗರಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿದೆ. ಪ್ರಾಣಿಗಳ ಕಾಟದಿಂದ ಅಪಘಾತ ಹೆಚ್ಚಾಗುವ ನಗರದಲ್ಲಿ ಚೆನ್ನೈ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ದೆಹಲಿ ಎರಡನೆ ಸ್ಥಾನದಲ್ಲಿರುವುದು ವರದಿಯಲ್ಲಿ ಬಹಿರಂಗಗೊಂಡಿದೆ.

ಪ್ರಾಣಿಗಳಿಂದ ಸಂಭವಿಸುವ ಅಪಘಾತಗಳ ಪ್ರಮಾಣ
ನಾಯಿಯಿಂದ ಶೇ. 58.43
ಇಲಿಯಿಂದ ಶೇ.11.63
ಹಸುಗಳಿಂದ ಶೇ.25.44
ಕೋತಿಗಳಿಂದ ಶೇ. 2.33
ಹಂದಿಗಳಿಂದ ಶೇ.1.82
ಇತರೆ ಪ್ರಾಣಿಗಳು ಶೇ. 0.36 ರಷ್ಟಿದೆ.

accident, zone, bangalore,

Articles You Might Like

Share This Article