ಖ್ಯಾತ ಹಿರಿಯ ನಟ ಕಾಸಿನಾಧುನಿ ವಿಶ್ವನಾಥ್ ಇನ್ನಿಲ್ಲ

Social Share

ಹೈದರಾಬಾದ್, ಫೆ.3 – ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತ ಹಾಗೂ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ ,ನಿದೇರ್ಶಕ ,ನಟ ಕಾಸಿನಾಧುನಿ ವಿಶ್ವನಾಥ್ (92)ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲ ಸಮಯದಿಂದ ಅಸ್ವಸ್ಥರಾಗಿದ್ದ ವಿಶ್ವನಾಥ್ ಅವರು ಇತ್ತೀಚೆಗೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ‘ಕಲಾತಪಸ್ವಿ’ ಎಂದೇ ಜನಪ್ರಿಯರಾಗಿದ್ದ ವಿಶ್ವನಾಥ್ ಅವರು ಫೆಬ್ರವರಿ 1930 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು.ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಸಹ ಪ್ರಮುಖ ಹೆಸರು ಪಡೆದಿದ್ದರು.

ಕಳೆದ 2016ನೆ ಸಾಲಿನ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದರು ಸಾಮಾನ್ಯ ಕಥೆಯನ್ನು ಆಯ್ದುಕೊಂಡು ಶ್ರೇಷ್ಠ ಚಿತ್ರಗಳನ್ನು ನೀಡುತ್ತಿದ್ದರು ಅದ್ಭುತ ಪ್ರತಿಭೆಯಿಂದ ಬೆಳ್ಳಿತೆರೆಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಸೌಂಡ್ ಆರ್ಟಿಸ್ಟ್ ಆಗಿ ಚಿತ್ರರಂಗದಲ್ಲಿ ಪಯಣ ಆರಂಭಿಸಿದ ವಿಶ್ವನಾಥ್, ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ಸಪ್ತಪದಿ ಕಾಮ್ಚೋರ್, ಸಂಜೋಗ್ ಮುಂತಾದ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಈ ಬಾರಿ ಏರ್ ಷೋದ ಪ್ರಮುಖ ಆಕರ್ಷಣೆಯಾಗಲಿದೆ ತೇಜಸ್

1965 ರಲ್ಲಿ ಆತ್ಮ ಗೌರವಂ ಚಿತ್ರದ ಮೂಲಕ ನಿರ್ದೇಶಕರಾಗಿ ತೆಲಗು ಚಿತ್ರರಂಗ ಪ್ರವೇಶ ಮಾಡಿದರು, ಇದರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದ್ದರು, ಅತ್ಯುತ್ತಮ ಚಲನಚಿತ್ರಕ್ಕಾಗಿ ನಂದಿ ಪ್ರಶಸ್ತಿ ಲಭಿಸಿತ್ತು. ಸೂಪರ್ ಹಿಟ್ ಚಿತ್ರಗಳಾದ ಚೆಲ್ಲೇಲಿ ಕಾಪುರಂ, ಓ ಸೀತಾ ಕಥೆ, ಜೀವನ ಜ್ಯೋತಿ ಪಾಂಡುರಂಗಡು, ನರಸಿಂಹ ನಾಯ್ಡು,

ಲಕ್ಷ್ಮೀ ನರಸಿಂಹ ಮತ್ತು ಸೀಮಸಿಂಹಂ, ಕುರುತಿಪುನಲï, ಕಕ್ಕೈ ಸಿರಗಿನೀಳೆ ಮತ್ತು ಬಗವತಿ ಸೇರಿದಮತೆ ಆನೇಕ ಚಿತ್ರಗಳನ್ನು ತೆರೆಗೆ ತಂದು ಜನಮಾನಸದಲ್ಲಿ ಅಚ್ಚಳಿಯದ ಚಾಪು ಮೂಡಿಸಿದರು.ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ,ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ,ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

#Acclaimed, #Tollywood, #director, #actor, #KViswanath, #passesaway,

Articles You Might Like

Share This Article