ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಯುವತಿ ಆತ್ಮಹತ್ಯೆ

Spread the love

Suicide-01

ಕೊಲ್ಲಮ್, ನ.30- ಸ್ವಯಂಕೃತ ಅಪರಾಧದಿಂದ ಪಾಪಪ್ರಜ್ಞೆಗೆ ಒಳಗಾದ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ಕೇರಳದ ಕೊಲ್ಲಮ್ ಜಿಲ್ಲೆಯಲ್ಲಿ ನಡೆದಿದೆ. ಕೊಲ್ಲಮ್ ಜಿಲ್ಲೆಯ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ರಾಖಿ ಕೃಷ್ಣ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಈಕೆ ಸೆಮಿಸ್ಟರ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವೇಳೆ ಪ್ರಾಧ್ಯಾಪಕರ ಕೈಗೆ ಸಿಕ್ಕಿ ಬಿದ್ದಿದ್ದು, ಅವಳನ್ನು ನಕಲು ನಿಯಂತ್ರಣ ದಳದ ವಶಕ್ಕೆ ಒಪ್ಪಿಸಲಾಗಿತ್ತು.
ಈ ವೇಳೆ ನಕಲು ನಿಯಂತ್ರಣ ದಳದವರು ರಾಖಿಗೆ ಪೋಷಕರನ್ನು ಕಾಲೇಜಿಗೆ ಕರೆಸುವಂತೆ ಒತ್ತಡ ಹೇರಿದ್ದಾರೆ. ಆಗ 12 ಗಂಟೆ ಸುಮಾರಿಗೆ ಪೋಷಕರನ್ನು ಕರೆತರಲೆಂದು ಆಕೆ ಕಾಲೇಜು ತೊರೆದಿದ್ದಾಳೆ.

ಆದರೆ ರಾಖಿ ಮನೆಗೆ ತಲುಪಲಿಲ್ಲ ಎನ್ನುವುದು ಅರಿತ ಕಾಲೇಜು ಸಿಬ್ಬಂದಿ ಆಕೆಯನ್ನು ಎಲ್ಲೆಡೆ ಹುಡುಕಿದ್ದು ಕಡೆಗೆ ಯುವತಿಯ ಶವ ರೈಲ್ವೆ ಹಳಿ ಮೇಲೆ ಸಿಕ್ಕಿರುವುದು ತಿಳಿದಿದೆ. ತಕ್ಷಣ ಕಾಲೇಜು ಪ್ರಾಧ್ಯಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಯುವತಿಯ ಶವವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Facebook Comments

Sri Raghav

Admin