ಅಚಂತಾ ಶರತ್ ಕಮಲ್‍ಗೆ ಖೇಲ್ ರತ್ನ ಪ್ರಶಸ್ತಿ

Social Share

ನವದೆಹಲಿ, ನ. 15- ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ನೀಡುವ ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಹಾಗೂ ಅರ್ಜುನ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ನವೆಂಬರ್ 30 ರಂದು ಕೇಂದ್ರ ಸರ್ಕಾರವು ಪ್ರಶಸ್ತಿ ಪ್ರದಾನ ಮಾಡಲಿದೆ.

ಟೇಬಲ್ ಟೆನ್ನಿಸ್ನ ಧ್ರುವತಾರೆ ಅಚಂತಾ ಶರತ್ ಅವರು ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರೆ, ಮಹಿಳಾ ಬಾಕ್ಸರ್ ನಿಕಿತಾ ಜಾರನ್, ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್, ಚೆಸ್ ಮಾಸ್ಟರ್ ಪಿ.ಪರಂಗನಂದ ಸೇರಿದಂತೆ 25 ಮಂದಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ.

ಮಾಜಿ ಕ್ರಿಕೆಟಿಗ ದಿನೇಶ್ ಜವಹಾರ್‍ಲಾಡ್ಡ್ ಹಾಗೂ ಖ್ಯಾತ ಫುಟ್ಬಾಲ್ ಆಟಗಾರ ಬಿಮಲ್ ಪ್ರಪುಲ್ಲಾ ಗೋಶ್ ಹಾಗೂ ಕುಸ್ತಿಪಟು ಸುಜಿತ್ ಮಾನ್ ಅವರು ಜೀವಮಾನ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸ್ಯಾಂಡಲ್‍ವುಡ್ ನಿರ್ದೇಶಕ ಮುರಳಿಕೃಷ್ಣ ವಿಧಿವಶ

ಪ್ರಶಸ್ತಿಗಳ ವಿವರ:
ಖೇಲ್ ರತ್ನ ಪ್ರಶಸ್ತಿ:
ಶರತ್ ಕಮಲ್ ಅಚಂತಾ (ಟೇಬಲ್ ಟೆನಿಸ)

ಅರ್ಜುನ ಪ್ರಶಸ್ತಿ:
ಸೀಮಾ ಪುನಿಯಾ (ಅಥ್ಲೆಟಿP್ಸï), ಎಲ್ದೋಸ್ ಪಾಲ್ (ಅಥ್ಲೆಟಿ), ಅವಿನಾಶ್ ಮುಕುಂದ್ ಸೇಬಲ್ (ಅಥ್ಲೆಟಿ), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್), ಪ್ರಣಯ್ ಎಚ ಎಸ್ (ಬ್ಯಾಡ್ಮಿಂಟನ್), ಅಮಿತ್ (ಬಾಕ್ಸಿಂಗ್), ನಿಖತ್ ಜರೀನ್ (ಬಾಕ್ಸಿಂಗ್), ಭಕ್ತಿ ಪ್ರದೀಪ್ ಕುಲಕರ್ಣಿ (ಚೆಸ್), ರ್ಆ ಪ್ರಗ್ನಾನಂದಾ (ಚೆಸ್), ಡೀಪ್ ಗ್ರೇಸ್ ಎಕ್ಕಾ (ಹಾಕಿ), ಶುಶೀಲಾ ದೇವಿ (ಜೂಡೋ), ಸಾಕ್ಷಿ ಕುಮಾರಿ (ಕಬಡ್ಡಿ), ನಯನ್ ಮೋನಿ ಸೈಕಿಯಾ (ಲಾನ್ ಬೌಲ್),

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ಸಾರ್ಗ ಕೈಲಾಸ್ ಓವಲ್ರ್ಕ (ಮಲ್ಲಖಾಂಬ್), ಎಲವೆನಿಲ್ ವಲರಿವನ್ (ಶೂಟಿಂಗ್), ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್), ಶ್ರೀಜಾ ಅಕುಲಾ (ಟೇಬಲ್ ಟೆನಿಸ್), ವಿಕಾಸ್ ಠಾಕೂರ್ (ವೇಟ್ ಲಿಫ್ಟಿಂಗ್), ಅಂಶು (ಕುಸ್ತಿ), ಸರಿತಾ (ಕುಸ್ತಿ), ಪರ್ವೀನ್ (ವುಶು), ಮಾನಸಿ ಗಿರೀಶ್ಚಂದ್ರ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್), ತರುಣ್ ನ್ (ಪ್ಯಾರಾ ಬ್ಯಾಡ್ಮಿಂಟನ್), ಸ್ವಪ್ನಿಲ್ ಸಂಜಯ್ ಪಾಟೀಲ್ (ಪ್ಯಾರಾ). ಈಜು), ಜೆರ್ಲಿನ್ ಅನಿಕಾ ಜೆ (ಕಿವುಡ ಬ್ಯಾಡ್ಮಿಂಟನ್).

ಕ್ರೀಡಾ ಅಸೋಸಿಯೇಷನ್‍ಗಳು ಸಲ್ಲಿಸಿದ ಪಟ್ಟಿಯ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು ವರ್ಗೀಕರಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ವರದಿ ತಿಳಿಸಿದೆ.

ಕೇಂದ್ರ ಕ್ರೀಡಾ ಸಚಿವಾಲಯದಿಂದ ಪ್ರಶಸ್ತಿ ಪಟ್ಟಿಯು ಹೊರಬಂದಿದ್ದು, ನವೆಂಬರ್ 30 ರಂದು ರಾಷ್ಟ್ರಪತಿಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Articles You Might Like

Share This Article