ಬೆಂಗಳೂರು,ಏ.22- ಬೆಂಗಳೂರಿನಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ್ದ ವಿಂಗ್ ಕಮಾಂಡರ್ ವಿರುದ್ಧ ಪ್ರಕರಣ ದಾಖ ಲಾಗಿದ್ದು, ಆತ ಪ. ಬಂಗಾಳಕ್ಕೆ ಪರಾರಿಯಾಗಿದ್ದಾನೆ. ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲ್ಲೆಗೆ ಒಳಗಾದ ವ್ಯಕ್ತಿ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ವಿಂಗ್ ಕಮಾಂಡ್ ಶೀಲಾದಿತ್ಯಬೋಸ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ತಲೆ ಮರೆಸಿಕೊಂಡಿರುವುದರಿಂದ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರ ಹತ್ಯೆ ಪ್ರಕರಣದಲ್ಲಿ ಪತ್ನಿ ಪಲ್ಲವಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿದೆ ಎಂದರು. ಕೊಲೆ ನಾನೇ ಮಾಡಿದ್ದು ಎಂದು ಓಂಪ್ರಕಾಶ್‌ರವರ ಪತ್ನಿ ಒಪ್ಪಿಕೊಂಡಿದ್ದಾರೆ.
ಕೊಲೆಯ ಉದ್ದೇಶ ಸೇರಿದಂತೆ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿಗೆ ವಹಿಸಲಾಗಿದೆ. ಓಂಪ್ರಕಾಶ್‌ರವರು ಹಿರಿಯ ಅಧಿಕಾರಿಯಾಗಿದ್ದರು. ಇದೊಂದು ಸೂಕ್ಷ್ಮ ಪ್ರಕರಣ. ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಾರೆ ಎಂದು ಹೇಳಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-06-2025)
- ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವಸತಿ ಶಾಲೆ ಆರಂಭ
- ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಿಎಂ ಪರದಾಡುತ್ತಿದ್ದಾರೆ : ವಿಜಯೇಂದ್ರ ವ್ಯಂಗ್ಯ
- ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಇಬ್ಬರು ಮನಃಶಾಸ್ತ್ರಜ್ಞರ ಬಂಧನ
- ವಿಮಾನ ದುರಂತ ಅವಶೇಷಗಳಡಿ ಮತ್ತೊಂದು ಶವ ಪತ್ತೆ