ಬೆಂಗಳೂರು, ಆ.13- ಉದಯೋನ್ಮುಖ ನಟನೊಬ್ಬನನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ.ಈತ ಇನ್ಸ್ಟ್ರಾಗ್ರಾಂನಲ್ಲಿ ಮಿಸ್ಟರ್ ಭೀಮರಾವ್ ಎಂಬ ಸಿನಿಮಾ ಮಾಡುವುದಾಗಿ ಪೋಸ್ಟ್ ಹಾಕಿಕೊಂಡಿದ್ದ.
ಈತ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರೊಂದಿಗೆ ಇಬ್ಬರು ಯುವತಿಯರ ಹೆಸರು ಬಳಕೆ ಮಾಡಿಕೊಂಡು ಚಾಟ್ ಮಾಡಿದ್ದ. ನಂತರ ಉದ್ಯಮಿ ಬಳಿಗೆ ತೆರಳಿದ ಆತ ನಾವು ಕ್ರೈಮ್ ಪೊಲೀಸರು ಎಂದು ಹೇಳಿ ಹೆದರಿಸಿ ಕೆಲ ದಿನಗಳ ಹಿಂದೆ ನೀವು ಯುವತಿಯರ ಜತೆಗೆ ಅಶ್ಲೀಲವಾಗಿ ಚಾಟ್ ಮಾಡಿದ್ದೀರ, ನಿಮ್ಮ ಮೇಲೆ ಕೇಸ್ ಹಾಕಲಾಗಿದೆ. ಈ ಕೇಸ್ ಕೈಬಿಡಬೇಕಾದರೆ ಹಣ ನೀಡುವಂತೆ ಒತ್ತಾಯ ಮಾಡಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಫಿಟ್ನೆಸ್ ಶಾಪ್ ನಡೆಸುತ್ತಿದ್ದ ಆರೋಪಿ ಉದ್ಯಮಿಯೊಬ್ಬರಿಗೆ ತಾವು ಪಾಲದಾರರಾಗಿ ಎಂದು ಒತ್ತಾಯಿಸುತ್ತಿದ್ದ. ಅವರ ನಿರಾಕರಿಸಿದ ನಂತರ ಮೊದಲು 50 ಸಾವಿರ ಹಣ ಪಡೆದು ನಂತರ ಬ್ಯಾಂಕ್ನಿಂದ 3 ಲಕ್ಷ ಹಣ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಈತ ಒಟ್ಟು 14 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದ.
ಈತನ ಹಣದ ದಾಹದಿಂದ ಬೇಸತ್ತ ಸಂತ್ರಸ್ತ ಉದ್ಯಮಿ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ಉದ್ಯಮಿ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಯುವರಾಜ್ ಹಾಗೂ ಉದ್ಯಮಿಯೊಂದಿಗೆ ಚಾಟಿಂಗ್ ಮಾಡಿದ್ದ ಯುವತಿಯನ್ನು ಬಂಸಿದ್ದಾರೆ. ಬಂತ ಆರೋಪಿ ಭೀಮರಾವ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದ ಎಂದು ಗೊತ್ತಾಗಿದೆ.