BIG NEWS : ನಟ ದರ್ಶನ್ ವಿರುದ್ಧ ದೂರು ದಾಖಲು

Social Share

ಬೆಂಗಳೂರು,ಆ.9- ಹಣಕಾಸಿನ ತೊಂದರೆಯಿಂದಾಗಿ ಚಿತ್ರೀಕರಣ ತಡವಾಗಿದ್ದಕ್ಕೆ ನಿರ್ಮಾಪಕನಿಗೆ ಖ್ಯಾತ ನಟರೊಬ್ಬರು ಬೆದರಿಕೆ ಹಾಕಿದ್ದು, ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್‍ಸಿಆರ್ ದಾಖಲಾಗಿದೆ.

ನಿರ್ಮಾಪಕ ಭರತ್ ವಿಷ್ಣುಕಾಂತ್ ಎಂಬುವರು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎಂಬ ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಧ್ರುವನ್ ಎಂಬುವರು ನಾಯಕ ನಟನಾಗಿ ನಟಿಸುತ್ತಿದ್ದಾರೆ.

ಹಣಕಾಸಿನ ತೊಂದರೆಯಿಂದಾಗಿ ಭರತ್ ಅವರು ಈ ಚಿತ್ರದ ಚಿತ್ರೀಕರಣವನ್ನು ತಡವಾಗಿ ಮಾಡುತ್ತಿರುವುದರಿಂದ ಬೇಸರಗೊಂಡ ಧ್ರುವನ್ ಈ ಬಗ್ಗೆ ನಟ ದರ್ಶನ್ ಅವರ ಬಳಿ ಹೋಗಿ ಹೇಳಿಕೊಂಡು ಅವರಿಂದ ಭರತ್‍ಗೆ ಫೋನ್ ಮಾಡಿಸಿದ್ದಾರೆ.

ದರ್ಶನ್ ಅವರು ಕರೆ ಮಾಡಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಭರತ್ ಅವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದರ್ಶನ್ ಅವರು ಧ್ರುವನ್ ಮೊಬೈಲ್‍ನಿಂದಲೇ ಭರತ್‍ಗೆ ಕರೆ ಮಾಡಿರುವುದು ಗೊತ್ತಾಗಿದೆ.

Articles You Might Like

Share This Article