ನಟ ಕಮಲ್ ರಶೀದ್ ಖಾನ್ ಬಂಧನ

Social Share

ಮುಂಬೈ, ಆ. 30 – ಕೆಆರ್‍ಕೆ ಎಂದು ಜನಪ್ರಿಯವಾಗಿರುವ ನಟ ಮತ್ತು ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅವರು ಮುಂಬೈ ಪೊಲೀಸರು ಅವರನ್ನು ಬಂಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದುಬೈನಿಂದ ಆಗಮಿಸಿದ ಖಾನ್ ಅವರನ್ನು ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಯಿತು ಎಂದು ಮಲಾಡ್ ಪೊಲೀಸ್ ಠಾಣೆಯ ಅಕಾರಿ ತಿಳಿಸಿದ್ದಾರೆ.ಅವಹೇಳನಕಾರಿ ಟ್ವೀಟ್ ಸಂಬಂಧಿಸಿದಂತೆ ಬಂದಿಸಲಾಗಿದ್ದು ಆದರೆ ಟ್ವೀಟ್‍ನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಈ ಹಿಂದೆ ರಶೀದ್ ಖಾನ್ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.ಕಳೆದ 2020 ರಲ್ಲಿ ಅವರ ವಿರುದ್ಧ ಐಪಿಸಿ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 500 (ಮಾನನಷ್ಟ ಶಿಕ್ಷೆ), ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ಕಳೆದ 2016 ರಲ್ಲಿಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಚಲನಚಿತ್ರದ ಪರವಾಗಿ ಟ್ವೀಟ್ ಮಾಡಲು ತನಗೆ ಹಣ ನೀಡಲಾಗಿದೆ ಎಂದು ಖಾನ್ ಹೇಳಿಕೊಂಡಿದ್ದರು.

Articles You Might Like

Share This Article