ಜಮ್ಮು,ಜ.24- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಪಾಲ್ಗೊಂಡಿದ್ದರು.
ಇಂದು ಬೆಳಗ್ಗೆ ಜಮ್ಮುವಿನ ನಗ್ರೋಟಾದ ಗ್ಯಾರಿಸನ್ ಪಟ್ಟಣದಿಂದ ಭಾರೀ ಶೀಥ ವಾತಾವರಣದ ನಡುವೆ ಪುನರಾರಂಭಗೊಂಡ ಯಾತ್ರೆಗೆ ರಾಜಕಾರಣಿಯಾಗಿ ಬದಲಾಗಿರುವ ಉರ್ಮಿಳಾ ಮಾತೋಂಡ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
1990ರ ದಶಕದಲ್ಲಿ ಜನಪ್ರಿಯರಾಗಿದ್ದ ಮಾತೋಂಡ್ಕರ್, 2019 ರ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಆರು ತಿಂಗಳ ಬಳಿಕ 2020 ರಲ್ಲಿ ಶಿವಸೇನೆಗೆ ಸೇರಿದ್ದರು. ಇಂದು ಕೆನೆ ಬಣ್ಣದ ಸಾಂಪ್ರದಾಯಿಕ ಕಾಶ್ಮೀರ ಫೆರಾನ್ (ಸಡಿಲವಾದ ಗೌನ್) ಮತ್ತು ಬೀನಿ ಕ್ಯಾಪ್ ಧರಿಸಿ ಮಾತೋಂಡ್ಕರ್ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಹಾದಿಯುದ್ಧಕ್ಕೂ ರಾಹುಲ್ ಗಾಂಧಿಯೊಂದಿಗೆ ಸಂವಾದ ನಡೆಸುತ್ತಿರುವುದು ಕಂಡು ಬಂತು.
ಪಿಎಸ್ಐ ಪರೀಕ್ಷಾ ಅಕ್ರಮ ಆರೋಪಿಯಿಂದ ವಿಡಿಯೋ ಬಾಂಬ್..!
ಜೊತೆಗೆ ಖ್ಯಾತ ಲೇಖಕ ಪೆರುಮಾಳ್ ಮುರುಗನ್, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಹಿಂದಿನ ಅಧ್ಯಕ್ಷ ಜಿ.ಎ.ಮಿರ್, ಮಾಜಿ ಸಚಿವ ಅಬ್ದುಲ್ ಹಮೀದ್ ಕರ್ರಾ ಸೇರಿದಂತೆ ನೂರಾರು ಜನ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹೆಜ್ಜೆ ಹಾಕಿದರು.
ತಮಿಳುನಾಡಿನ ಕನ್ಯಾಕುಮಾರಿಯಿಂದ ಸೆಪ್ಟಂಬರ್ 7ರಂದು ಆರಂಭವಾದ ಯಾತ್ರೆ ಕಳೆದ ಗುರುವಾರ ಪಂಜಾಬ್ ಮೂಲಕ ಜಮ್ಮು-ಕಾಶ್ಮೀರ ಪ್ರವೇಶಿಸಿದೆ. ಮಾರ್ಚ್ 30 ರಂದು ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭವ್ಯ ರ್ಯಾಲಿಯೊಂದಿಗೆ ಶ್ರೀನಗರದಲ್ಲಿ ಸಮಾರೂಪಗೊಳ್ಳಲಿದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ನವಾಂಗ್ ರಿಗ್ಜಿನ್ ಜೋರಾ ನೇತೃತ್ವದ 65 ಸದಸ್ಯರ ನಿಯೋಗ ರಾಹುಲ್ಗಾಂಧಿಯವರೊಂದಿಗೆ ಸಮಾಲೋಚನೆ ನಡೆಸಿದ್ದು, ತಮ್ಮ ಜನರ ಸಮಸ್ಯೆಗಳನ್ನು ವಿವರಿಸಿದೆ ಎಂದು ನಿಯೋಗದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ
ಪ್ರಸಿದ್ಧ ಕೋಲ್-ಕಂಡೋಲಿ ದೇವಸ್ಥಾನದ ಹೊರಗೆ ಕಾಶ್ಮೀರಿ ಪಂಡಿತರ ವಲಸಿಗ ಮಹಿಳೆಯರ ಗುಂಪು, ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಹೂವಿನ ದಳಗಳನ್ನು ಹಿಡಿದು ಗಾಂಧಿಯನ್ನು ಸ್ವಾಗತಿಸಿದರು. ನಾವು ಕಾಶ್ಮೀರದಿಂದ ವಲಸೆ ಬಂದ ನಂತರ ಕಳೆದ ಮೂರು ದಶಕಗಳಿಂದ ಜಮ್ಮುವಿನಲ್ಲಿ ಅಲೆದಾಡುತ್ತಿದ್ದೇವೆ.
ಉದ್ಯೋಗ ದೊರಕಿಸಿಕೊಳ್ಳಲು ಮತ್ತು ಪುನರ್ವಸತಿಗೆ ನೆರವು ನೀಡಲು ಸಹಾಯ ಮಾಡಬೇಕು ಎಂದು ರಾಹುಲ್ಗಾಂಧಿವರಲ್ಲಿ ಮನವಿ ಮಾಡಲು ಇಲ್ಲಿಗೆ ಬಂದಿದ್ದೇವೆ ಎಂದು ಗೀತಾ ಕೌಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಹಿಳೆಯರ ಮತ ಗೆಲ್ಲಲು ರಾಜಕೀಯ ಪಕ್ಷಗಳಿಂದ ಭರ್ಜರಿ ಘೋಷಣೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ವಿಫಲವಾಗಿದೆ. ಕಾಶ್ಮೀರಿ ಪಂಡಿತರ ರಕ್ಷಣೆ ಮತ್ತು ಪುನರ್ವಸತಿಯ ಸವಾಲುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬಿಜೆಪಿ ರಾಜಕೀಯ ಮಾತ್ರ ಮಾಡುತ್ತಿದೆ, ಅದನ್ನು ಬಿಟ್ಟು ಜನಪರವಾಗಿ ನೆರವು ನೀಡಲು ವಿಫಲವಾಗಿದೆ ಎಂದು ಮಹಿಳೆಯರು ದೂರಿದ್ದಾರೆ.
Actor, Urmila Matondkar, Joins, Rahul Gandhi, Bharat Jodo Yatra, Jammu,