ಚೆನ್ನೈ, ಡಿ.11- ಬಹುಭಾಷಾ ನಟ ಶರತ್‍ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶರತ್‍ಕುಮಾರ್ ಅವರು ಡಯೇರಿಯಾದಿಂದ ಡಿಹೈ ಡ್ರೇಷನ್‍ನಿಂದ ಬಳಲುತ್ತಿದ್ದು ಅವರಿಗೆ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಾರಾ ಪತ್ನಿ ರಾಧಿಕಾ ಶರತ್‍ಕುಮಾರ್ ಹಾಗೂ ನಟಿ, ಪುತ್ರಿ ವರಲಕ್ಷ್ಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪತಿಯ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.
ಶರತ್‍ಕುಮಾರ್ ಅವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು, ಆರೆ ಇಂದು ಅವರಿಗೆ ಡಿಹೈಡ್ರೇಷನ್ ಆಗಿದ್ದರಿಂದ ತಕ್ಷಣ ಅವರನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಶರತ್‍ಕುಮಾರ್ ಅವರನ್ನು ಪರಿಕ್ಷೀಸಿದ ವೈದ್ಯರು ಇನ್ನೆರಡು ದಿನದಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಬಲವಂತದ ಮತಾಂತರ : ಪಾಕ್ ಮೌಲಾನಗಳಿಗೆ ಬ್ರಿಟನ್ ನಿಷೇಧ
ಶರತ್‍ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿ ರುವುದರಿಂದ ತಮಿಳುನಾಡಿನಲ್ಲಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ನಮ್ಮ ನೆಚ್ಚಿನ ನಟ ಬಹು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿ ದ್ದಾರೆ.
ಶರತ್‍ಕುಮಾರ್ ಅವರು ನಾಡಿಗರ್ ಸಂಘದ ಎಂಬ ರಾಜಕೀಯ ಪಕ್ಷದ ಅಧ್ಯಕ್ಷ ರಾಗಿ ಚುನಾವಣೆಯನ್ನು ಎದುರಿಸಿ ದ್ದಾರೆ.
ತಮ್ಮ ಸಹಜ ಅಭಿನಯ ದಿಂದಲೇ ಗಮನ ಸೆಳೆದಿರುವ ಶರತ್‍ಕುಮಾರ್ ಅವರು 130ಕ್ಕೂ ಚಿತ್ರಗಳಲ್ಲಿ ನಟಿಸಿದ್ದು, ಗಾಯಕ ಹಾಗೂ ನಿರ್ಮಾಪಕ, ನಿರೂಪಕರಾಗಿಯೂ ಗಮನ ಸೆಳೆದಿದ್ದಾರೆ.
ವಲಸಿಗರ ಚಲನವಲನಗಳ ಮೇಲೆ ಬಿಜೆಪಿ ಹದ್ದಿನ ಕಣ್ಣು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಾರಥಿ' ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಶರತ್‍ಕುಮಾರ್ ಮೈನಾ, ರಾಜಕುಮಾರ, ಜೇಮ್ಸ್, ಸಂತೆಯಲ್ಲಿ ನಿಂತ ಕಬೀರ, ಸೀತಾರಾಮ ಕಲ್ಯಾಣ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ
ವಾರೀಸು’ ಚಿತ್ರದಲ್ಲಿ ಶರತ್‍ಕುಮಾರ್ ನಟಿಸುತ್ತಿದ್ದಾರೆ.
Actor, Sarathkumar, Admitted, Hospital, Chennai,